ಬದಿಯಡ್ಕ: ಎಡನೀರು ಪರಿಸರದಲ್ಲಿ ಜನರಿಲ್ಲದ ಮನೆಗಳಿಗೆ ತೆರಳಿ ಗುಜರಿ ವಸ್ತುಗಳನ್ನು ಹೆಕ್ಕುವ ನೆಪದಲ್ಲಿ ಭಾರೀ ಪ್ರಮಾಣದ ಬೆಲೆ ಬಾಳುವ ವಸ್ತುಗಳನ್ನು ಕದಿಯುವ ತಂಡವೊಂದು ಸಕ್ರಿಯವಾಗಿರುವುದಾಗಿ ಜನರು ದೂರಿದ್ದಾರೆ. ಭಾನುವಾರ ಐಲುಕುಂಜೆ ನಿವಾಸಿ ಚಂದ್ರಾವತಿ ಆಚಾರ್ಯ ಎಂಬವರ ಹಳೆಯ ಮನೆಯಿಂದ ಭಾರೀ ಬೆಲೆಬಾಳುವ ತಾಮ್ರದ ಮಡಕೆ ಹಾಗೂ ಪಾತ್ರೆ ಸಾಮಾಗ್ರಿಗಳು ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಐಲುಕುಂಜೆ ಎಂಬಲ್ಲಿರುವ ಮನೆಯಿಂದ ಭಾನುವಾರ ಮಧ್ಯಾಹ್ನದ ವೇಳೆ ಈ ಕಳವು ನಡೆದಿರುವುದಾಗಿ ವಿದ್ಯಾನಗರ ಪೋಲಿಸರಿಗೆ ದೂರು ನೀಡಲಾಗಿದೆ. ಕಳವು ನಡೆಯುವ ವೇಳೆ ಮನೆಯರು ಎಡನೀರಿನ ತಮ್ಮ ಹೊಸ ಮನೆಯಲ್ಲಿದ್ದು ಹಳೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಹಳೆಯ ಕಾಲದ ಸುಮಾರು 50 ಸಾವಿರ ರೂ ಬೆಲೆಬಾಳುವ ಪಾತ್ರೆ ಕಳವುಗೈಯಲಾಗಿದೆ. ಈ ಬಗ್ಗೆ ಸಮೀಪ ನಿವಾಸಿಗಳು ತಿಳಿಸಿದಾಗಲಾμÉ್ಟ ಕಳವು ಕೃತ್ಯ ಬೆಳಕಿಗೆ ಬಂದಿದೆ. ಈ ಪರಿಸರದಲ್ಲಿ ಕಳೆದ ಕೆಲವು ತಿಂಗಳಿನಿಂದ ಅಲೆಮಾರಿ ನಿವಾಸಿಗಳು ಗುಜರಿ ಹೆಕ್ಕುತ್ತಿದ್ದು ಇವರು ಈ ಮನೆಯ ಬಳಿ ಅಡ್ಡಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಊರವರು ಇಬ್ಬರು ಅಲೆಮಾರಿ ಹೆಂಗಸರನ್ನು ಸೆರೆ ಹಿಡಿದಿದ್ದರು. ಈ ಬಗ್ಗೆ ವಿದ್ಯಾನಗರ ಪೋಲಿಸರಿಗೆ ದೂರಲಾಗಿದ್ದು ಸ್ಥಳಕ್ಕೆ ಆಗಮಿಸಿದ ಪೋಲಿಸ್ ತಂಡ ಮಹಿಳೆಯರಲ್ಲಿ ಕದ್ದ ವಸ್ತು ಇಲ್ಲದ ಕಾರಣ ಬಿಟ್ಟು ಬಿಟ್ಟಿದ್ದಾರೆ. ಆದರೆ ಈ ಮಹಿಳೆಯರು ಕದ್ದ ವಸ್ತು ಸಂಗ್ರಹಿಸಿ ಸಾಗಿಸುವ ವ್ಯವಸ್ಥಿತ ಜಾಲ ಇದ್ದು ಇದನ್ನು ಪತ್ತೆಹಚ್ಚಲು ಪೋಲಿಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಎಡನೀರು ಪರಿಸರದಲ್ಲಿ ಗುಜರಿ ಹೆಕ್ಕುವ ನೆಪದಲ್ಲಿ ಭಾರೀ ಬೆಲೆಬಾಳುವ ತಾಮ್ರದ ಪಾತ್ರೆ ಸಾಮಾಗ್ರಿ ಕಳವು
0
ಆಗಸ್ಟ್ 23, 2022
Tags


