ತಿರುವನಂತಪುರ: ಪೂರ್ಣಗೊಂಡಿರುವ ಕಟ್ಟಡಗಳನ್ನು ವಿದ್ಯುದ್ದೀಕರಣಕ್ಕಾಗಿ ಕೆಡವುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಇನ್ನು ಮುಂದೆ ಕಟ್ಟಡ ಮತ್ತು ವಿದ್ಯುತ್ ಕಾಮಗಾರಿಗಳನ್ನು ಪ್ರತ್ಯೇಕವಾಗಿ ನಡೆಸುವ ಬದಲು ಎರಡರ ಜವಾಬ್ದಾರಿಯನ್ನು ಒಬ್ಬ ಗುತ್ತಿಗೆದಾರನಿಗೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಜಂಟಿ ಗುತ್ತಿಗೆ ಪದ್ಧತಿಯಾದ ಕಾಂಪೆÇಸಿಟ್ ಟೆಂಡರ್ ಪ್ರಕಾರ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಂಯುಕ್ತ ಟೆಂಡರ್ ಎಂದರೇನು?:
''ಮನೆ ಕಟ್ಟುವಂತೆಯೇ ಸರಕಾರಿ ಕಟ್ಟಡಗಳ ನಿರ್ಮಾಣವೂ ತಲೆಮಾರುಗಳ ದೂರದೃಷ್ಟಿಯಿಂದ ನಡೆಯಬೇಕು.ಕಟ್ಟಡ ಮತ್ತು ವಿದ್ಯುತ್ ಕಾಮಗಾರಿಗೆ ಪ್ರತ್ಯೇಕ ಟೆಂಡರ್ ಕರೆದರೆ ಅನಿರ್ದಿμÁ್ಟವಧಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ರಾಜ್ಯದಲ್ಲಿ ಸಂಯುಕ್ತ ಟೆಂಡರ್ (ಸಂಯೋಜಿತ ಗುತ್ತಿಗೆ) ವ್ಯವಸ್ಥೆ ಜಾರಿಯಾಗುತ್ತಿದ್ದು, ಒಂದು ಕಟ್ಟಡದ ಸಂಪೂರ್ಣ ಕಾಮಗಾರಿಯನ್ನು ಒಂದೇ ಗುತ್ತಿಗೆಯಲ್ಲಿ ಸೇರಿಸಿ ಒಬ್ಬ ಗುತ್ತಿಗೆದಾರನಿಗೆ ವಹಿಸುವುದು ಸಂಯುಕ್ತ ಗುತ್ತಿಗೆ ಪದ್ಧತಿ. ನಿರ್ಮಾಣದ ಆರಂಭಿಕ ಹಂತ, ಅನಗತ್ಯ ಕೆಡವುವಿಕೆ ಮತ್ತು ಸಂಬಂಧಿತ ದುರಸ್ತಿಗಳನ್ನು ಈ ಕ್ರಮ ತಪ್ಪಿಸುತ್ತದೆ. ಇದು ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುತ್ತದೆ."
‘‘ಹಲವು ವರ್ಷಗಳಿಂದ ಎಡಪಕ್ಷ ಸರಕಾರಗಳು ಜಂಟಿ ಗುತ್ತಿಗೆ ಪದ್ಧತಿ ಜಾರಿಗೆ ತರಲು ಪ್ರಯತ್ನಿಸಿದರೂ ಯೋಜನೆ ಸಾಕಾರಗೊಳ್ಳಲಿಲ್ಲ. ಕಾರಣಾಂತರಗಳಿಂದ ಮತ್ತು ಆಕ್ಷೇಪಣೆಗಳಿಂದ ಹಳೆಯ ವಿಧಾನವೇ ಮುಂದುವರಿದಿದೆ. ಗೌರವಾನ್ವಿತ ಕೇರಳ ಹೈಕೋರ್ಟ್ ಕೂಡ ಜಂಟಿ ಒಪ್ಪಂದವನ್ನು ಎತ್ತಿ ಹಿಡಿದಿದೆ. "
‘‘ಈ ಉದ್ದೇಶಕ್ಕಾಗಿ ಲೋಕೋಪಯೋಗಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇನ್ನು ಲೋಕೋಪಯೋಗಿ ಕಟ್ಟಡಗಳ ನಿರ್ಮಾಣಕ್ಕೆ ಸಂಯೋಜಿತ ಟೆಂಡರ್‍ಗಳನ್ನು ಆಹ್ವಾನಿಸಲಾಗುವುದು. ಅಸ್ತಿತ್ವದಲ್ಲಿರುವ ಸಿವಿಲ್ ಮತ್ತು ವಿದ್ಯುತ್ ಗುತ್ತಿಗೆದಾರರು ಭವಿಷ್ಯದಲ್ಲಿ ಸಂಯೋಜಿತ ಗುತ್ತಿಗೆದಾರರಾಗಿ ನೋಂದಾಯಿಸಿಕೊಳ್ಳಬಹುದು.
ಪ್ರಸ್ತುತ, ಕಣ್ಣೂರು ಜಿಲ್ಲೆಯಲ್ಲಿ ಸಿಎಚ್‍ಸಿ ನಿರ್ಮಾಣ ಮತ್ತು ಪಿನಾರಾದಲ್ಲಿ ಶಾಲೆ ನಿರ್ಮಾಣವನ್ನು ಜಂಟಿ ಒಪ್ಪಂದದಂತೆ ಟೆಂಡರ್ ಆಹ್ವಾನಿಸಲಾಗಿದೆ. ವಿಧಾನಸಭೆ ಭವನದಲ್ಲಿ ಪೂರಕ ಕಟ್ಟಡಗಳ ನಿರ್ಮಾಣಕ್ಕೂ ಜಂಟಿ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಇನ್ನೂ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ ಸರ್ಕಾರ ಮುಂದುವರಿಯಲು ನಿರ್ಧರಿಸಿದೆ. ಇನ್ನು ಮುಂದೆ ನಮ್ಮ ರಾಜ್ಯ ಎದುರಿಸುತ್ತಿದ್ದ ಸಮಸ್ಯೆಯನ್ನು ಕಾಂಪೆÇೀಸಿಟ್ ಟೆಂಡರ್ ಮೂಲಕವೇ ಪರಿಹರಿಸಲು ಸಾಧ್ಯವಾಗುತ್ತದೆ,’’ ಎನ್ನುತ್ತಾರೆ ಸಚಿವ ಪಿಎ ಮುಹಮ್ಮದ್ ರಿಯಾಝ್.
ನಿರ್ಮಾಣವು ಶಾಶ್ವತವಾಗಿ ಉಳಿಯುವುದಿಲ್ಲ:
ರಾಜ್ಯದಲ್ಲಿ ವಿದ್ಯುತ್ ಕೆಲಸಕ್ಕಾಗಿ ಸುಂದರವಾಗಿ ನಿರ್ಮಿಸಲಾದ ಕಟ್ಟಡವನ್ನು ಕಿತ್ತುಹಾಕುವುದು ಮತ್ತು ನವೀಕರಿಸುವುದು ತುಂಬಾ ಸಾಮಾನ್ಯವಾಗಿದೆ, ರಾಜ್ಯದಲ್ಲೂ ಸಾವಿರಾರು ಸರ್ಕಾರಿ ಕಟ್ಟಡಗಳು ನಿರ್ಮಾಣದ ನಂತರ ಕಿತ್ತುಹೋಗಿವೆ." ಎಂದಿರುವ ಸಚಿವರು ಇದಕ್ಕೆ ಕಡಿವಾಣ ಹಾಕಲು 2016ರ ಎಲ್ ಡಿಎಫ್ ಸರಕಾರ ನಿರಂತರವಾಗಿ ಮಧ್ಯಪ್ರವೇಶ ಮಾಡಿದೆ ಎಂದು ಹೇಳಿದರು. ವಿವಿಧ ಗುತ್ತಿಗೆದಾರರಿಗೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗಳನ್ನು ನೀಡಿದಾಗ, ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರವೂ ವಿದ್ಯುದ್ದೀಕರಣ ವಿಳಂಬದ ಕಾರಣ ವೈದ್ಯಕೀಯ ಕಾಲೇಜುಗಳು, ಕೆಎಸ್ಆರ್ಟಿಸಿ ಶಾಪಿಂಗ್ ಕಾಂಪ್ಲೆಕ್ಸ್, ಸರ್ಕಾರಿ ಆಸ್ಪತ್ರೆಗಳು ಇತ್ಯಾದಿಗಳನ್ನು ಮುಚ್ಚಬೇಕಾಯಿತು. ಸರ್ಕಾರದ ಈಗಿನ ಹೊಸ ಕ್ರಮವು ಈ ಪ್ರವೃತ್ತಿಯನ್ನು ಕೊನೆಗೊಳಿಸುವ ಉದ್ದೇಶಹೊಂದಿದೆ.
ಇನ್ನು ಮುಂದೆ ಒಳ್ಳೆಯ ಕಟ್ಟಡಗಳನ್ನು ಕಿತ್ತೊಗೆಯುವ ಅಗತ್ಯ ಬಾರದು: ಕೊನೆಗೂ ಎಚ್ಚೆತ್ತ ಸರ್ಕಾರ: ಇನ್ನೇನಿದ್ದರೂ ಸಂಯುಕ್ತ ಟೆಂಡರ್: ಸಚಿವರಿಂದ ಮಾಹಿತಿ: ಏನದು?
0
ಆಗಸ್ಟ್ 01, 2022
Tags




.webp)
