ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮದವರನ್ನು ಟೀಕಿಸಿದ್ದಾರೆ. ಮಾಧ್ಯಮ ಉದ್ಯಮದಲ್ಲಿನ ಭ್ರμÁ್ಟಚಾರವನ್ನು ಸರಿಪಡಿಸಲು ಮಾಧ್ಯಮ ಕಾರ್ಯಕರ್ತರೇ ಸಿದ್ಧರಾಗಬೇಕು ಎಂದಿರುವರು.
ಮಾಧ್ಯಮ ಕ್ಷೇತ್ರದಲ್ಲಿನ ನೀತಿ ವಿಧಾನಗಳಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದರು. ನಿನ್ನೆ ತಿರುವನಂತಪುರದಲ್ಲಿ ಆರಂಭಗೊಂಡ ಎರಡು ದಿನಗಳ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ (ಕೆಯುಡಬ್ಲುಜೆ)ಅವರು ಮಾತನಾಡಿದರು.
ಮಾಧ್ಯಮಗಳು ಅಪರಾಧಗಳನ್ನು ವರದಿ ಮಾಡಲು ಮತ್ತು ಅವುಗಳ ಕ್ರೆಡಿಟ್ ತೆಗೆದುಕೊಳ್ಳಲು ಪೈಪೆÇೀಟಿ ನಡೆಸುತ್ತವೆ. ನೀವು ಅಪರಾಧಗಳ ಬಗ್ಗೆ ಮಾಹಿತಿಯನ್ನು ಪಡೆದರೆ, ನೀವು ಕಾನೂನು ಜಾರಿ ಅಧಿಕಾರಿಗಳಿಗೆ ತಿಳಿಸಬೇಕು. ಅಪರಾಧಿಗಳೊಂದಿಗೆ ಹೊಂದಾಣಿಕೆಗಳು ಮತ್ತು ತಿಳುವಳಿಕೆಗಳಿವೆ. ಮಾಧ್ಯಮಗಳು ಇμÉ್ಟೂಂದು ಟೀಕೆ ಮಾಡಬೇಕಾದ ಅಗತ್ಯವೇ ಇಲ್ಲ ಎಂದು ಆರೋಪಿಸಿದರು.
ತಪ್ಪಿದಲ್ಲಿ ಕ್ಷಮೆ ಕೇಳುವುದರಲ್ಲಿ ಎಷ್ಟು ಘನತೆ ತೋರಿಸುತ್ತಾರೆ ಎಂದು ಪ್ರಶ್ನಿಸಿದರು. ಈ ಹಿಂದೆ ಸುದ್ದಿಯಲ್ಲಿ ತಪ್ಪಿದ್ದರೆ ವಿμÁದ ವ್ಯಕ್ತಪಡಿಸುತ್ತಿದ್ದರು. ಈಗಿನ ವರ್ತನೆಗೆ ಕೇರಳದ ಮಾಧ್ಯಮಗಳನ್ನು ಟೀಕಿಸಿದರು. ವಾಸ್ತವಕ್ಕೆ ಸಂಬಂಧಿಸದ ಕಾಲ್ಪನಿಕ ಸುದ್ದಿಗಳು ಬರುತ್ತಿದ್ದರೆ, ಅವರು ಹೀಗೆಯೇ ಮುಂದುವರಿಯಬಹುದೇ ಎಂದು ಪ್ರತಿಯೊಬ್ಬರು ಸ್ವತಃ ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿನ ನೀತಿ ವಿಧಾನಗಳನ್ನು ಸಾಮಾನ್ಯ ಸಮಾಜದಲ್ಲಿ ಬಹಿರಂಗವಾಗಿ ಪ್ರದರ್ಶಿಸಲಾಗುತ್ತದೆ. ಆದರೆ ಮಾಧ್ಯಮಗಳ ಸಾಂಸ್ಥಿಕ ಹಿತಾಸಕ್ತಿ ಮತ್ತು ರಾಜಕೀಯ ಹಿತಾಸಕ್ತಿ ಅದರ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು.
ತಪ್ಪು ಮಾಡಿದರೆ ಕ್ಷಮೆ ಕೇಳುವ ಸೌಜನ್ಯವಿರಬೇಕು; ಮಾಧ್ಯಮದಲ್ಲಿನ ಭ್ರμÁ್ಟಚಾರವನ್ನು ಸರಿಪಡಿಸಲು ಮಾಧ್ಯಮ ಕಾರ್ಯಕರ್ತರು ಸಿದ್ಧರಾಗಿರಬೇಕು; ಮುಖ್ಯಮಂತ್ರಿ
0
ಆಗಸ್ಟ್ 21, 2022
Tags




.webp)
