HEALTH TIPS

ಉದ್ಯಮಶೀಲತೆ ಅಭಿವೃದ್ಧಿಯತ್ತ ನೀಲೇಶ್ವರದ ದಾಪುಗಾಲು: ನುಗ್ಗೆ ಮತ್ತು ತುಳಸಿ ಎಲೆಗಳಿಂದ ಚಹಾದಂತ ಪೇಯ ತಯಾರಿಗೆ ಸಿದ್ದತೆ



             ಕಾಸರಗೋಡು: ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ವಿನೂತನ ಯೋಜನೆಯೊಂದಿಗೆ ನೀಲೇಶ್ವರ ಬ್ಲಾಕ್ ಪಂಚಾಯತಿ ಉದ್ಯುಕ್ತವಾಗಿದೆ.
           ನೀಲೇಶ್ವರ ಬ್ಲಾಕ್ ಪಂಚಾಯತಿ ವತಿಯಿಂದ ತುಳಸಿ ಎಲೆಗಳು, ನುಗ್ಗೆ ಎಲೆ ಇತ್ಯಾದಿಗಳಿಂದ ಚಹಾ ಹುಡಿಯಂತೆ ಬಳಸಬಹುದಾದ ಪೇಯದ  ಪ್ಯಾಕೆಟ್ ಗಳನ್ನು ತಯಾರಿಸಲು ಉಪಕ್ರಮವನ್ನು ಸ್ಥಾಪಿಸುತ್ತಿದೆ. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯೋಜನೆ ಅನುμÁ್ಠನಗೊಳಿಸಲಾಗುವುದು. ಕೃಷಿ ಇಲಾಖೆ ಮೂಲಕ ನುಗ್ಗೆ ಮತ್ತು ತುಳಸಿ ಸಸಿಗಳನ್ನು ವಿತರಿಸಲಾಗುತ್ತದೆ. ನುಗ್ಗೆ ಮತ್ತು ತುಳಸಿ ಎಲೆಗಳನ್ನು ಒಣಗಿಸಿ ರುಬ್ಬುವ ಮೂಲಕ ಚಹಾ ಪ್ಯಾಕೆಟ್ ತಯಾರಿಸಲಾಗುತ್ತದೆ.
          ತುಳಸಿ ಎಲೆಯ ರಸವನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ನೆಗಡಿ ಮತ್ತು ಕೆಮ್ಮುಗಳಿಗೆ ಔಷಧಿಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ತುಳಸಿ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
     ನುಗ್ಗೆ ನೀಲೇಶ್ವರ ಬ್ಲಾಕ್‍ನಲ್ಲಿ ವ್ಯಾಪಕವಾಗಿ ಬೆಳೆಸಲಾಗುವ ಸಸ್ಯವಾಗಿದೆ. ಪ್ರಸ್ತುತ, ನುಗ್ಗೆ ಮತ್ತು ಅದರ ಕೊಂಬು(ನುಗ್ಗೆ ಕೊಂಬು) ನೇರವಾಗಿ ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ. ನುಗ್ಗೆ ಎಲೆಗಳು ಕೊಬ್ಬು ಮುಕ್ತ ಮಾತ್ರವಲ್ಲದೆ ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಥಯಾಮಿನ್‍ಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ, ನುಗ್ಗೆ ಎಲೆಗಳನ್ನು ತುಂಬಾ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಮಧುಮೇಹ, ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ನಿಯಂತ್ರಿಸಲು ಸಹ ಇದನ್ನು ಬಳಸಲಾಗುತ್ತದೆ.ನಿಮಿಷಗಳಲ್ಲಿ ಬಾಡಿಹೋಗುವ ಈ ಮಹತ್ವದ ಎಲೆ ಭವಿಷ್ಯದ ಜೀವಕಾಶಿಯಾಗಲಿದ್ದು, ಮೌಲ್ಯವರ್ಧಿತ ವಸ್ತುವಾಗಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇವನ್ನು ಮೌಲ್ಯವರ್ಧಿತ ಉತ್ಪನ್ನವಾಗಿಸಿ  ಮಾರುಕಟ್ಟೆಗೆ ತರುವುದು ಗುರಿಯಾಗಿದೆ.



