ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಶುಚಿತ್ವ ಸಾಗರಂ, ಸುಂದರ ತೀರಂ ಕಾರ್ಯಕ್ರಮದ ಅಂಗವಾಗಿ ಕರಾವಳಿ ಪಾದಯಾತ್ರೆ ಹಾಗೂ ಸ್ವಚ್ಛತಾ ಯಜ್ಞವನ್ನು ನಡೆಸಲಾಯಿತು.
ಕುಂಬಳೆ ಕೊಯಿಪ್ಪಾಡಿಯಿಂದ ಕೊಪ್ಪಳದ ವರೆಗೆ ಕರಾವಳಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಂಚಾಯಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಬೂರ ಸಿದ್ದೀಕ್, ನಸೀಮಾ ಖಾಲಿದ್, ಪಂಚಾಯಿತಿ ಕಾರ್ಯದರ್ಶಿ ಗೀತಾಕುಮಾರಿ ಮಾತನಾಡಿದರು. ಕುಟುಂಬಶ್ರೀ ಕಾರ್ಯಕರ್ತರು, ಹಸಿರು ಸೇನೆ ಸದಸ್ಯರು, ಪಂಚಾಯಿತಿ ನೌಕರರು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಬೀಚ್ ವಾಕ್ ಮತ್ತು ಕ್ಲೀನಿಂಗ್ ಡ್ರೈವ್
0
ಆಗಸ್ಟ್ 24, 2022




.jpg)
