ಕೊಚ್ಚಿ: ಕೊಚ್ಚಿ ನಗರವನ್ನೇ ಬೆಚ್ಚಿ ಬೀಳಿಸಿದ್ದ ಫ್ಲಾಟ್ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೋಲೀಸರು ಹೇಳಿರುವಂತೆ, ಡ್ರಗ್ಸ್ ಡೀಲ್‍ಗೆ ಸಂಬಂಧಿಸಿದ ವಿವಾದ ಕೊಲೆಗೆ ಕಾರಣವಾಯಿತು ಎಂದು ಸುಳಿವು ಸಿಕ್ಕಿದೆ ಎಂದಿರುವರು.
ಕೊಲೆಯಾದ ಸಜೀವ್ ಕೃಷ್ಣ ಹಾಗೂ ಆರೋಪಿ ಅರ್ಷದ್ ಮಾದಕ ವ್ಯಸನಿಗಳಾಗಿರುವುದು ಕೂಡ ಪತ್ತೆಯಾಗಿದೆ. ಈ ವಹಿವಾಟಿಗೆ ಸಂಬಂಧಿಸಿದ ವಿವಾದದ ವೇಳೆ ಕೊಲೆ ನಡೆದಿದೆ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.
ಕೊಲೆಯ ನಂತರ ತಲೆಮರೆಸಿಕೊಂಡಿದ್ದ ಅμರ್Áದ್ ನನ್ನು ಕಾಸರಗೋಡು ಮಂಜೇಶ್ವರದಿಂದ ಪೋಲೀಸರು ಬಂಧಿಸಿದ್ದರು. ಕರ್ನಾಟಕಕ್ಕೆ ಪಲಾಯನಗೈಯ್ಯಲು ಯತ್ನಿಸುತ್ತಿದ್ದಾಗ ಸೆರೆಹಿಡಿಯಲಾಗಿದೆ. ಆತನ ಬ್ಯಾಗ್‍ನಿಂದ ಗಾಂಜಾ ಮತ್ತು ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಆರೋಪಿ ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ. ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎಂದು ಕೊಚ್ಚಿ ನಗರ ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.
ಮಲಪ್ಪುರಂನ ವಂದೂರು ಮೂಲದ ಸಜೀವ್ ಕೃಷ್ಣ ನಿನ್ನೆ ಕಾಕ್ಕನಾಡು ಇಟಾಚಿರ ಓಕ್ಸೋನಿಯಾ ಫ್ಲಾಟ್‍ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಸಜೀವ್ ಕೃಷ್ಣ ಅವರ ದೇಹಕ್ಕೆ ಕಂಬಳಿ ಹೊದಿಸಲಾಗಿತ್ತು. ತಲೆ, ಕುತ್ತಿಗೆ ಸೇರಿದಂತೆ 20ಕ್ಕೂ ಹೆಚ್ಚು ಗಾಯಗಳಾಗಿವೆ. ಫ್ಲಾಟ್‍ನ ಪೈಪ್ ಡಕ್ಟ್‍ಗಳ ನಡುವೆ ಶವ ಪತ್ತೆಯಾಗಿತ್ತು.
ಕೊಲೆಯಾದವ ಮತ್ತು ಆರೋಪಿಗಳು ಮಾದಕ ವ್ಯಸನಿಗಳು; ಮಾದಕವಸ್ತು ವ್ಯವಹಾರದ ವಿವಾದ ಕೊಲೆಗೆ ಕಾರಣ: ಆರೋಪಿಯನ್ನು ಮಂಜೇಶ್ವರದಿಂದ ಸೆರೆ: ಕೊಚ್ಚಿ ನಗರ ಪೋಲೀಸ್ ಆಯುಕ್ತರಿಂದ ಮಾಹಿತಿ
0
ಆಗಸ್ಟ್ 17, 2022


