ಬದಿಯಡ್ಕ: ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುಮಾಸ್ಯದ ಅಂಗವಾಗಿ ಶನಿವಾರ ಖ್ಯಾತ ಯಕ್ಷಿಣಿಗಾರ ಕುದ್ರೋಳಿ ಗಣೇಶ್ ಅವರಿಂದ ಮಾಯಾಜಾಲ ಜಾದೂ ಪ್ರದರ್ಶನಗೊಂಡಿತು.
ತಮ್ಮದೇ ವಿವಿಷ್ಟ ಶೈಲಿಯ ಮೂಲಕ ಜಗದ್ವಿಖ್ಯಾತರಾಗಿರುವ ಕುದ್ರೋಳಿ ಗಣೇಶ್ ತಮ್ಮ ಜಾದೂ ಮೂಲಕ ಭೂತಾರಾದನೆಯನ್ನು ಜಗದಗಲ ಪ್ರಚುರಪಡಿಸಿದವರು. ಮೊನ್ನೆ ಎಡನೀರಲ್ಲಿ ನಡೆದ ಜಾದೂ ಪ್ರದರ್ಶನ ಹೊಸ ಅನುಭೂತಿ ನೀಡಿತು. ಪ್ರದರ್ಶನದ ಮೊದಲ ಭಾಗದಲ್ಲಿ ಹರಿಕಥಾ ಕೀರ್ತನೆಯ ಶೈಲಿಯಲ್ಲಿ ಜಾದೂ ಪ್ರದರ್ಶಿಸಿ ಮೈನವಿರೇಳಿಸಿದರು. ಬಳಿಕ ಸಾಂಪ್ರದಾಯಿಕ ಜಾದೂಗಳನ್ನು ನವೀನ ಮಾರ್ಗಗಗಳಲ್ಲಿ ಸಮರ್ಥವಾಗಿ ಪ್ರದರ್ಶಿಸಿ ಯಶಸ್ವಿಯಾಗಿ ಮುನ್ನಡೆಸಿ ಜನಮನ್ನಣೆಗೆ ಪಾತ್ರರಾದರು.




.jpg)
.jpg)
