ಕಾಸರಗೋಡು: ಕಳೆದ ಕೆಲವು ತಿಂಗಳಿಂದ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ಹಾಗೂ ಪೂರೈಕೆಯಲ್ಲಿ ವ್ಯಾಪಕ ಹೆಚ್ಚಳವುಂಟಾಗಿರುವ ಹಿನ್ನೆಲೆಯಲ್ಲಿ ಅಬಕಾರಿ ದಳ ಕಾರ್ಯಾಚರಣೆ ಚುರುಕುಗೊಳಿಸಿದೆ. ಅಬಕಾರಿ ಇಂಟೆಲಿಜೆನ್ಸ್ ಏಂಡ್ ಇನ್‍ವೆಸ್ಟಿಗೇಶನ್ ಬ್ಯೂರೋ, ಕಾಸರಗೋಡು ಅಬಕಾರಿ ವಿಭಾಗ ಸರ್ಕಲ್ ಇನ್ಸ್‍ಪೆಕ್ಟರ್ ಟೋನಿ ಐಸಾಕ್ ಎಂಬವರ ನೇತೃತ್ವದಲ್ಲಿ ಜಿಲ್ಲೆಯ ನಾನಾ ಕಡೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣ, ಪಾರ್ಸೆಲ್ ಸೆಂಟರ್, ಕೊರಿಯರ್ ಕಚೇರಿಗಳಲ್ಲಿ ಪೊಲೀಸ್ ಡಾಗ್ ಸ್ಕ್ವೇಡ್‍ನ ಶ್ವಾನದಳದೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿ ಮಾರಕ ಎಂಡಿಎಂಎ, ಗಾಂಜಾ, ಆ್ಯಶಿಷ್ ಆಯಿಲ್, ನಿಷೇಧಿತ ತಂಬಾಕು ಉತ್ಪನ್ನ ಸೇರಿದಂತೆ ವಿವಿಧ ಮಾದಕ ಪದಾರ್ಥ ವ್ಯಾಪಕವಾಗಿ ಪೂರೈಕೆಯಘುತ್ತಿದ್ದು, ಇವುಗಳ ಮಾರಾಟಕ್ಕೆ ಮಹಿಳೆಯರನ್ನೂ ಬಳಸಿಕೊಳ್ಳುತ್ತಿರುವುದನ್ನು ಪತ್ತೆಹಚ್ಚಲಾಗಿದೆ.
ಕಾಸರಗೋಡಿಗೆ ಹರಿದುಬರುತ್ತಿರುವ ಮಾದಕದ್ರವ್ಯ: ವಿಶೇಷ ಕಾರ್ಯಾಚರಣೆ ಆರಂಭಿಸಿದ ಅಬಕಾರಿ ದಳ
0
ಆಗಸ್ಟ್ 24, 2022
Tags




