ಕೊಚ್ಚಿ: ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಪಾಪ್ಯುಲರ್ ಫ್ರಂಟ್ ತನ್ನ ಚಟುವಟಿಕೆಗಳನ್ನು ನಿಲ್ಲಿಸಿದ ಬೆನ್ನಲ್ಲೇ ಅದರ ಅಂಗ ಸಂಸ್ಥೆ ಕ್ಯಾಂಪಸ್ ಫ್ರಂಟ್ ಕೂಡ ತನ್ನ ಚಟುವಟಿಕೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ.
ಕ್ಯಾಂಪಸ್ ಫ್ರಂಟ್ ನಿಷೇಧವನ್ನು ಅಪ್ರಜಾಸತ್ತಾತ್ಮಕ ಮತ್ತು ಅಸಂವಿಧಾನಿಕ ಎಂದು ಆರೋಪಿಸಿದೆ. ಕ್ಯಾಂಪಸ್ ಫ್ರಂಟ್ ವಿರುದ್ಧದ ಆರೋಪಗಳು ಆಧಾರ ರಹಿತ ಮತ್ತು ಕಪೆÇೀಲಕಲ್ಪಿತವಾಗಿದ್ದು, ಕಾನೂನು ತಜ್ಞರೊಂದಿಗೆ ಚರ್ಚಿಸಿದ ನಂತರ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಘಟನೆ ಹೇಳಿದೆ. ವಿದ್ಯಾರ್ಥಿಗಳು ಸಾಂಸ್ಥಿಕ ಘಟನೆಗಳು ಅಥವಾ ಚಟುವಟಿಕೆಗಳನ್ನು ನಡೆಸುವಂತಿಲ್ಲ.
ಸಾಮಾಜಿಕ ಬದ್ಧತೆ ಮತ್ತು ಜಾತ್ಯತೀತ-ಪ್ರಜಾಸತ್ತಾತ್ಮಕ ಮನೋಭಾವದ ಯುವಕರನ್ನು ಉತ್ಪಾದಿಸುವ ಉದ್ದೇಶದಿಂದ ಸಿಎಫ್‍ಐ ವಿದ್ಯಾರ್ಥಿ ನಡೆಸುತ್ತಿರುವ ಸಂಘಟನೆಯಾಗಿದೆ ಎಂದು ಕಾರ್ಯಕರ್ತರು ಹೇಳಿದರು. ಸಂಘಟನೆಯ ಭಾಗವಾಗಿದ್ದ ಅನೇಕ ಯುವಕರು ಸಾಮಾಜಿಕ ಸೇವೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಭಯೋತ್ಪಾದಕ ಚಟುವಟಿಕೆಗಳಲ್ಲಿ ಅವರ ಪಾತ್ರವು ಸ್ಪಷ್ಟವಾದ ನಂತರವೂ ಸಿಎಫ್ಐ ಹೇಳುತ್ತಿರುವುದು ಖೇದಕರವಾಗಿದೆ.
ನಿಷೇಧದ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ವಿಸರ್ಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ಸತ್ತಾರ್ ಮಾಹಿತಿ ನೀಡಿದ್ದರು. ಗೃಹ ಸಚಿವಾಲಯದ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಸಂಬಂಧಿತ ಸಂಘಟನೆಯಾದ ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ ಕೂಡ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಹೇಳಿದೆ. ಇದು ಸಂಸ್ಥೆಯ ಮಾನವ ಹಕ್ಕುಗಳ ಚಟುವಟಿಕೆಗಳ ವಿರುದ್ಧ ಪ್ರತೀಕಾರದ ಕ್ರಮವಾಗಿದೆ ಎಂದು ಎನ್.ಸಿ.ಎಚ್.ಆರ್.ಒ ನಾಯಕ ಪೆÇ್ರ.ಎ.ಮಾಕ್ರ್ಸ್ ವಾದಿಸಿದ್ದಾನೆ.
ಪಿ.ಎಫ್.ಐ ಬೆನ್ನಿಗೇ ಚಟುವಟಿಕೆ ನಿಲ್ಲಿಸಿದ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್: ಆರೋಪಗಳು ಆಧಾರರಹಿತ ಮತ್ತು ಕಟ್ಟುಕಥೆ ಎಂದು ಹೇಳಿಕೆ: ಕಾನೂನು ಕ್ರಮ ಎದುರಿಸುವುದಾಗಿ ಘೊಷಣೆ
0
ಸೆಪ್ಟೆಂಬರ್ 29, 2022
Tags





