HEALTH TIPS

ಸ್ವಾತಂತ್ರ್ಯ ದಿನಾಚರಣೆಯ ಔತಣಕೂಟ ರದ್ದುಗೊಳಿಸಿದ ರಾಜ್ಯಪಾಲರು: 'ಸಂಕಷ್ಟದಲ್ಲಿ ಜನರು'; ವನವಾಸಿ ಗ್ರಾಮಗಳಿಗೆ ಭೇಟಿ ನೀಡಿ ಆ ಮೊತ್ತವನ್ನು ಮಳೆ ಪರಿಹಾರ ಕಾರ್ಯಕ್ಕೆ ನೀಡಲಾಗುವುದೆಂದ ರಾಜಭವನ


            ತಿರುವನಂತಪುರ: ಸ್ವಾತಂತ್ರ್ಯ ದಿನದಂದು ಸಚಿವರು ಮತ್ತು ನಾಗರಿಕ ಮುಖಂಡರಿಗೆ ರಾಜ್ಯಪಾಲರು ಸಿದ್ಧಪಡಿSUಗಿ ಸಾಂಪ್ರದಾಯಿಕ ಔತಣ ಕೂಟವನ್ನು ಮತ್ತೊಮ್ಮೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರದ್ದುಗೊಳಿಸಿದ್ದಾರೆ.
            ಅತಿವೃಷ್ಟಿಯಿಂದ ಜನತೆಗೆ ಉಂಟಾಗಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಔತಣಕೂಟವನ್ನು ರದ್ದುಗೊಳಿಸಲಾಗಿದೆ ಎಂದು ರಾಜಭವನ ತಿಳಿಸಿದೆ.
           ಆಗಸ್ಟ್ 15 ರಂದು ಸಂಜೆ ಮುಖ್ಯಮಂತ್ರಿ, ಸಚಿವರು, ನಾಗರಿಕ ಮುಖಂಡರು ಮುಂತಾದವರಿಗೆ ಔತಣವನ್ನು ನೀಡಲಾಗುತ್ತದೆ. ಪ್ರವಾಹ, ಕೊರೋನಾ ಇತ್ಯಾದಿಗಳ ಕಾರಣ, ಕಳೆದ ಕೆಲವು ವರ್ಷಗಳಿಂದ ಈ ಕ್ರಮಗಳನ್ನು ನಿಲ್ಲಿಸಲಾಗಿತ್ತು.
            ಔತಣಕೂಟಕ್ಕೆ ಮೀಸಲಿಟ್ಟ ಸಂಪೂರ್ಣ ಮೊತ್ತವನ್ನು ರಾಜ್ಯದ ಮಳೆ ಪೀಡಿತ ಪರಿಹಾರ ಕಾರ್ಯಕ್ಕೆ ನೀಡಲು ರಾಜ್ಯಪಾಲರು ನಿರ್ಧರಿಸಿದ್ದಾರೆ. ಅವರು ಸ್ವಾತಂತ್ರ್ಯ ದಿನದಂದು ತಿರುವನಂತಪುರಂನ ಬುಡಕಟ್ಟು ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
          ಈ ನಿರ್ಧಾರಕ್ಕೂ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜಭವನ ಸ್ಪಷ್ಟಪಡಿಸಿದೆ. ನಿಗದಿತ ಸಮಯಕ್ಕೆ ಸಹಿ ಹಾಕದ ಕಾರಣ ಸುಗ್ರೀವಾಜ್ಞೆ ರದ್ದತಿ ಸೇರಿದಂತೆ ರಾಜಭವನ ಮತ್ತು ಸರ್ಕಾರದ ಮಧ್ಯೆ ಶೀತಲ ಸಮರ ಕಾವೇರುತ್ತಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries