ಮಂಜೇಶ್ವರ: ಬಿಜೆಪಿ ಪಕ್ಷ ಸಂಘಟನಾತ್ಮಕ ಸಂಘಟನೆಯಾಗಿದ್ದು ಕಾರ್ಯಕರ್ತರು ಪಕ್ಷದ ಶಕ್ತಿ. ತತ್ವ, ಸಿದ್ದಾಂತ, ದೇಶದ ಪರಿಕಲ್ಪನೆ, ದೇಶ ಭಕ್ತಿ ನಮ್ಮ ಸಂಘಟನಾತ್ಮ ಬೆಳವಣಿಗೆಗೆ ಪೂರಕ. ಕೇರಳ ಸರ್ಕಾರ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಮಂಜೇಶ್ವರ ಶಾಸಕರು ವಿಧಾನ ಸಭೆಯ ಒಳಗೂ ಸುಳ್ಳು ಹೇಳುವ ಜಾಯಮಾನ ಆ ಸ್ಥಾನಕ್ಕ್ಕೆ ಶೋಭೆ ಅಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಮೀಯಪದವಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸದಸ್ಯೆ ಅಶ್ವಿನಿ ಪಜ್ವ, ಹರಿಶ್ಚಂದ್ರ ಎಂ, ಎ.ಕೆ. ಕಯ್ಯಾರು, ಮಣಿಕಂಠ ರೈ ಪಟ್ಲ, ಮನುಲಾಲ್ ಮೇಲೋತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.
ಬಿಜೆಪಿ ಸಂಘಟನಾತ್ಮ ಸಂಘಟನೆ: ರವೀಶ ತಂತ್ರಿ
0
ಸೆಪ್ಟೆಂಬರ್ 07, 2022




.jpg)
