HEALTH TIPS

ಸಂಖ್ಯೆ ಕುಸಿತದ ಭೀತಿಯಲ್ಲಿ ಸಾಕಾನೆಗಳು: ಆತಂಕದ ನಡುವೆ ಇಂದು ವಿಶ್ವ ಆನೆ ದಿನ


                ಇಂದು ವಿಶ್ವ ಆನೆ ದಿನ. ಭೂಮಿಯಲ್ಲಿ ಆನೆಗಳ ಪ್ರಾಮುಖ್ಯತೆಯನ್ನು ತಿಳಿಯಲು ಮತ್ತು ಅವುಗಳನ್ನು ರಕ್ಷಿಸುವ ಅಗತ್ಯವನ್ನು ಚರ್ಚಿಸಲು ದಿನವನ್ನು ಆಚರಿಸಲಾಗುತ್ತದೆ.
           2011 ರಿಂದ ಆಗಸ್ಟ್ 12 ರಂದು ಪ್ರತಿವರ್ಷವೂ ಆನೆ ದಿನವನ್ನು ಆಚರಿಸಲಾಗುತ್ತದೆ.
           ವಿಶಿಷ್ಟವಾದ ದಂತಗಳಿಂದ ಆನೆಗಳು ಕೇರಳದಲ್ಲಿ ಮೊದಲಿನಿಂದಲೂ ಆಕರ್ಷಣೆ. ಅವುಗಳ ದಂತಗಳ  ಗಾತ್ರದಿಂದ ಅವುಗಳನ್ನು ವಿಶಿಷ್ಟವಾಗಿ ಗುರುತಿಸಲಾಗುತ್ತದೆ. ಆನೆ ಭೂಮಿಯ ಮೇಲಿನ ಅತಿದೊಡ್ಡ ಪ್ರಾಣಿಯೂ ಹೌದು. ಆನೆಯಿಲ್ಲದ ಪೂರಂ ಉತ್ಸವವನ್ನು ಕೇರಳೀಯರು ಊಹಿಸಲಾರರು.  ಆದರೆ ಸಾಕಾನೆಗಳ ಸಂಖ್ಯೆ ಕುಸಿಯುತ್ತಿದೆ ಎಂಬ ವರದಿಗಳೂ ಇದೀಗ ಕೇಳಿಬರುತ್ತಿದೆ.
          ಇನ್ನು ಮುಂದಿನ  30 ವರ್ಷಗಳ ನಂತರ ಉತ್ಸವಗಳಲ್ಲಿ ಭಾಗವಹಿಸಲು ಸಹ ಆನೆಗಳಿರಲಾರದ ಸ್ಥಿತಿ ಬರಲಿದೆ ಎನ್ನಲಾಗಿದೆ. ಕೇರಳದ 70 ಪ್ರತಿಶತ ಆನೆಗಳು 50 ವರ್ಷಕ್ಕಿಂತ ಮೇಲ್ಪಟ್ಟವು. ಗರಿಷ್ಠ ಜೀವಿತಾವಧಿ 80 ವರ್ಷಗಳು. ಆದರೆ ಕೆಲವು ಆನೆಗಳು ಪೂರ್ಣ ವಯಸ್ಸನ್ನು ತಲುಪುವ ಮೊದಲೇ ರೋಗಗಳಿಂದ ಸಾಯುತ್ತವೆ. ಹೀಗೇ ಮುಂದುವರಿದರೆ  ಮೂವತ್ತು ವರ್ಷಗಳ ನಂತರ ಆನೆಗಳನ್ನು ಚಿತ್ರದಲ್ಲಷ್ಟೇ ನೋಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
         1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಆನೆಗಳ ಬೇಟೆಯನ್ನು ನಿμÉೀಧಿಸಿತು ಮತ್ತು 2002 ರ ತಿದ್ದುಪಡಿಯು ಆನೆಗಳ ಮಾರಾಟವನ್ನು ನಿμÉೀಧಿಸಿತು. ಇದಕ್ಕೆ ಮುಖ್ಯ ಕಾರಣವೆಂದರೆ ಕಾಡಾನೆ ತನ್ನ ಪಳಗಿಸುವಿಕೆಯ ಭಾಗವಾಗಿ ಎದುರಿಸಬೇಕಾದ ತೀವ್ರ ಚಿತ್ರಹಿಂಸೆ. ಆನೆಗಳನ್ನು ಬೇಟೆಯಾಡಿದಾಗ ಮತ್ತು ಅವುಗಳ ದಂತ ಮತ್ತು ಉಗುರುಗಳನ್ನು ಕತ್ತರಿಸಿ ಮಾರಾಟ ಮಾಡುವ ಕಾರಣ  ಆನೆ ಬೇಟೆಯನ್ನು ನಿμÉೀಧಿಸಲಾಯಿತು.

            ಕೇರಳದ ಬಹುತೇಕ ಆನೆ ಮಾಲೀಕರಲ್ಲಿ ಗಂಡು ಆನೆಗಳೇ ಹೆಚ್ಚಿರುವುದು ಈಗ.  ಹಾಗಾಗಿ ಸಂತಾನಾಭಿವೃದ್ಧಿಯ ಸಾಧ್ಯತೆಯೂ ಕಡಿಮೆ. ಆನೆಯನ್ನು ನೋಡಿಕೊಳ್ಳಲು ದಿನಕ್ಕೆ 5000 ರೂ. ಕಿಷ್ಠ ಬೇಕಾಗಿ ಬರುತ್ತದೆ.  ಆನೆಯ ಆರೈಕೆಯ ಜಟಿಲತೆಗಳು ಮಾಲೀಕರಿಗೆ ಕಷ್ಟಕರವಾಗಿಸುತ್ತದೆ. ಇದೆಲ್ಲದರಿಂದ ಇಂದು ಯಾರೂ ಈ ಕ್ಷೇತ್ರಕ್ಕೆ ಬರಲು ಉತ್ಸುಕರಾಗುತ್ತಿಲ್ಲ.
          ಅಂದಹಾಗೆ ಕೇರಳ ರಾಜ್ಯದ ಪ್ರಾಣಿಕೂಡಾ ಆನೆಯೆ. ರಾಜ್ಯ ಲಾಂಛನದಲ್ಲಿ ಅಓಕಚಕ್ರದ ಎರಡೂ ಬದಿ ಸೊಂಡಿಲೆತ್ತಿರುವ ಆನೆಗಳನ್ನು ಗಮನಿಸಿರಬಹುದು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries