ಕಾಸರಗೋಡು: ಜೀವನಂ ಡಯಾಲಿಸಿಸ್ ಸೆಂಟರ್ ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸುವ ಮೂಲಕ ಸಂಕಷ್ಟದ ಮಧ್ಯೆ ಭರವಸೆಯ ನಿಟ್ಟುಸಿರಿಗೆ ಕಾರಣವಾಗಲಿದೆ.
ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಪೆರಿಯ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಜೀವನಂ ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಯ 23 ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ.
ಎಂಟು ಡಯಾಲಿಸಿಸ್ ಯಂತ್ರಗಳು ಮತ್ತು ಹಾಸಿಗೆಗಳನ್ನು ಇಲ್ಲಿ ಸಜ್ಜುಗೊಳಿಸಲಾಗಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ ಎರಡು ಪಾಳಿಯಲ್ಲಿ 12 ನೌಕರರು ಇಲ್ಲಿ ಕೆಲಸ ಮಾಡುತ್ತಾರೆ.
ಮೂತ್ರಪಿಂಡ ಕಸಿ ಪರಿಹಾರವಾಗಿದೆ, ಆದರೆ ಅಲ್ಲಿಯವರೆಗೆ ಡಯಾಲಿಸಿಸ್ ಜೀವವನ್ನು ಉಳಿಸಿಕೊಳ್ಳಲು ಇಲ್ಲಿಯ ಸೌಕರ್ಯಗಳು ನೆರವಾಗಲಿದೆ. ಆದರೆ ದುಬಾರಿ ಡಯಾಲಿಸಿಸ್ ಅನ್ನು ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವುದು ಒಂದು ಸವಾಲಾಗಿದೆ. ಹೆಚ್ಚಿನ ಚಿಕಿತ್ಸಾ ವೆಚ್ಚದಿಂದ ಅನೇಕ ಜನರು ಡಯಾಲಿಸಿಸ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಂತದಲ್ಲಿ, ಬ್ಲಾಕ್ ಪಂಚಾಯತ್‍ಗಳ ಉಪಕ್ರಮದಲ್ಲಿ ಸರ್ಕಾರಿ ವಲಯದಲ್ಲಿ ಈ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಯಿತು.
ಖಾಸಗಿ ವಲಯದಲ್ಲಿ ಡಯಾಲಿಸಿಸ್‍ಗೆ ಸುಮಾರು 1500 ರಿಂದ 2000 ರೂ.ವ್ಯಯವಾಗುತ್ತದೆ. ಹೆಚ್ಚಿನ ಜನರಿಗೆ ವಾರಕ್ಕೆ ಮೂರು ಡಯಾಲಿಸಿಸ್ ಅವಧಿಗಳು ಬೇಕಾಗುತ್ತವೆ. ಡಯಾಲಿಸಿಸ್ ಅಲ್ಲದೆ ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ಔಷಧಗಳೂ ಇಲ್ಲಿ ಉಚಿತವಾಗಿ ದೊರೆಯುತ್ತವೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಮಾಜಿ ಶಾಸಕ ಕುಂಞÂ್ಞ ರಾಮನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿ ಹಾಗೂ ಬ್ಲಾಕ್ ಪಂಚಾಯತ್ ಅಭಿವೃದ್ಧಿ ನಿಧಿಯಿಂದ ಜೀವನಂ ಡಯಾಲಿಸಿಸ್ ಸೆಂಟರ್ ಆರಂಭಿಸಲಾಗಿದೆ. ಕೇಂದ್ರವು ಅಕ್ಟೋಬರ್ 2021 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. ಕಾಞಂಗಾಡ್ ಬ್ಲಾಕ್ ವ್ಯಾಪ್ತಿಯ ಪಳ್ಳಿಕ್ಕರ, ಪುಲ್ಲೂರು ಪೆರಿಯ, ಉದುಮ, ಅಜನೂರು ಮತ್ತು ಮಡಿಕೈ ಪಂಚಾಯತ್‍ಗಳಿಂದ ತಲಾ 5 ಲಕ್ಷ ರೂ. ಹಾಗೂ ಬ್ಲಾಕ್ ಪಂಚಾಯತ್ ಪಾಲು 15 ಲಕ್ಷ ಜೀವನಂ ಯೋಜನೆಗೆ ವಿನಿಯೋಗಿಸಲಾಗಿದೆ.
ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಮಾತನಾಡಿ, ಕಾಞಂಗಾಡು ಬ್ಲಾಕ್ ಪಂಚಾಯತ್ ನ 2021-2022ರ ಜಾನಕಿಯಸೂತ್ರ ಯೋಜನೆಯಲ್ಲಿ ಅನುμÁ್ಠನಗೊಳ್ಳುತ್ತಿರುವ ಡಯಾಲಿಸಿಸ್ ಕೇಂದ್ರದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. 11 ಲಕ್ಷ ವೆಚ್ಚದ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಔಷಧ ಮಳಿಗೆ ಹಾಗೂ ರೋಗಿಗಳೊಂದಿಗೆ ಬರುವವರಿಗೆ ವಿಶ್ರಾಂತಿ ಕೊಠಡಿ ಒಳಗೊಂಡಿದೆ. ಪ್ರಸ್ತುತ ಎರಡು ಪಾಳಿಗಳು ಕಾರ್ಯನಿರ್ವಹಿಸುತ್ತಿವೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೂರನೇ ಪಾಳಿ ಆರಂಭಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಬ್ಲಾಕ್ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.
ಮೂತ್ರಪಿಂಡ ರೋಗಿಗಳಿಗೆ ಸಾಂತ್ವನ ನೀಡಲು ಸಾಂತ್ವನಂ ಸಾಕಾರ
0
ಸೆಪ್ಟೆಂಬರ್ 25, 2022





