HEALTH TIPS

ಶಿಕ್ಷಣದ ಕೊರತೆಯಿಂದ ಭಯೋತ್ಪಾದನೆಯತ್ತ ತಿರುಗುತ್ತಾರೆ ಎಂದು ಯಾರು ಹೇಳಿದರು: ಪಾಪ್ಯುಲರ್ ಪ್ರಂಟ್ ಭಯೋತ್ಪಾದಕರಲ್ಲಿ ಅನೇಕರು ಸರ್ಕಾರಿ ಅಧಿಕಾರಿಗಳು!


                 ನವದೆಹಲಿ: ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೊನ್ನೆ   ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿμÉೀಧಿಸಿದೆ. ನಿμÉೀಧಕ್ಕೂ ಮುನ್ನ ನಡೆಸಿದ ಎನ್‍ಐಎ ದಾಳಿಯಲ್ಲಿ ಪಿಎಫ್‍ಐನ ಪ್ರಮುಖ ನಾಯಕರನ್ನು ಬಂಧಿಸಲಾಗಿತ್ತು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಂಧಿತರಾದವರಾರೂ ಅನಕ್ಷರಸ್ತರೋ, ಗಾಂಪರೋ ಅಲ್ಲವೆಂಬುದು.
                     ನಿನ್ನೆ ಬಂಧಿತರಾದ ಪಿಎಫ್‍ಐ ಅಧ್ಯಕ್ಷ ಒಎಂಎ ಸಲಾಂ, ರಾಷ್ಟ್ರೀಯ ಉಪಾಧ್ಯಕ್ಷ ಇಎಂ ಅಬ್ದುಲ್ ರಹಿಮಾನ್, ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಸ್ರುದ್ದೀನ್ ಎಳಮರಮ್ ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಪಿ ಕೋಯಾ ಇದಕ್ಕೆ ಉದಾಹರಣೆ.
                    ಪಿ.ಎಫ್.ಐ ಅಧ್ಯಕ್ಷ ಒಎಂಎ ಸಲಾಂ ಸರ್ಕಾರಿ ಅಧಿಕಾರಿ. ಕೆಎಸ್‍ಇಬಿ ಅಧಿಕಾರಿಯಾಗಿದ್ದ ಅವರನ್ನು 2020ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಲಾಗಿತ್ತು. ಅವರು ನಿμÉೀಧಿತ ರೆಹಬ್ ಇಂಡಿಯಾ ಫೌಂಡೇಶನ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದ. ರಾಷ್ಟ್ರೀಯ ಉಪಾಧ್ಯಕ್ಷ ಇಎಮ್ ಅಬ್ದುಲ್ ರಹಿಮಾನ್  ನಿμÉೀಧಿತ ಸಂಘಟನೆಯಾದ ಸಿಮಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದ. ಆತ ಹಿಂದೆ  ಕಳಮಸ್ಸೆರಿ ಕುಸಾತ್‍ನ ಗ್ರಂಥಪಾಲಕರಾಗಿದ್ದ.
                     ಪಿಎಫ್‍ಐ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಪಿ ಕೋಯಾ  ಕೋಝಿಕ್ಕೋಡ್‍ನ ಕೊಟಂಚೇರಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ ಮತ್ತು ಸಿಮಿಯ ಸಕ್ರಿಯ ಕಾರ್ಯಕರ್ತ. ಭಯೋತ್ಪಾದಕ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ವಿ.ಪಿ.ನಸ್ರುದ್ದೀನ್ ಎಳಮರಮ್ ಆಲುವಾ ಎಂಇಎಸ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದು, ಮಾಧ್ಯಮ ದೈನಿಕದ ಕ್ಲರಿಕಲ್ ಸಿಬ್ಬಂದಿಯಾಗಿದ್ದ. 2014ರ ಲೋಕಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ.
                    ಕರ್ನಾಟಕದಿಂದ ಬಂದಿರುವ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಅಬ್ದುಲ್ ವಾಹಿದ್ ಸೈದ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಐಟಿ ಉದ್ಯೋಗಿಗಳು. ಬೆಂಗಳೂರಿನವರಾದ ಸೈಯದ್ ಪಿಎಫ್‍ಐನ ಸ್ಥಾಪಕ ಸದಸ್ಯನೂ ಹೌದು. ಆತ ಟ್ಯಾಲಿ ಮತ್ತು ಇಆರ್‍ಪಿಯಂತಹ ಸಾಫ್ಟ್‍ವೇರ್ ಸಂಬಂಧಿತ ವ್ಯವಹಾರವನ್ನು ನಡೆಸುತ್ತಿದ್ದ. ಬೆಂಗಳೂರು ಮೂಲದ ಎರಿಕ್ಸನ್ ಕಂಪನಿಯಲ್ಲಿ ಅನೀಸ್ ಅಹ್ಮದ್ ಜಾಗತಿಕ ತಾಂತ್ರಿಕ ವ್ಯವಸ್ಥಾಪಕರಾಗಿದ್ದ. ಆತ ಪಿ.ಎಫ್.ಐ ನ್ನು ರಕ್ಷಿಸಲು ಸಾಮಾಜಿಕ ಮಾಧ್ಯಮ ಮತ್ತು ಚಾನೆಲ್ ಚರ್ಚೆಗಳಲ್ಲಿ ಸಕ್ರಿಯನಾಗಿದ್ದ.
            ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರು ವಿವಿಧ ಕ್ಷೇತ್ರಗಳಿಗೆ ಹಣ ಸುರಿಯುವ ಮೂಲಕ ತಮ್ಮ ಅಸ್ತಿತ್ವವನ್ನು ಖಚಿತಪಡಿಸಿಕೊಂಡರು. ಎಲ್ಲಾ ಸಕ್ರಿಯ ಪ್ರದೇಶಗಳಿಗೆ ನಿಧಾನವಾಗಿ ತಮ್ಮ ಆಲೋಚನೆಗಳನ್ನು ಹೇರಿ  ಭಯೋತ್ಪಾದಕರ ಗುರಿ ಭಾರತವನ್ನು ಇಸ್ಲಾಮಿಕ್ ದೇಶವಾಗಿ ಪರಿವರ್ತಿಸುವುದು. ಕೇಂದ್ರ ಸರ್ಕಾರದ ನಿμÉೀಧದ ಮೂಲಕ ದೇಶದೊಳಗೆ ಉಳಿದುಕೊಂಡು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ದೇಶದ್ರೋಹಿಗಳಿಗೆ ಜೈಲು ಶಿಕ್ಷೆ ದಶಕಗಳಷ್ಟು ಕಾಲ ವಿಧಿಸಲ್ಪಡುತ್ತದೆಯೇ ಎಂದು ಕಾದುನೋಡಬೇಕು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries