HEALTH TIPS

ಕಿಟ್‍ನಲ್ಲಿ ಅರ್ಧ ಲೀಟರ್ ತೆಂಗಿನ ಎಣ್ಣೆ ಮತ್ತು ಬಟ್ಟೆಯ ಚೀಲ ಸೇರಿದಂತೆ 14 ವಸ್ತುಗಳು: ಓಣಂ ಅನ್ನು ತೃಪ್ತಿಯಿಂದ ಆಚರಿಸಬೇಕು ಎಂದ ಮುಖ್ಯಮಂತ್ರಿ


          ತಿರುವನಂತಪುರ: ಓಣಂ ಆಚರಣೆಯ ಪ್ರಯುಕ್ತ ಆಗಸ್ಟ್ 22 ರಂದು ತಿರುವನಂತಪುರದಲ್ಲಿ ಓಣಂಕಿಟ್ ವಿತರಣೆಯ ರಾಜ್ಯಮಟ್ಟದ ಉದ್ಘಾಟನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
          ಆಗಸ್ಟ್ 23ರಂದು ಕಿಟ್ ವಿತರಣೆಯೂ ಆರಂಭವಾಗಲಿದೆ. ಎಎವೈ(ಹಳದಿ ಕಾರ್ಡ್) ಕಾರ್ಡ್ ಹೊಂದಿರುವವರಿಗೆ ಆಗಸ್ಟ್ 23 ಮತ್ತು 24, ಪಿ.ಎಚ್.ಎಚ್.(ಗುಲಾಬಿ) ಕಾರ್ಡ್‍ದಾರರಿಗೆ 25, 26 ಮತ್ತು 27 ಮತ್ತು ಎನ್.ಪಿ.ಎಸ್(ನೀಲಿ) ಕಾರ್ಡ್‍ದಾರರಿಗೆ 29, 30 ಮತ್ತು 31 ಹಾಗೂ  ಸೆಪ್ಟೆಂಬರ್ 1 ಮತ್ತು 2 ಹಾಗೂ 3 ರಂದು ಎನ್.ಪಿ.ಎನ್.ಎಸ್(ಬಿಳಿ)ಕಾರ್ಡ್ ಹೊಂದಿದವರು ು 3 ದಿನಾಂಕಗಳಲ್ಲಿ ಪಡಿತರ ಅಂಗಡಿಗಳಿಂದ ಕಿಟ್‍ಗಳನ್ನು ಖರೀದಿಸಬಹುದು.
          ಈ ದಿನಗಳಲ್ಲಿ ಕಿಟ್ ಖರೀದಿಸಲು ಸಾಧ್ಯವಾಗದ ಎಲ್ಲಾ ವರ್ಗಗಳಿಗೆ ಸೇರಿದ ಕಾರ್ಡುದಾರರು ಸೆಪ್ಟೆಂಬರ್ 4 ರಿಂದ 7 ರವರೆಗೆ ಖರೀದಿಸಬಹುದು. ಸೆಪ್ಟೆಂಬರ್ 7ರ ನಂತರ ಒಣಂಕಿಟ್ ಪೂರೈಕೆ ಇರುವುದಿಲ್ಲ. 87 ಲಕ್ಷ ಪಡಿತರ ಚೀಟಿದಾರರಿಗೆ ಕಿಟ್ ಲಭ್ಯವಾಗಲಿದೆ. ರಾಜ್ಯದ 890 ಕಲ್ಯಾಣ ಸಂಸ್ಥೆಗಳು ಮತ್ತು 119 ಬುಡಕಟ್ಟು ಗ್ರಾಮಗಳಲ್ಲಿ 37,634 ಜನರ ಮನೆ ಬಾಗಿಲಿಗೆ ಕಿಟ್‍ಗಳನ್ನು ತಲುಪಿಸಲಾಗುತ್ತದೆ. ಓಣಂಕಿಟ್‍ಗಾಗಿ ಸರ್ಕಾರ 425 ಕೋಟಿ ರೂ.ವೆಚ್ಚ ಭರಿಸಲಿದೆ ಎಂದರು.
           ಕಿಟ್‍ನಲ್ಲಿ ತಲಾ 500 ಗ್ರಾಂ ತೆಂಗಿನ ಎಣ್ಣೆ, ಒಣ ಬೇಳೆ, ಕಡಲೆ, 250 ಗ್ರಾಂ ಗೋಡಂಬಿ, 100 ಗ್ರಾಂ ಮೆಣಸಿನ ಪುಡಿ, ಅರಿಶಿನ ಪುಡಿ, ಚಹಾ, ಬೆಲ್ಲದ ಶರ್ಕರೆ/ಚಿಪ್ಸ್, ತಲಾ 1 ಕೆಜಿ ಸಕ್ಕರೆ, ಪುಡಿ, 50 ಗ್ರಾಂ ಗೋಡಂಬಿ, ತುಪ್ಪ, ಏಲಕ್ಕಿ 20 ಗ್ರಾಂ ಸೇರಿದಂತೆ 14 ವಸ್ತುಗಳನ್ನು ಒಳಗೊಂಡಿದೆ. ಮತ್ತು ಬಟ್ಟೆ ಚೀಲ ಇರಲಿದೆ. ಇದಲ್ಲದೆ, ಓಣಂ ಸಂದರ್ಭದಲ್ಲಿ ಹಳದಿ ಕಾರ್ಡ್ ಹೊಂದಿರುವವರಿಗೆ ವಿಶೇಷವಾಗಿ 1 ಕೆಜಿ ಸಕ್ಕರೆಯನ್ನು 21 ರೂ.ಗೆ ಮತ್ತು 10 ಕೆಜಿ ಅಕ್ಕಿ (5 ಕೆಜಿ ಯಂತೆ ಬಿಳ್ತಿಗೆ ಹಾಗೂ ಕುಚ್ಚಳು ಅಕ್ಕಿ) 10.90 ರೂ.ಗೆ ಲಭಿಸಲಿದೆ. ಎಲ್ಲಾ ಅರ್ಹರು ತಪ್ಪದೆ ಸಮಯಕ್ಕೆ ಸರಿಯಾಗಿ ಕಿಟ್‍ಗಳನ್ನು ಪಡೆಯಬೇಕು. ಈ ವರ್ಷದ ಓಣಂ ಅನ್ನು ನಾವು ಸಂತೋಷ ಮತ್ತು ತೃಪ್ತಿಯಿಂದ ಆಚರಿಸಬೇಕು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries