HEALTH TIPS

ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ PSI​ ದುರಂತ ಸಾವು: ಠಾಣೆ ಒಳಗೆ ಕಾಲಿಡುತ್ತಿದ್ದಂತೆ ನಡೆಯಿತು ದುರಂತ

 

           ಕೊಯಿಕ್ಕೋಡ್: ಪೊಲೀಸ್​ ಠಾಣೆಯ ಒಳಗೆ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಕೇರಳದ ಥಾಮರಸ್ಸೆರೆ ಠಾಣೆಯಲ್ಲಿ ನಡೆದಿದೆ.

                  ಸನೋಜ್​ (37) ಮೃತ ಸಬ್ ಇನ್ಸ್​ಪೆಕ್ಟರ್​. ಕರ್ತವ್ಯ ನಿಮಿತ್ತ ಪೊಲೀಸ್​ ಠಾಣೆಗೆ ಆಗಮಿಸಿದ ಸನೋಜ್​, ಠಾಣೆಯ ಒಳಗೆ ಕಾಲಿಡುತ್ತಿದ್ದಂತೆಯೇ ಎದೆ ನೋವಿನಿಂದಾಗಿ ಎದೆ ಹಿಡಿದುಕೊಂಡು ಕುಸಿದು ಬಿದ್ದರು.

                  ಠಾಣೆಯಲ್ಲಿ ಸಿಬ್ಬಂದಿ ಸನೋಜ್​ ಕುಸಿದು ಬಿದ್ದಿದ್ದನ್ನು ನೋಡಿ, ತಕ್ಷಣ ಅವರನ್ನು ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಹಾಸ್ಪಿಟಲ್​ಗೆ ಚಿಕಿತ್ಸೆಗೆಂದು ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸನೋಜ್​ ಕೊನೆಯುಸಿರೆಳೆದಿದ್ದಾರೆ.

                    ಸನೋಜ್​ ಸಾವಿನ ಸುದ್ದಿ ಕೇಳಿ ಅವರ ಕುಟುಂಬಕ್ಕೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸಹೋದ್ಯೋಗಿಯೊಬ್ಬರನ್ನು ಕಳೆದುಕೊಂಡ ಸಿಬ್ಬಂದಿ ಸಹ ಕಂಬನಿ ಮಿಡಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries