HEALTH TIPS

ಅಮೃತ ಮಹೋತ್ಸವದ ಅಮೃತಗಳಿಗೆಯೆಡೆಗೆ ನನ್ನ ಭಾರತ: ಲೇಖನ: ಅನ್ನಪೂರ್ಣ ಯನ್ ಕುತ್ತಾಜೆ


          ಕೈಯಲ್ಲಿ ತಿರಂಗ ಬಣ್ಣದ ಬಳೆ ಹಾಕಿ ,ಅದೇ ಬಣ್ಣದ ಬೊಟ್ಟನ್ನು ಧರಿಸಿ,ಮೊಗದಲ್ಲಿ ನಗುವನ್ನು ತುಂಬಿಕೊಂಡು ಓಡೋಡಿ ಶಾಲೆಗೆ ಆಗಮಿಸಿ ಧ್ವಜಾರೋಹಣವಾದಾಗ ನಮನ ಸಲ್ಲಿಸಿ ಭಾರತ ಮಾತೆಗೆ ವಂದಿಸುವ ಪರಿ ಅಂದಿನಿಂದಲೂ ರೂಢಿಯಲ್ಲಿತ್ತು. ಆದರೆ ಈ ವರ್ಷ ಈ ಹರ್ಷ ಬಲು ಅಧಿಕವಾಗಿಯೇ ಇದೆ .ಇದು ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ವರ್ಷ. ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳಾಗಿವೆ. ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಭಾರತೀಯರೆಲ್ಲರೂ ಸಜ್ಜಾಗಿದ್ದಾರೆ .ಕುತಂತ್ರದ ಮೂಲಕ ಆಂಗ್ಲರ ಕೈಲಿ ಸಿಲುಕಿ ನಲುಗಿದ ಬಳಲಿದ ಭಾರತ ಮಾತೆಗೆ ಕ್ರಾಂತಿ, ಬಲಿದಾನದ ಫಲವಾಗಿ ಲಭಿಸಿದ ಅಮೂಲ್ಯವಾದ ಸ್ವಾತಂತ್ರ್ಯ ದೊರೆತು ಎಪ್ಪತೈದು ವರ್ಷಗಳಾಗಿವೆ. ಇದು ಕೇವಲ ಭಾರತ ಮಾತೆಗೆ ಸಿಕ್ಕ ಸ್ವಾತಂತ್ರ್ಯವಲ್ಲ .ಪ್ರತಿಯೊಬ್ಬ ಭಾರತದ ಪೌರನಿಗೂ ಪಾರತಂತ್ರದಿಂದ ಸ್ವಾತಂತ್ರ್ಯದೆಡೆಗೆ ಸಿಕ್ಕ ಗೆಲುವು.
        ಭಾರತ ಶಾಂತಿಪ್ರಿಯ ದೇಶ .ವಿಶ್ವದ ಅತ್ಯಂತ ಸುಂದರ ದೇಶಗಳ ಪೈಕಿ ಇದೂ ಒಂದು. ಭದ್ರಕೋಟೆಯಂತೆ ದೇಶವ ಕಾಯುತಿಹ ಭವ್ಯ ಹಿಮಾಲಯ, ಸುತ್ತ ಗೋಡೆಯಂತೆ ಭಾರತ ರ ರಕ್ಷಿಸುತಲಿಹ ದಿವ್ಯ ಜಲಾಶಯ ,ಗಿರಿ ಶೃಂಗಗಳು, ಹರಿದ್ವರ್ಣ ವನಗಳು, ನದಿ ದೊರೆಗಳು ,ಗುಹಾ ದೇವಾಲಯಗಳು, ಅರಮನೆಗಳು ಹೀಗೆ ನೈಸರ್ಗಿಕ ಸೊಗಡು ಭಾರತಿಗೆ ಇನ್ನಷ್ಟು ಬೆಡಗನ್ನು ತಂದಿದೆ .ಮಾತ್ರವಲ್ಲದೆ 5000 ವರ್ಷಗಳಿಗೂ ಹಿಂದಿನ ಪುರಾತನ ಸಂಸ್ಕøತಿ -ಸಂಸ್ಕಾರಗಳು, ಆಚಾರ- ವಿಚಾರಗಳು, ಕಲಾಪ್ರಕಾರಗಳು ಇನ್ನೆಲ್ಲೂ ಸಿಗಲಾರದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ  ದೇಶ ನಮ್ಮದು. ಸಾಗರದಷ್ಟು ವಿಶಾಲವಾದ ಭಾμÉಯನ್ನಾಡುವ, ಹಲವು ಜಾತಿ ,ಮತ , ವರ್ಗಗಳ ಜನರನ್ನೊಳಗೊಂಡ ಸುಂದರ ದೇಶ ನಮ್ಮದು. ಹೀಗೆ ಹತ್ತು ಹಲವು ಅದ್ಭುತಗಳನ್ನು ತನ್ನೊಡಲಿನಲ್ಲಿ ಹೊತ್ತುಕೊಂಡು ,ಬೃಹತ್ ಸಂವಿಧಾನ ,ಸ್ವಯಂ ಆಡಳಿತ, ಸ್ವರಕ್ಷಣೆಗಳನ್ನೊಳಗೊಂಡ 'ಸ್ವರಾಜ್ಯ' ನನ್ನ ಭಾರತ .
      ದೇಶದ ಜನವಾಸಿಗಳು ಒಂದೆಡೆಯಾದರೆ, ಅವರನ್ನು ಹಾಗೂ ದೇಶವನ್ನು ಸರಹದ್ದುವಿನಂತೆ ಕಾಯುತ್ತಾ ಗಡಿಯಲ್ಲಿ ಬಂದೂಕು ಹಿಡಿಯುವ ಸೈನಿಕರು ಇನ್ನೊಂದೆಡೆ .ಗಡಗಡ ನಡುಗುವ ಚಳಿಯಲ್ಲೂ ಕೆಚ್ಚೆದೆಯಿಂದ ವೈರಿಗಳ ಸದ್ದಡಗಿಸುತಾ,ಹಗಲಿರುಳೂ ಕರ್ತವ್ಯ ನಿμÉ್ಠಯ ಮೆರೆಯುವ, ಸಹಾಯಕ್ಕೆ ಸದಾ ಸನ್ನದ್ಧರಾಗಿರುವ ವೀರ ಜವಾನರು ನಮ್ಮ ಹೆಮ್ಮೆ ,ನಮ್ಮ ಆಸ್ತಿ.



      ಸ್ವಾತಂತ್ರ್ಯಾ ನಂತರ ಭಾರತ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡಿದೆ ಮತ್ತು ಕಾಣುತ್ತಿದೆ .ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ  ಅಡಚಣೆಗಳು ಎದುರಾದರೂ ಅವೆಲ್ಲವನ್ನು ಮೆಟ್ಟಿನಿಂತು ಸಮರ್ಥವಾಗಿ ಎದುರಿಸುತ್ತಾ ಯಶಸ್ಸಿನೆಡೆಗೆ ದಾಪುಗಾಲಿಡುತ್ತಿದೆ. ಕೃಷಿ, ರಕ್ಷಣೆ ,ವಿದೇಶಾಂಗ, ವಿಜ್ಞಾನ, ಕೈಗಾರಿಕೆ, ಸ್ವ ಉದ್ಯಮ ,ವೈದ್ಯಕೀಯ ,ವಾಣಿಜ್ಯ, ವಿದ್ಯಾಭ್ಯಾಸ ,ಸಾರಿಗೆ ,ಕ್ರೀಡೆ ,ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ತನ್ನದೇ ಛಾಪನ್ನು ಮೂಡಿಸುತ್ತಿದೆ .ತನ್ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ದಿಟ್ಟತನದಿಂದ ಉತ್ತರ ನೀಡಿದೆ. ಇದೀಗ ಅಮೃತೋತ್ಸವದ ಸುಸಂದರ್ಭದಲ್ಲಿ ಸ್ವಾವಲಂಬನೆಯ ಪರಿಕಲ್ಪನೆಯಡಿಯಲ್ಲಿ ಆತ್ಮ ನಿರ್ಭರದೆಡೆಗೆ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.ಪ್ರತಿಯೊಂದು ವಿಚಾರದಲ್ಲೂ ಸ್ವಾವಲಂಬನೆಯ ತತ್ವವನ್ನಿಟ್ಟುಕೊಂಡು ಇನ್ನಿತರ ದೇಶಗಳಿಗೆ ಮಾದರಿಯಾಗುವಂತೆ ಮುನ್ನುಗ್ಗುತ್ತಿದೆ .ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ಯಶಸ್ಸನ್ನು ಕಾಣುತ್ತಿದೆ.ಬಾಹ್ಯಾಕಾಶ ಕ್ಷೇತ್ರದಲ್ಲೂ ಹಿಂದೆಂದೂ ಕಾಣದ ಅಭೂತಪೂರ್ವ ಬದಲಾವಣೆಗಳು ಕಾಣುತ್ತಿದ್ದು ಮಂಗಳಯಾನ, ಚಂದ್ರಯಾನ ಮೊದಲಾದ ಬಾಹ್ಯಾಕಾಶ ಯೋಜನೆಗಳು ಯಶಸ್ಸನ್ನು ಕಂಡಿದ್ದು ವಿಶ್ವದಲ್ಲಿ ಭಾರತವು ಮತ್ತೊಮ್ಮೆ ಉತ್ತುಂಗಕ್ಕೇರುವಂತೆ ಮಾಡಿದೆ.
     ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ತಾಯಿ ಭಾರತೀಯೆಡೆಗಿನ ಗೌರವ ನೂರರಷ್ಟು ಹೆಚ್ಚಿದೆ.' ವಂದೇ ಮಾತರಂ' ,'ಜನಗಣಮಣ 'ಧ್ವನಿ ಮೊಳಗುವಾಗ ಮೈ ನವಿರೇಳುತ್ತದೆ .ಜೋರಾಗಿ 'ಭಾರತ ಮಾತಾ ಕಿ ಜೈ' ಎಂಬ ಜೈಕಾರ ಕೂಗುವ ಘಳಿಗೆ ಸಮೀಪಿಸುತ್ತಿದೆ. ಮನೆ ಮನೆಯಲ್ಲೂ, ಮನ ಮನದಲ್ಲೂ ತಿರಂಗ ಪತಾಕೆ ರಾರಾಜಿಸಬೇಕಿದೆ .ಸ್ವಾತಂತ್ರ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮೊಳಗೆ ಎಂದೆಂದೂ ಚಿರಸ್ಥಾಯಿಯಾಗಬೇಕಿದೆ. ರಾಷ್ಟ್ರ ಪ್ರೇಮದ ಕಿಚ್ಚು  ಪ್ರಜ್ವಲಿಸಲಿ. ಭಾರತವು ವಿಶ್ವಗುರುವಾಗಿ ಅಗ್ರಸ್ಥಾನಕ್ಕೇರಿ ವಿರಾಜಮಾನವಾಗಲಿ.

ಅನ್ನಪೂರ್ಣ ಯನ್ ಕುತ್ತಾಜೆ
ತೃತೀಯ ಬಿ. ಎಸ್ಸಿ
ವಿವೇಕಾನಂದ ಮಹಾ ವಿದ್ಯಾಲಯ, ಪುತ್ತೂರು


 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries