ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಳೀಯ ನಿವಾಸಿಗಳ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಿರ್ಮಾಣ ಸಂಸ್ಥೆ ಯು.ಎಲ್.ಸಿ.ಸಿ. ಚರ್ಚಿಸಿ ತೆಗೆದ ತೀರ್ಮಾನಗಳು ಆಗಸ್ಟ್ 15ರೊಳಗೆ ಲಿಖಿತ ಭರವಸೆ ನೀಡಲು ನಿರ್ಧರಿಸಿದೆ. ಜೊತೆಗೆ ಭರವಸೆ ಈಡೇರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯು ಸೆ.10ರಂದು ಬೃಹತ್ ಸಮಾವೇಶದೊಂದಿಗೆ ಹೊಸ ಆಂದೋಲನ ಆರಂಭಿಸಲು ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಕಾಮಗಾರಿಗಳನ್ನು ಅವ್ಯವಸ್ಥಿತವಾಗಿ ಪೂರ್ಣಗೊಳಿಸುತ್ತಿದ್ದು, ಈ ನಡುವೆ ಜನರ ಸಮಂಜಸ ಬೇಡಿಕೆಗಳನ್ನು ನಿರಾಕರಿಸಲಾಗುತ್ತಿದೆ ಎಂದು ಸಭೆ ನಿರ್ಣಯಿಸಿತು.
ಸೆಪ್ಟೆಂಬರ್ 10 ರಂದು ಬೃಹತ್ ರ್ಯಾಲಿಯ ನಂತರ, 12 ರಿಂದ ಅನಿರ್ಧಿμÁ್ಟವಧಿ ಧರಣಿ ಸಮರ ನಡೆಸಲು ಮತ್ತು ಅಗತ್ಯವಿದ್ದಲ್ಲಿ ನಿರ್ಮಾಣ ಕಾಮಗಾರಿ ತಡೆಯುವ ಸಮರ ನಡೆಸಲು ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಾದ ಲಕ್ಷ್ಮಣ, ರಾಜೇಶ್, ರಹೀಮ್ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳಾದ ದಯಾಕರ ಮಾಡ, ಎಸ್.ಎಂ. ಬಶೀರ್, ಬಶೀರ್, ಅಶ್ರಫ್ ಕುಂಜತ್ತೂರು, ಅಬ್ದುಲ್ ರಝಾಕ್, ಅಶ್ರಫ್ ಬಡಾಜೆ, ಸಮದ್ ಕುಂಜತ್ತೂರು, ರಿಯಾಝ್ ಬಾಚಳಿಕೆ, ನಿಯಾಝ್ ಕುಂಜತ್ತೂರು ಸೇರಿದಂತೆ 30 ಮಂದಿ ಭಾಗವಹಿಸಿದ್ದರು. ಸಂಚಾಲಕ ಕುಂಞÂ್ಞ ಮೋನು ಸ್ವಾಗತಿಸಿ,ಜಬ್ಬಾರ್ ಪದವು ವಂದಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಭರವಸೆ ಈಡೇರದ ಕಾರಣ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ಮತ್ತೆ ಪ್ರತಿಭಟನೆ
0
ಆಗಸ್ಟ್ 23, 2022
Tags

.jpg)
