HEALTH TIPS

ತಜ್ಞರ ಪ್ರಕಾರ ತಿಂದ ನಂತರ ಎಷ್ಟು ಹೊತ್ತು ವಾಕ್‌ ಮಾಡಬೇಕು?

 ಊಟದ ನಂತರ ವಾಕ್‌ ಮಾಡುವ ಅಭ್ಯಾಸ ಹಲವರಲ್ಲಿದೆ ಹಾಗೆಯೇ ವಾಕ್‌ ಮಾಡದೆ ಊಟದ ನಂತರ ಮಲಗುವ ಅಭ್ಯಾಸ ಕೂಡ ಕೆಲವರಲ್ಲಿದೆ. ಆದರೆ ನಿಮಗೆ ಗೊತ್ತೆ ತಜ್ಞರ ಪ್ರಕಾರ ಊಟದ ನಂತರ ಅತಿಯಾಗಿ ಸಹ ವಾಕ್‌ ಮಾಡಬಾರದು ಅಲ್ಲದೆ, ವಾಕ್‌ ಮಾಡದೇ ಸೀದಾ ಮಲಗಲುಬಾರದು.

ಊಟ ಮಾಡಿದ ನಂತರ ಮಲಗುವ ಅಭ್ಯಾಸದಿಂದ ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಬಹುದು, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು ಮತ್ತು ನೀವು ಹೃದಯ ಕಾಯಿಲೆಗಳಿಂದ ಬಳಲುತ್ತಬಹುದು. ಆದ್ದರಿಂದ ದೇಹಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವುದು ಎಷ್ಟು ಅವಶ್ಯಕವೋ, ಅದನ್ನು ಜೀರ್ಣಿಸಿಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದ ಪೋಷಕಾಂಶಗಳು ಎಲ್ಲಾ ಅಂಗಗಳಿಗೆ ತಲುಪುತ್ತವೆ.

ತಜ್ಞರ ಪ್ರಕಾರ ನಿತ್ಯ ಎಷ್ಟು ವಾಕ್‌ ಮಾಡಬೇಕು, ವಾಕ್‌ ಮಾಡುವುದರ ಪ್ರಯೋಜನಗಳೇನು ಮುಂದೆ ನೋಡೋಣ:

ತಜ್ಞರ ಪ್ರಕಾರ ಎಷ್ಟು ನಡೆಯಬೇಕು?

ಊಟದ ನಂತರ ನಿತ್ಯ ವಾಕ್‌ ಮಾಡುವುದು ಕಡ್ಡಾಯ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಸಹ ಇದೆ. ತಜ್ಞರ ಪ್ರಕಾರ ಪ್ರತಿ ದಿನ ಊಟದ ನಂತರ ನೀವು 1500-2000 ಹೆಜ್ಜೆಗಳನ್ನು ಕಡ್ಡಾಯವಾಗಿ ನಡೆಯಬೇಕು. ಏಕೆಂದರೆ ಇದು ತೂಕವನ್ನೂ ನಿಯಂತ್ರಿಸುತ್ತದೆ.

ತಿಂದ ನಂತರ ವಾಕ್ ಮಾಡುವ ಪ್ರಯೋಜನಗಳು

ಚಯಾಪಚಯವನ್ನು ವೇಗಗೊಳಿಸುತ್ತದೆ

ತಿಂದ ನಂತರ ನಡೆಯುವುದರಿಂದ ಮಲಬದ್ಧತೆಗೆ ಕಾರಣವಾಗುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ನಡೆಯುತ್ತದೆ, ಪೋಷಕಾಂಶಗಳು ಮತ್ತು ಆಮ್ಲಜನಕವು ದೇಹದ ಎಲ್ಲಾ ಭಾಗಗಳನ್ನು ಚೆನ್ನಾಗಿ ತಲುಪುತ್ತದೆ.

ಉತ್ತಮ ನಿದ್ರೆಗೆ ಪ್ರಯೋಜನಕಾರಿ

ರಾತ್ರಿ ಊಟದ ನಂತರ ವಾಕ್ ಮಾಡುವುದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಒತ್ತಡವನ್ನು ಸಹ ಅನುಭವಿಸುವುದಿಲ್ಲ

ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ

ನೀವು ತಿಂದ ನಂತರವೂ ವಾಕ್ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು ತುಂಬಾ ಸಹಾಯಕಾರಿ. ಏಕೆಂದರೆ ವಾಕ್‌ ಮಾಡುವುದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ವಾಕಿಂಗ್ ನಿಮ್ಮ ದೇಹದಲ್ಲಿ ಇರುವ ಕ್ಯಾಲೊರಿಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ.

ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ

ದೇಹದ ಭಾಗಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ವಾಕ್ ಮಾಡುವುದು ಅಗತ್ಯವಿದೆ. ವಾಸ್ತವವಾಗಿ, ತಿಂದ ನಂತರ 20 ನಿಮಿಷಗಳ ಕಾಲ ನಡೆಯುವುದರಿಂದ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ.


 

 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries