ತಿರುವನಂತಪುರ: ರಾಜ್ಯದಲ್ಲಿ ಲಿಂಗ ಸಮಾನತೆಯ ಸಮವಸ್ತ್ರ ಕಾನೂನು ಜಾರಿಗೊಳಿಸುವ ಉದ್ದೇಸ ಸರ್ಕಾರಕ್ಕಿಲ್ಲ ಎಂದು ರಾಜ್ಯ ಶಿಕ್ಷಣ ಸಚಿವರು ತಿಳಿಸಿದ್ಸಾರೆ. ಇಂತಹ ಪ್ರಚಾರವನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಕೆಲವು ವಿಚಾರಗಳನ್ನು ಸರ್ಕಾರದ ವಿರುದ್ಧ ಹಣೆಯುವ ಸ್ಥಾಪಿತ ತಂತ್ರಗಳು ಇದರ ಹಿಂದಿದೆ. ಈ ಪ್ರಚಾರಗಳನ್ನು ಯಾರೂ ನಂಬಬಾರದು ಎಂದು ಸಚಿವರು ತಿರುವನಂತಪುರದಲ್ಲಿ ಹೇಳಿದ್ದಾರೆ.
ಬಾಲಕಿಯರ ಮತ್ತು ಬಾಲಕರ ಶಾಲೆಗಳನ್ನು ಸಮಮಿಶ್ರಗೊಳಿಸಲು ಮತ್ತು ಶಾಲೆಗಳಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಅಳವಡಿಸಲು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಬೇಕು. ಶಾಲಾ ಅಧಿಕಾರಿಗಳು ಮತ್ತು ಪಿ. ಟಿ. ಎ ಮತ್ತು ಸ್ಥಳೀಯಾಡಳಿತ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯು ಆ ಅರ್ಜಿಗಳನ್ನು ವಿಶ್ಲೇಷಿಸಿದ ನಂತರವೇ ಅನುಮತಿ ನೀಡಲು ಪರಿಗಣಿಸಲಾಗುತ್ತದೆ ಎಂದರು.
ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಕೆಲ ವಿಭಾಗ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇಂತಹ ಕಾರಸ್ಥಾನ, ಅಪಪ್ರಚಾರಗಳು ಸಲ್ಲದೆಂದು ಸಚಿವ ವಿ. ಶಿವಂಕುಟ್ಟಿ ಆಗ್ರಹಿಸಿದರು.
ರಾಜ್ಯದಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಹೇರುವ ನಿಲುವು ಸರ್ಕಾರಕ್ಕಿಲ್ಲ: ಸಚಿವ ಶಿವಂಕುಟ್ಟಿ
0
ಆಗಸ್ಟ್ 14, 2022





