ಹರ್ ಘರ್ ತಿರಂಗಾ: ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವೀ ಧ್ವಜಾರೋಹಣ
0
ಆಗಸ್ಟ್ 14, 2022
ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಅಂಗವಾಗಿ ಹಮ್ಮಿಕೊಳ್ಳಲಾದ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಅದ್ದೂರಿ ಪ್ರತಿಕ್ರಿಯೆ ಲಭ್ಯವಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ರಾಷ್ಟ್ರಧ್ವಜ ವಿತರಿಸಲಾಗಿದ್ದು, ಮನೆಗಳಲ್ಲಿ ಸಂಭ್ರಮದಿಂದ ಧ್ವಜಾರೋಹಣ ನಡೆಸಿದರು. ನಾನಾ ಸಂಘಟನೆಗಳ ವತಿಯಿಂದ ರಾಷ್ಟ್ರಧ್ವಜಾರೋಹಣ ನಡೆಯಿತು.
ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಕೆ.ಟಿ.ಸುಬ್ರಮಣ್ಯಂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ದೇವಸ್ಥಾನದ ಟ್ರಸ್ಟ್ ಸದಸ್ಯರಾದ ಕೆ.ಶ್ರೀಕಾಂತ್ ಗಣೇಶೋತ್ಸವ ಸಮಿತಿ ಸದಸ್ಯರು, ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತಾದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾಸರಗೋಡು ನಗರಸಭೆ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಹರಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಕುಟುಂಬಶ್ರೀ ಕಾರ್ಯಕರ್ತರಿಂದ 7000 ರಾಷ್ಟ್ರಧ್ವಜ ತಯಾರಿಸಲಾಗಿದ್ದು, ನಗರಸಭೆಯ 38 ವಾರ್ಡ್ ಗಳಲ್ಲಿ ವಿವಿಧ ಶಾಲೆ, ಮನೆಗಳಲ್ಲಿ ಧ್ವಜ ವಿತರಿಸಲಾಯಿತು. ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ ಧ್ವಜ ವಿತರಣಾ ಸಮಾರಂಭ ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷ ª, ವಕೀಲ ವಿ.ಎಂ.ಮುನೀರ್, ನಗರಸಭೆ ಉಪಾಧ್ಯಕ್ಷೆ ಶಂಸಿದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬೇಗಂ, ಸಿಯೆನ್ನಾಹನೀಫ, ನಗರಸಭೆ ಕಾರ್ಯದರ್ಶಿ ಎಸ್.ಬಿಜು, ಸದಸ್ಯ ಕಾರ್ಯದರ್ಶಿ ಸುಧೀರ್, ಸಿಡಿಎಸ್ ಉಪಾಧ್ಯಕ್ಷೆ ಶಕೀಲಾ ಮಜೀದ್, ಲೆಕ್ಕಾಧಿಕಾರಿ ಸಜಿತಾ, ಸಿಒ ಅರ್ಚನಾ ಕುಮಾರಿ ಉಪಸ್ಥಿತರಿದ್ದರು.
Tags





