ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ಅಶ್ವಿನಿ ಭಟ್, ವಿದುಷಿಃ ಧನ್ಯಾ ರಾಘವ್, ವಿದುಷಿಃ ಪಂಚಮಿ ನೇರೋಳು, ವಿದುಷಿಃ ಸೌಭಾಗ್ಯ, ವಿದುಷಿಃ ಅಭಿಜ್ಞಾ ಕುಂಬಳೆ, ವಿದುಷಿಃ ಶ್ರುತಿ ಕುಂಬಳೆ ಹಾಗೂ ವಿದುಷಿಃ ಮೇಘನಾ ಸೂರಂಬೈಲು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಈ ಸಂದರ್ಭ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕøತ ಉಳ್ಳಾಲ್ ಮೋಹನ್ ಕುಮಾರ್, ಡಾ.ರತ್ನಾಕರ ಮಲ್ಲಮೂಲೆ, ವಿದ್ವಾನ್ ಚಂದ್ರಶೇಖರ ನಾವಡ, ರಾಜಶ್ರೀ ಉಳ್ಳಾಲ ಇವರ ಉಪಸ್ಥಿತಿಯಲ್ಲಿ ವಿದುಷಿಃ,ಡಾ.ವಿದ್ಯಾಲಕ್ಷ್ಮೀ ಕುಂಬಳೆ ಇವರಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಉಪಸ್ಥಿತರಿದ್ದ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಾದ ಪೂರ್ವಕ ಮಾತನಾಡಿ ಗುರುವರಂಪರೆಯಲ್ಲಿ ಸಾಗಿಬಂದ ಭಾರತೀಯ ಪರಂಪರೆಯ ದ್ಯೋತಕವಾಗಿ ಇಲ್ಲಿ ನೀಡಲಾದ ಗುರುವಂದನೆ ಔಚಿತ್ಯಪೂರ್ಣ ಎಂದರು. ಗುರು ಎಂದಿಗೂ ಸಾಧನೆ ಮತ್ತು ಲಕ್ಷ್ಯಪ್ರಾಪ್ತಿಯ ಅನುಗ್ರಹ ನೀಡುತ್ತಾನೆ.ಇದರಿಂದ ಯಶಸ್ಸು ನಮ್ಮದಾಗುತ್ತದೆ ಎಂದರು. ನೂರಾರು ಮಂದಿ ಕಲಾಪ್ರೇಮಿಗಳು ಉಪಸ್ಥಿತರಿದ್ದರು.




.jpg)
.jpg)
