ಕಾಸರಗೋಡು: ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿ, ಬಡ್ತಿಯೊಂದಿಗೆ ವರ್ಗಾವಣೆಗೊಳ್ಳುತ್ತಿರುವ ಲೋಕೇಶ್ ಆಚಾರ್ಯ ಅವರು ತನ್ನ ಸಹೋದರನಿಗೇ ಅಧಿಕಾರ ವಹಿಸಿಕೊಡುವ ಅಪೂರ್ವ ಸನ್ನಿವೇಶಕ್ಕೆ ಕಾಸರಗೋಡು ಕೂಡ್ಲು ಗ್ರಾಮಾಧಿಕಾರಿ ಕಚೇರಿ ಸಾಕ್ಷಿಯಾಯಿತು.
ಕೂಡ್ಲು ಗ್ರಾಮಾಧಿಕಾರಿ ಕಚೇರಿಯಲ್ಲಿ ಕಳೆದ ಹಲವು ಸಮಯದಿಂದ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಬಿ ಲೋಕೇಶ್ ಆಚಾರ್ಯ ಅವರು ಲ್ಯಾಂಡ್ ಟ್ರಿಬ್ಯೂನಲ್ ವಿಶೇಷಾಧಿಕಾರಿಯಾಗಿ ಬಡ್ತಿಗೊಂಡು ವರ್ಗಾವಣೆಗೊಳ್ಳುತ್ತಿದ್ದು, ಇವರ ಜಾಗಕ್ಕೆ ಸಹೋದರ ಜಯಪ್ರಕಾಶ್ ಆಚಾರ್ಯ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಈ ಹಿಂದೆ ಎರ್ನಾಕುಳಂ ಜಿಲ್ಲೆಯ ತಿರುವಾಂಕುಳಂ ಗ್ರಾಮಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ರಕಾಶ್ ಅವರನ್ನು ಕೂಡ್ಲು ಗ್ರಾಮಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ. ಕೂಡ್ಲು ಗ್ರಾಮಾಧಿಕಾರಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಲೋಕೇಶ್ ಆಚಾರ್ಯ ಅವರು ಸಹೋದರ ಜಯಪ್ರಕಾಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಚೇರಿಯ ಇತರ ಸಿಬ್ಬಂದಿ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು. ಲೋಕೇಶ್ ಆಚಾರ್ಯ ಅವರು 2003ರಲ್ಲಿ ತಾಲೂಕು ಕಚೇರಿಯಲ್ಲಿ ಎಲ್.ಡಿ ಕ್ಲರ್ಕ್ ಆಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿದ್ದರೆ, ಜಯಪ್ರಕಾಶ್ ಅವರು 2006ರಲ್ಲಿ ರೀಸರ್ವೇ ವಿಭಾಗದ ಕಚೇರಿಯಲ್ಲಿ ಎಲ್‍ಡಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರ್ಪಡೆಗೊoಡಿದ್ದರು.
ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದ ಕೂಡ್ಲು ಗ್ರಾಮಾಧಿಕಾರಿ ಕಚೇರಿ: ಅಣ್ಣನಿಂದ ಅಧಿಕಾರ ಸ್ವೀಕರಿಸಿದ ತಮ್ಮ
0
ಸೆಪ್ಟೆಂಬರ್ 03, 2022
Tags





