ಪತ್ತನಂತಿಟ್ಟ: ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಶಬರಿಮಲೆಗೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಶಬರಿಮಲೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಅಲ್ಲದೆ ಶಬರಿಮಲೆಯಲ್ಲಿ ನಡೆಯುತ್ತಿರುವ ಅರಣ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಶಬರಿಮಲೆಗೆ ಭೇಟಿ ನೀಡಿದ ಮಾಧ್ಯಮಗಳೊಂದಿಗೆ ಕೇಂದ್ರ ಸಚಿವರು ಈ ಮಾಹಿತಿ ನೀಡಿರುವರು.
ಶಬರಿಮಲೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ದೇವಸ್ವಂ ಮಂಡಳಿ ಅಥವಾ ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು. ದೇವಸ್ವಂ ಮಂಡಳಿ ಸೂಕ್ತ ಯೋಜನೆ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲು ಸಿದ್ಧವಿದ್ದರೆ ಕೇಂದ್ರದಿಂದ ಎಲ್ಲ ಬೆಂಬಲ ದೊರೆಯಲಿದೆ ಎಂದರು.
ಶಬರಿಮಲೆ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ಸದಾ ಬದ್ಧವಾಗಿದೆ. ಶಬರಿಮಲೆ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಬಹಳ ಹಿಂದಿನಿಂದಲೂ ವಿವಾದವಿದೆ. ಇದನ್ನು ಪರಿಹರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಚರ್ಚೆ ನಡೆಸಲಿದೆ. ಪ್ರಧಾನಿ ಶೀಘ್ರದಲ್ಲೇ ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ಆದರೆ ಯಾವಾಗ ಎಂದು ನಿರ್ಧರಿಸಲಾಗಿಲ್ಲ. ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಅವರು ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದರು.
ರಾಜೀವ್ ಚಂದ್ರಶೇಖರ್ ಶಬರಿಮಲೆಗೆ ಭೇಟಿ ನೀಡುತ್ತಿರುವುದು ಇದು 26ನೇ ಬಾರಿ. ಸನ್ನಿಧಿಗೆ ತಲುಪಿದಾಗ ಶಕ್ತಿ ತುಂಬುತ್ತದೆ ಎಂದೂ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಪ್ರಧಾನಿ ನರೇಂದ್ರಮೋದಿ ಶೀಘ್ರ ಆಗಮಿಸಲಿರುವರು: ಶಬರಿಮಲೆ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧ; ರಾಜೀವ್ ಚಂದ್ರಶೇಖರ್
0
ಆಗಸ್ಟ್ 19, 2022





