ಕಾಸರಗೋಡು: ಕಾಸರಗೋಡು-ವಯನಾಡು ಗ್ರೀನ್ ಪವರ್ ಹೆದ್ದಾರಿ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಈ ಯೋಜನೆಯು ಉತ್ತರದ ಜಿಲ್ಲೆಗಳಲ್ಲಿನ ವಿದ್ಯುತ್ ಕೊರತೆಯನ್ನು ಪರಿಹರಿಸಲು ಮತ್ತು ಪ್ರದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲಿದೆ. ಅಂತರ್-ರಾಜ್ಯ ವಿದ್ಯುತ್ ಪ್ರಸರಣ ಜಾಲಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಯೋಜನೆಯ ಭಾಗವಾಗಿ, ಕರಿಂದಳ ಕೈನಿಯಲ್ಲಿರುವ 400 ಕೆವಿ ಉಪ ಕೇಂದ್ರದಿಂದ ಮಾನಂದವಾಡಿ ಪಯ್ಯಂಪಲ್ಲಿಯವರೆಗೆ ಲೈನ್ ಹಾಕುವ ಕೆಲಸ ಪ್ರಾರಂಭವಾಗಿದೆ. ಕರಿಂದಳ ದಿಂದ ವಿದ್ಯುತ್ ಲೈನ್ ಎಳೆಯುವ ಆರಂಭಿಕ ಕಾರ್ಯವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದರೊಂದಿಗೆ ವಯನಾಡಿನಿಂದ ಟವರ್ ಫೌಂಡೇಶನ್ ಕಾಮಗಾರಿಯೂ ಆರಂಭವಾಗಿದೆ.
ಇದಕ್ಕೂ ಮುನ್ನ ವಿದ್ಯುತ್ ಸಚಿವ ಕೆ.ಕೃಷ್ಣನ್‍ಕುಟ್ಟಿ ಅವರು ಕರಿಂದಳ ತೊಲೆನಿಯಲ್ಲಿ ಯೋಜನೆಯ ನಿರ್ಮಾಣವನ್ನು ಉದ್ಘಾಟಿಸಿದರು.
ಮಲಬಾರ್‍ನಲ್ಲಿ ವಿದ್ಯುತ್ ಸರಬರಾಜು ವಲಯ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಕಾಸರಗೋಡು ಜಿಲ್ಲೆಯ ನವೀಕರಿಸಬಹುದಾದ ಇಂಧನ ಸ್ಥಾವರಗಳಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರಸರಣ ನಷ್ಟವನ್ನು ಸಮಯಕ್ಕೆ ಲೋಡ್ ಸೆಂಟರ್‍ಗೆ ಕಳಿಸಲು ಉತ್ತರ ಹಸಿರು ಕಾರಿಡಾರ್ 400 ಕೆವಿ ಕರಿಂದಳ-ಪಯ್ಯಂಪಳ್ಳಿ ಡಬಲ್ ಸಕ್ರ್ಯೂಟ್ ಲೈನ್ ಅನ್ನು ಜಾರಿಗೊಳಿಸಲಾಗುತ್ತಿದೆ. ಕರಿಂದಳದಿಂದ ವಯನಾಡಿಗೆ 125 ಕಿ.ಮೀ ವಿದ್ಯುತ್ ಮಾರ್ಗವಿದೆ. ಯೋಜನೆಗೆ ಒಟ್ಟು 380 ಕಿ.ಮೀ. ಮಾರ್ಗ ಮತ್ತು 400 ಕೆವಿಯ ಟವರ್‍ಗಳು ಬೇಕಾಗುತ್ತವೆ. ವಯನಾಡಿನಲ್ಲಿ 200 ಎಂ.ವಿ.ಎ ಸಾಮಥ್ರ್ಯದ ಪರಿವರ್ತಕವನ್ನು ಅಳವಡಿಸಲಾಗುತ್ತಿದೆ. ಅಲ್ಲಿ 180 ಮೆಗಾವ್ಯಾಟ್ ವಿದ್ಯುತ್ ಬಳಸಬಹುದು. ಕರಿಂದಳದಿಂದ ಪ್ರಾರಂಭವಾಗುವ ವಿದ್ಯುತ್ ಮಾರ್ಗವು ಅಲಕೋಟ್-ಶ್ರೀಕಂಠಪುರಂ-ಇರಿಟ್ಟಿ-ನೆಟುಂಪೊಯಿಲ್ ಮೂಲಕ ವಯನಾಡಿನ ಪಯ್ಯಂಪಳ್ಳಿಗೆ ಹೋಗುತ್ತದೆ. ಈ ಮಾರ್ಗವು ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಲ್ಲಿ ಎಂಟು ಕ್ಷೇತ್ರಗಳು ಮತ್ತು ಮೂರು ಸಂಸದೀಯ ಕ್ಷೇತ್ರಗಳ ಮೂಲಕ ಹಾದುಹೋಗುತ್ತದೆ. ಯೋಜನೆಯ ಅಂದಾಜು ವೆಚ್ಚ 436 ಕೋಟಿ ರೂ.
ಕೆಎಸ್‍ಇಬಿ(ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್) ಸ್ವಂತ ನಿಧಿಯಿಂದ ವಿದ್ಯುತ್ ಮಾರ್ಗಕ್ಕೆ ಹಣ ಮಂಜೂರಾಗಿದೆ. 36 ತಿಂಗಳೊಳಗೆ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಕೆಎಸ್ ಇಬಿ ಉದ್ದೇಶಿಸಿದೆ. ಯೋಜನೆಯ ನಿರ್ಮಾಣದ ಹೊಣೆಯನ್ನು ಎಲ್&ಟಿ ನಿರ್ವಹಿಸಲಿದೆ.
ಹರಿತ ಪವರ್ ಹೆದ್ದಾರಿಯು ಕೇರಳದ ಗ್ರಾಹಕರಿಗೆ ನಿರಂತರ ಗುಣಮಟ್ಟದ ವಿದ್ಯುತ್ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಟ್ರಾನ್ಸ್ ಗ್ರಿಡ್ 2.0 ಯೋಜನೆಯ ಭಾಗವಾಗಿದೆ. ಟ್ರಾನ್ಸ್‍ಗಿಡ್ ಯೋಜನೆಯಡಿ ಸುಮಾರು 10,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುμÁ್ಠನಗೊಳಿಸಲಾಗುತ್ತಿದೆ. 400 ಕೆ.ವಿ ಮತ್ತು 220 ಕೆ.ವಿ ಸ್ಟ್ಯಾಂಡರ್ಡ್ ಟ್ರಾನ್ಸ್‍ಮಿಷನ್ ನೆಟ್‍ವರ್ಕ್ ಅನ್ನು ಕೇರಳದಾದ್ಯಂತ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಮತ್ತು ಪುಗಲ್ಲೂರ್-ಮಾಡಕತ್ತಾರ 2000 ಎಚ್.ವಿ.ಡಿ.ಸಿ ಲೈನ್‍ನ ಸಾಕ್ಷಾತ್ಕಾರದೊಂದಿಗೆ ಲಭ್ಯವಿರುವ ವಿದ್ಯುತ್ ಅನ್ನು ಸುಗಮವಾಗಿ ರವಾನಿಸಲು ಸ್ಥಾಪಿಸಲಾಗಿದೆ. ಟ್ರಾನ್ಸ್‍ಗ್ರಿಡ್ ಯೋಜನೆಯು ರಾಜ್ಯದ ಪ್ರಸರಣ ಜಾಲವನ್ನು ಅಂತರ-ರಾಜ್ಯ ಮಾರ್ಗಗಳೊಂದಿಗೆ ಮತ್ತಷ್ಟು ಸಂಪರ್ಕಿಸುವ ಗುರಿಯನ್ನು ಹೊಂದಿದೆ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರದ ಯೋಜನಾ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಮುಂದಿನ 25 ವರ್ಷಗಳವರೆಗೆ ಅಗತ್ಯವಿರುವ ಪ್ರಸರಣ ಜಾಲವನ್ನು ನಿರ್ಮಿಸುತ್ತದೆ. ಇದುವರೆಗೆ 400 ಕೆವಿ ಮಾರ್ಗದ 178 ಕಿಲೋಮೀಟರ್ ಸಕ್ರ್ಯೂಟ್, 220 ಕೆವಿ ಮಾರ್ಗದ 566 ಸಕ್ರ್ಯೂಟ್ ಮತ್ತು 110 ಕೆವಿ ಮಾರ್ಗದ 653 ಸಕ್ರ್ಯೂಟ್ ಪೂರ್ಣಗೊಂಡಿದೆ. ಈ ಮಾರ್ಗಗಳಲ್ಲಿ ಈಗಾಗಲೇ ಎಂಟು ಹೊಸ 220 ಕೆವಿ ಸಬ್‍ಸ್ಟೇಷನ್‍ಗಳನ್ನು ಸ್ಥಾಪಿಸಲಾಗಿದೆ.
ವಿಶೇಷ ಪ್ಯಾಕೇಜ್ ಪರಿಗಣನೆಯಲ್ಲಿ:
ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಮಾಲೀಕರಿಗೆ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪ್ಯಾಕೇಜ್ ಬಗ್ಗೆ ವಿದ್ಯುತ್ ಮಂಡಳಿ ಮತ್ತು ಸರ್ಕಾರ ನಿರ್ಧಾರ ಕೈಗೊಂಡ ನಂತರ ಅರ್ಹರಿಗೆ ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ತಂಡ ವಿದ್ಯುತ್ ಸಚಿವ ಕೆ.ಕೃಷ್ಣನಕುಟ್ಟಿ ಅವರನ್ನು ಭೇಟಿ ಮಾಡಿತು.
ವಿದ್ಯುತ್ ಕೊರತೆಗೆ ಪರಿಹಾರದತ್ತ ರಾಜ್ಯ: ಕರಿಂದಳ-ವಯನಾಡ್ ಗ್ರೀನ್ ಪವರ್ ಹೈವೇ ನಿರ್ಮಾಣ ವೇಗದಲ್ಲಿ
0
ಸೆಪ್ಟೆಂಬರ್ 04, 2022