     ಟೀ ಬ್ಯಾಗ್ ಯೋಜನೆಯ ಮೂಲಕ ನುಗ್ಗೆ ಮತ್ತು ತುಳಸಿ ಎಲೆಗಳ ಮೌಲ್ಯವನ್ನು ಹೆಚ್ಚಿಸುವ ಮತ್ತು ಆ ಮೂಲಕ ರೈತರಿಗೆ ಹೆಚ್ಚಿನ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಷಿ ಇಲಾಖೆ ಸಹಯೋಗದಲ್ಲಿ ಬ್ಲಾಕ್ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ನುಗ್ಗೆ ಮತ್ತು ತುಳಸಿ ಸಸಿಗಳನ್ನು ವಿತರಿಸುವ ಮೂಲಕ ಟೀ ಬ್ಯಾಗ್ ತಯಾರಿಕೆಗೆ ಮುಂದೆ ಬರುವ ಉದ್ಯಮಿಗಳನ್ನು ಆಕರ್ಷಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಹಯೋಗದಲ್ಲಿ ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಈ ಯೋಜನೆ ಉದ್ಯಮಿಗಳಿಗೆ ಮಾರುಕಟ್ಟೆಯನ್ನು ಖಚಿತಪಡಿಸುತ್ತದೆ. ತಲಾ ಇಬ್ಬರು ಸದಸ್ಯರಿರುವ ಎರಡು ಮಹಿಳಾ ಗುಂಪುಗಳಿಗೆ ಪ್ರೋತ್ಸಾಹಧನವಾಗಿ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ. ಕೈಗಾರಿಕೆ ಇಲಾಖೆಯ ಸಹಯೋಗದಲ್ಲಿ ಬ್ಲಾಕ್ ಪಂಚಾಯಿತಿ ನಾಲ್ಕು ಲಕ್ಷ ರೂಪಾಯಿಗಳನ್ನು ಯೋಜನೆಗೆ ಮೀಸಲಿಟ್ಟಿದೆ.
          ಮೊದಲ ಹಂತದಲ್ಲಿ, ಎರಡು ಗುಂಪುಗಳು ಯೋಜನೆಯನ್ನು ಪ್ರಾರಂಭಿಸಲು ಸಹಾಯವನ್ನು ಪಡೆಯಲಿವೆ. ಬ್ಲಾಕ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಾಸಿಸುತ್ತಿರುವ 18 ರಿಂದ 59 ವರ್ಷ ವಯಸ್ಸಿನ ನಿರುದ್ಯೋಗಿಗಳು ವ್ಯಾಪಾರವನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.  ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬದ ವಾರ್ಷಿಕ ಆದಾಯ ಐದು ಲಕ್ಷ ರೂಪಾಯಿ ಮೀರಬಾರದು. ಈ ಹಿಂದೆ ಸರ್ಕಾರದ ಇತರ ಯೋಜನೆಗಳಿಂದ ಪ್ರಯೋಜನ ಪಡೆಯದವರಾಗಿರಬೇಕು.
        ಯೋಜನೆಗೆ ಅಗತ್ಯವಿರುವ ಒಟ್ಟು ಮೊತ್ತದ 75 ಪ್ರತಿಶತವನ್ನು ಸಹಾಯಧನವಾಗಿ ಪಡೆಯಲಾಗುತ್ತದೆ. ಯೋಜನೆಯನ್ನು ಪ್ರಾರಂಭಿಸಲು ಅಗತ್ಯ ತರಬೇತಿ ಮತ್ತು ತಾಂತ್ರಿಕ ನೆರವು ಸಿಪಿಸಿಆರ್ ಐ ಮೂಲಕ ನೀಡಲಾಗುವುದು. ಅರ್ಜಿಗಳನ್ನು ಗ್ರಾಮ ಸಭೆಯ ಮೂಲಕ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ನವೀನ ಮಾದರಿ ಯೋಜನೆಯ ಮೂಲಕ, ಬ್ಲಾಕ್ ಪಂಚಾಯತ್ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಆ ಮೂಲಕ ಸ್ಥಳೀಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
                           ಅಭಿಮತ:
         ಕೋವಿಡ್ ಸಂದರ್ಭ ವಿವಿಧ ಆಯುರ್ವೇದಿಕ್ ಎಲೆ, ಬೇರುಗಳನ್ನು ಜನರು ಬಳಸಿ ರೋಗ ನಿರೋಧಕ ಶಕ್ತಿ ಪಡೆದಿರುವುದರಿಂದ ಪ್ರೇರಣೆಗೊಂಡು ಹೀಗೊಂದು ಉಪಕ್ರಮಕ್ಕೆ ಯೋಚಿಸಲಾಗಿದೆ. ಆಸಕ್ತ ಜನರು ತಂಡಗಳ ಮೂಲಕ ನುಗ್ಗೆ ಮತ್ತು ತುಳಸಿ ಎಲೆಗಳ ಪುಡಿ ಮಿಶ್ರಗೊಳಿಸಿ ಹೊಸ ಪೇಯ(ಚಹಾದಂತೆ) ತಯಾರಿಸಲು ಯೋಜನೆ ರೂಪಿಸಲಾಗಿದೆ. ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ಮೊದಲ ಹಂತದ ತರಬೇತಿ, ಸಸಿಗಳ ವಿತರಣೆಗೆ 4 ಲಕ್ಷ ರೂ. ಮೀಸಲಿಡಲಾಗಿದ್ದು ಆಸಕ್ತರಿಂದ ಅರ್ಜಿ ಅಪೇಕ್ಷಿಸಲಾಗಿದೆ. ಬಳಿಕ ಸಿಪಿಸಿಆರ್ ಐ ಮೂಲಕ ತರಬೇತಿ ನೀಡಲಾಗುತ್ತದೆ. ಉತ್ಪನ್ನವನ್ನು ಸಿಪಿಸಿಆರ್ ಐ ಸಹಿತ ಇತರ ನಂಬಿಕಸ್ಥ ಏಜೆನ್ಸಿಗಳ ಮೂಲಕ ಮಾರಾಟಮಾಡಲಾಗುತ್ತದೆ. ಆನರು ಕೈಜೋಡಿಸಿ ಯಶಸ್ವಿಗೊಳಿಸಬೇಕು.
                                -ಮಾಧವನ್ ಮಣಿಯರ
                          ಅಧ್ಯಕ್ಷರು. ನೀಲೇಶ್ವರ ಬ್ಲಾಕ್ ಪಂಚಾಯತಿ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries