HEALTH TIPS

ನಿಗದಿತ ಅವಧಿಯೊಳಗೆ ಉಕ್ಕಿನಡ್ಕ ಸರ್ಕಾರಿ ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳಿಸಬೇಕು: ಗುತ್ತಿಗೆದಾರರಿಗೆ ಸೂಚಿಸಿದ ಸಚಿವೆ ವೀಣಾ ಜಾರ್ಜ್: ಹಾಸ್ಟೆಲ್ ಕೊಠಡಿ, ವಸತಿಗೃಹಗಳಿಗೆ ಶಂಕುಸ್ಥಾಪನೆ ನಿರ್ವಹಿಸಿ ಅಭಿಮತ


          ಕಾಸರಗೋಡು: ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷವಾದರೂ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು. ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಬೇಕೆಂಬುದು ನಮ್ಮ ಕನಸು. ಹಾಗಾಗಿ ನಿರ್ಮಾಣ ಕಾರ್ಯದಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಈ ಬಗ್ಗೆ ಬಿಲ್ಡರ್‍ಗಳು ಮತ್ತು ಗುತ್ತಿಗೆದಾರರು ಎಚ್ಚರಿಕೆ ವಹಿಸಬೇಕು ಎಂದರು.
         ನವಕೇರಳ ಕ್ರಿಯಾ  ಯೋಜನೆಯ ಎರಡನೇ ಹಂತದಲ್ಲಿ ವೈದ್ಯಕೀಯ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಕೊಠಡಿಗಳು ಮತ್ತು ಶಿಕ್ಷಕರ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ಇಂದು ಸಚಿವರು ನೆರವೇರಿಸಿ ಮಾತನಾಡಿದರು. ಆಸ್ಪತ್ರೆಯ ದಂತ ಶಸ್ತ್ರಚಿಕಿತ್ಸಾ ವಿಭಾಗವನ್ನು ಸಚಿವರು ಉದ್ಘಾಟಿಸಿದರು.



           ಮೊದಲ ಭೇಟಿಯ ಸಮಯದಲ್ಲಿ, ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾದ ವೈದ್ಯಕೀಯ ಕಾಲೇಜಿನಲ್ಲಿ ಕೆಲವೇ ಸಿಬ್ಬಂದಿ ಮತ್ತು ಕೆಲವೇ ಜನರು ಇದ್ದರು. ಇಂದು ಸಾರ್ವಜನಿಕರು ಒಪಿ ಮತ್ತು ಇತರ ರೋಗಿಗಳೂ ಇಲ್ಲಿಗೆ ಬರುತ್ತಿದ್ದಾರೆ. ಕಾಸರಗೋಡಿನ ಆರೋಗ್ಯ ಕ್ಷೇತ್ರದ ಸುಧಾರಣೆ ಸರಕಾರದ ಗುರಿಯಾಗಿದೆ. ಘೋಷಿಸಿದಂತೆ ಜನವರಿಯಲ್ಲಿ ಒಪಿ ಆರಂಭವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸರಕಾರಿ ವಲಯದಲ್ಲಿ ನರರೋಗ ತಜ್ಞರು ಇಲ್ಲದ ಸಮಸ್ಯೆಗೆ ವೈದ್ಯರಿಗೆ ವ್ಯವಸ್ಥೆ ಕಲ್ಪಿಸಿ ಪರಿಹಾರ ನೀಡಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪಿಸಲಾಗಿದೆ. ಹೃದ್ರೋಗ ನಿಗಾ ಘಟಕ ಪೂರ್ಣಗೊಂಡಿದ್ದು, ಹೃದ್ರೋಗ ತಜ್ಞರ ಸೇವೆಯೂ ಲಭ್ಯವಾಗಿದೆ. ಕಾಸರಗೋಡಿನ ಆರೋಗ್ಯ ಕ್ಷೇತ್ರದ ಚಟುವಟಿಕೆಗಳನ್ನು ಸರ್ಕಾರ ಪ್ರತಿದಿನ ಮೌಲ್ಯಮಾಪನ ಮಾಡುತ್ತಿದೆ ಎಂದು ಸಚಿವರು ಹೇಳಿದರು.
          ವೈದ್ಯಕೀಯ ಕಾಲೇಜು ತನ್ನ ಬೆಳವಣಿಗೆಯ ಹಂತದಲ್ಲಿ ಎದುರಿಸಿದ ಎಲ್ಲಾ ಸವಾಲುಗಳನ್ನು ನಾವು ಜಯಿಸಿದ್ದೇವೆ. ಈಗ ನಾವು ಇಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಬೇಕಾಗಿದೆ. ಅದಕ್ಕಾಗಿ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಹಿಂದೆ ಹಣ ಮಂಜೂರು ಮಾಡಿದಾಗ ವಿದ್ಯುತ್ ಕಾಮಗಾರಿಗೆ ಹಣ ಇರಲಿಲ್ಲ. ಸತತ ಪ್ರಯತ್ನದಿಂದ ರೂ.160 ಕೋಟಿ ಲಭ್ಯವಾಗಿದ್ದು, ವಿದ್ಯುತ್ ಕಾಮಗಾರಿಗೆ ರೂ.30 ಕೋಟಿ ಮೀಸಲಿಡಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಯೋಗಾಲಯ ಸೇರಿದಂತೆ ಸೌಲಭ್ಯಗಳಿಗೆ 30 ಕೋಟಿ ಮೀಸಲಿಡಲಾಗಿದೆ. ಆಸ್ಪತ್ರೆ ಕಟ್ಟಡದ ನೆಲ ಅಂತಸ್ತಿನ ಕಾಮಗಾರಿ ಮುಗಿದ ಕೂಡಲೇ ಕಾರ್ಯಾರಂಭ ಮಾಡುವಂತೆ ಸಚಿವರು ಸೂಚಿಸಿದರು. ವೈದ್ಯಕೀಯ ಕಾಲೇಜಿಗೆ ಮಂಜೂರಾದ 272 ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳನ್ನು ಈಗ ನೇಮಕ ಮಾಡಲಾಗಿದ್ದು, ಉಳಿದ ಹುದ್ದೆಗಳಿಗೆ ಆಸ್ಪತ್ರೆ ಕಾರ್ಯಾರಂಭಗೊಂಡ ಬಳಿಕ ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.


            ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇμÁಧಿಕಾರಿ ಇ.ಪಿ.ರಾಜಮೋಹನ್ ವರದಿ ಮಂಡಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ವಿವಿಧ ಪಂಚಾಯತಿಗಳ ಅಧ್ಯಕ್ಷರಾದ ಬಿ.ಶಾಂತ, ಜೆ.ಎಸ್.ಸೋಮಶೇಖರ, ಬದಿಯಡ್ಕ Àಪಂಚಾಯತ್ ಸದಸ್ಯೆ ಜ್ಯೋತಿ, ಡಾ.ರಿಜಿತ್ ಕೃಷ್ಣನ್, ಪಿ.ರಘುದೇವನ್, ವಿ.ವಿ.ರಮೇಶನ್, ಕೆ.ಚಂದ್ರಶೇಖರ ಶೆಟ್ಟಿ, ಮಾಹಿನ್ ಕೇಳೋಟ್, ಕಿಟ್ಕೋ ಎಂಡಿ ಹರಿನಾರಾಯಣ ರಾಜ್ ಮೊದಲಾದವರಿದ್ದರು. ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಥಾಮಸ್ ಮ್ಯಾಥ್ಯೂ ಸ್ವಾಗತಿಸಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರಿ ಅಧೀಕ್ಷಕ ಡಾ.ಎಂ.ಬಿ.ಆದರ್ಶ ವಂದಿಸಿದರು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries