HEALTH TIPS

ಆರರ ಹರೆಯ: ತವಕ-ತಳಮಳ: ಸಮರಸ ಸುದ್ದಿ ದಾಟಿದ ಐದು ಸಂವತ್ಸರ: ಪ್ರಜ್ಞಾನಂ ಬ್ರಹ್ಮನ್ ನತ್ತ

                                   
            ಹೌದು, ಓದುಗರೇ ರೂಪಿಸಿದ ಸಮರಸ ಸುದ್ದಿ ಇಂದೀಗ ಯಶಸ್ವೀ ಐದನೇ ವರ್ಷ ಪೂರೈಸಿ ಆರನೇ ವರ್ಷಕ್ಕೆ ಪ್ರವೇಶಿಸಿದೆ. 2017ರ ಆಗಸ್ಟ್ 28 ರಂದು ಗಡಿನಾಡು ಕಾಸರಗೋಡಿನ ಕನ್ನಡ ನೆಲದಲ್ಲಿ ಹುಟ್ಟಿಕೊಂಡ ಮೊದಲ ಇಲೆಕ್ಟ್ರಾನಿಕ್ ಅಥವಾ ಆಧುನಿಕ ಸುದ್ದಿ ಮಾಧ್ಯಮ ಸಮರಸ ಸುದ್ದಿ ಲಕ್ಷಾಂತರ ಓದುಗ ಅಭಿಮಾನಿಗಳ ಹೃದಯ ಪಲ್ಲವಗಳ ಸುದ್ದಿ ಸಂಗಾತಿಯಾಗಿ ಒಂದಷ್ಟು ತೃಪ್ತಿ ನೀಡಿದೆ  ಎಂದು ಭಾವಿಸುವೆವು.
         21ನೇ ಶತಮಾನದ ಈ ಪೂರ್ವಾರ್ಧದಲ್ಲಿ ಹಿಂದಿನ ತಲೆಮಾರು ಊಹಿಸಲಾರದ ಹಲವು ಬದಲಾವಣೆಗಳ ಮಹಾ ನೆಗೆತ ಜಗತ್ತನ್ನು ಬದಲಾಯಿಸಿದೆ. ಈ ಪೈಕಿ ಬಹುಮುಖ್ಯವಾಗಿ ಸಮೂಹ ಸಂವಹನ ವ್ಯವಸ್ಥೆ ಬದಲಾಯಿಇಸದ ಮಗ್ಗುಲು ಅನೂಹ್ಯ ಸಾಗರೋಲ್ಲಂಘನ ಎನ್ನದೆ ಬೇರೇನೆನ್ನೋಣ!. ಇಂದು ಕ್ಷಣ ಕ್ಷಣದ ವಿದ್ಯಮಾನಗಳು ಜನರ ಕೈಗಳಿಗೆ ಲಭಿಸುತ್ತಿರುವುದು ; ಅದೂ ಸಪ್ತ ಖಂಡಗಳ ಭೇದಗಳಿಲ್ಲದೆ ಜನರ ಕೈಗಳಿಗೆ ಲಭಿಸುವ ಮಾಹಿತಿಗಳ ಮಧ್ಯೆ ಸಾಗುತ್ತಿದೆ….ಅಲ್ಲ ನಾಗಾಲೋಟದಲ್ಲಿದ್ದೇವೆ…ನಾವೂ…ನೀವು.
           ಆದರೆ ಮಥನದ ಮಧ್ಯೆ ಅಮೃತದ ಮೊದಲು ಹಾಲಾಹಲ ಹೊರಸೂಸುವಂತೆ, ಸಂಘರ್ಷಪೂರಿತ ಈ ಜಗದಗಲದ ಜನರ ಹೃದಯ ಕಸಿಯುವ ಪೈಪೋಟಿಯಲ್ಲಿ ವಸ್ತುನಿಷ್ಠತೆಗೆ ಹಲವೊಮ್ಮೆ ನ್ಯಾಯದೊರಕಿಸುವುದು ದೊಡ್ಡ ಸವಾಲು. ಹಾರ ಹಾವಾಗುವ ಮಧ್ಯೆ       ಮನಸ್ಸು, ಚಿತ್ತ, ಬುದ್ದಿಗಳ ಕಠೋರತೆಗಳ ಕಡೆದು ವೀಕ್ಷಕನಿಗೆ ನೈಜತೆಯನ್ನು ತೋರಿಸುವ, ಪರಿಚಯಿಸುವ ಮಾಧ್ಯಮ ತಂತ್ರಗಾರಿಕೆ ಸವಾಲಾದರೂ ಕಷ್ಟವಲ್ಲ.
         ಪ್ರಸ್ತುತ ಸಮರಸ ಸುದ್ದಿ ಗ್ರಹಿಸಿದಷ್ಟು, ಉದ್ದೇಶಿತ ಮಟ್ಟದ ತಾಂತ್ರಿಕ, ವ್ಯಾವಹಾರಿಕ ಏರು ಪಡೆಯುವಲ್ಲಿ ನಿಧಾನತೆಯಿದ್ದರೂ, ಕ್ಲಪ್ತ ಕಾಲಕ್ಕೆ ಓದುಗರಿಗೆ ಸಮರ್ಪಕ ಧನಾತ್ಮಕ ಸುದ್ದಿಗಳನ್ನು ಯಶಸ್ವಿಯಾಗಿ ದಾಟಿಸುತ್ತಿದೆ ಎಂಬುದಕ್ಕೆ 1.5 ಲಕ್ಷಕ್ಕೂ ಮಿಕ್ಕಿದ ಓದುಗರೇ ಸಾಕ್ಷಿ. ಅನಿರೀಕ್ಷಿತವಾಗಿ ಬಂದೆರಗಿದ ಕೋವಿಡ್ ಮಹಾಮಾರಿಯ ನಡುವೆಯೇ ಅನುಭವಿಸಿದ ಸಂಕಷ್ಟಗಳು ನಮ್ಮ ಸುದ್ದಿಸಂಸ್ಥೆಗೂ ಬಹುಹಾನಿ ತಂದಿದ್ದು ಹೌದು. ಸುದ್ದಿಯಲ್ಲಿ ಅಗ್ರತೆಯಿದ್ದರೂ ಆರ್ಥಿಕವಾಗಿ ಸೋತಿರುವುದು ಗೌಪ್ಯವಲ್ಲ. ಆದರೂ ಮುನ್ನಡೆಸಬೇಕೆಂಬ ಛಲ, ಓದುಗರ ಪ್ರೋತ್ಸಾಹ 6 ಕ್ಕೆ ಎತ್ತಿ ನಿಲ್ಲಿಸಿದೆ. ಒಂದೊಂದೇ ಮೆಟ್ಟಲೇರಿದಂತೆ ಕೆಳ ಕುಸಿಯುವ ಭೀತಿ ಸಹಜವಾದರೂ ಸಹೃದಯ ಓದುಗರ ಮೆತ್ತನೆಯ ಕೈಗಳು ಆಧರಿಸುವವು ಎಂಬ ಭರವಸೆ ಮೇಲೇರಲು ಪ್ರೇರೇಪಿಸಿರುವುದೂ ಹೌದು.
            ಸಮರಸ ಸುದ್ದಿಯ ಬೆಳವಣಿಗೆಗೆ ಪ್ರೇರಕರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪೂರ್ಣಾನುಗ್ರಹ ಬಲ ನೀಡಿದೆ. ಶ್ರೀಪೀಠಕ್ಕೆ ಮನಸಾ ಅಭಿನಮಿಸಿ ಸಂಪ್ರಾಪ್ತಿಸುವುದು ಸಮರಸ ಸುದ್ದಿಯ ಕರ್ತವ್ಯ. ಜೊತೆಗೆ ಓದುಗರಿಗೂ, ಪ್ರೇರಕರಿಗೂ, ಜಾಹೀರಾತುದಾರರಿಗೂ ಹೃದಯಪೂರ್ವಕ ನಮನಗಳು. ಬೆಂಬಲವಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇರಳ ಘಟಕ, ಕೇರಳ ರಾಜ್ಯ ಜರ್ನಲಿಸ್ಟ್ ಯೂನಿಯನ್, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪದಾಧಿಕಾರಿಗಳು, ಪಿಟಿಐ ಸುದ್ದಿ ಸಂಸ್ಥೆ, ಪ್ರಸಾರ ಭಾರತಿಯ ಅಧಿಕೃತರಿಗೆ ಅಂತರಾಳದ ವಂದನೆಗಳು.
           ಶ್ರೀಮತಿ ಅಕ್ಷತಾ ಭಟ್.
                 ಸಂಪಾದಕಿ         
                                                   ಪುರುಷೋತ್ತಮ ಭಟ್ ಕೆ.
                                                                                        ಕಾರ್ಯನಿರ್ವಾಹಕ ಸಂಪಾದಕ



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries