ತಿರುವನಂತಪುರ: ಕೇರಳ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಪ್ ಹೌಸ್ ನ ಪಕ್ಕದಲ್ಲಿ ಗೋವುಗಳಿಗೆ ಪಂಚತಾರಾ ವಸತಿ ಸೌಲಭ್ಯ ಸಿದ್ಧವಾಗುತ್ತಿದೆ.
ಅಧಿಕೃತ ನಿವಾಸವಾದ ಕ್ಲಿಫ್ ಹೌಸ್ ನಲ್ಲಿ ಗೋಶಾಲೆ ನಿರ್ಮಾಣ ಆರಂಭವಾಗಿದೆ. ಎರಡು ತಿಂಗಳೊಳಗೆ ಕೊಟ್ಟಿಗೆ ನಿರ್ಮಾಣ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಹಸುಗಳಿಗೆ ಸಂಗೀತ ಕೇಳಲು ಕೊಟ್ಟಿಗೆಯಲ್ಲಿ ಮ್ಯೂಸಿಕ್ ಸಿಸ್ಟಂ ಅಳವಡಿಸಲಾಗುವುದು.
ಕೊಟ್ಟಿಗೆಯ ನಿರ್ಮಾಣದ ಟೆಂಡರ್‍ನಲ್ಲಿ ಎಂಟು ಮಂದಿ ಭಾಗವಹಿಸಿದ್ದರು. ಬಲರಾಮಪುರಂ ಮೂಲದವರಿಗೆ ನಿರ್ಮಾಣ ಗುತ್ತಿಗೆ ನೀಡಲಾಗಿದೆ. ಗೋಶಾಲೆ ನಿರ್ಮಾಣಕ್ಕೆ 42.90 ಲಕ್ಷ ರೂ.ಮೀಸಲಿರಿಸಲಾಗಿದೆ. ಪ್ರಸ್ತುತ ಕ್ಲಿಫ್ ಹೌಸ್ ನಲ್ಲಿ ಐದು ಹಸುಗಳಿವೆ. ಇದಲ್ಲದೇ ಇನ್ನೂ ಆರು ಹಸುಗಳನ್ನು ಇಲ್ಲಿಗೆ ತರಲಾಗುವುದು. ಇವುಗಳಿಗಾಗಿ ಹೊಸ ಕೊಟ್ಟಿಗೆ ನಿರ್ಮಿಸಲಾಗುತ್ತಿದೆ. ಕ್ಲಿಫ್ ಹೌಸ್‍ನ ನೌಕರರು ವಾಸಿಸಲು ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡದ ಸ್ಥಳದಲ್ಲಿ ಗೋಶಾಲೆ ಇದೆ.
ಉತ್ತಮ ಸೌಲಭ್ಯಗಳೊಂದಿಗೆ 800 ಚದರ ಅಡಿಯ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಹಸುಗಳನ್ನು ನೋಡಿಕೊಳ್ಳುವ ಕಾರ್ಮಿಕರಿಗೆ ಇಲ್ಲಿ ಪ್ರತ್ಯೇಕ ಕೊಠಡಿ ಇರುತ್ತದೆ. ಮೇವು ಮತ್ತಿತರ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಪ್ರತ್ಯೇಕ ಕೊಠಡಿಯನ್ನೂ ನಿರ್ಮಿಸಲಾಗುವುದು. ಪ್ರಸ್ತುತ ಒಂದು ಮಹಡಿಯಲ್ಲಿ ಕೊಟ್ಟಿಗೆಯನ್ನು ನಿರ್ಮಿಸಲಾಗಿದ್ದರೂ, ಎರಡು ಮಹಡಿಗಳಿಗೆ ಅಡಿಪಾಯ ಹಾಕಲಾಗುತ್ತಿದೆ. ಮುಂದೆ ಮೇಲಿನ ಮಹಡಿಗಳಲ್ಲಿ ಕ್ಲಿಫ್ ಹೌಸ್ ನ ಸಿಬ್ಬಂದಿಗೆ ಕ್ವಾರ್ಟರ್ಸ್ ನಿರ್ಮಿಸಲು ನಿರ್ಧರಿಸಲಾಗಿದೆ.
ಕ್ಲಿಪ್ ಹೌಸ್ ಗೋಶಾಲೆಗೆ ಪಂಚತಾರಾ ಸೌಕರ್ಯ: ಹಸುಗಳಿಗೆ ಲಾಲಿಹಾಡು ಕೇಳಿಸಲು ಸಂಗೀತ ವ್ಯವಸ್ಥೆ ಮತ್ತು ಆಧುನಿಕ ಸೌಲಭ್ಯಗಳು
0
ಸೆಪ್ಟೆಂಬರ್ 29, 2022
Tags




.jpg)
