HEALTH TIPS

ಕೊಂಡೆವೂರಿನಲ್ಲಿ “ಸುರಭಿ-ಗೋಶಾಲೆ”ಗೆ ಶಿಲಾನ್ಯಾಸ, ವಿಂಶತಿ ಲಾಂಛನ ಬಿಡುಗಡೆ.


      ಉಪ್ಪಳ:ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಾನುವಾರ ಸುರಭಿ-ಗೋಶಾಲೆಗೆ ಶಿಲಾನ್ಯಾಸ, ವಿಂಶತಿ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು.



         ಪೂರ್ವಾಹ್ನ ಗೋಸೂಕ್ತ ಹವನ ನಡೆದು, ಬಳಿಕ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ, ರಾಜ್ಯಸಭಾ ಸದಸ್ಯರಾದ ಬೆಂಗಳೂರಿನ ಕೆ.ನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಆಶ್ರಮ ಸ್ಥಾಪನೆಯ 20ನೇ ವರ್ಷದ “ ವಿಂಶತಿ ಕಾರ್ಯಕ್ರಮ ಲಾಂಛನÀವನ್ನು  ನಾರಾಯಣ್ ಬಿಡುಗಡೆಗೊಳಿಸಿದರು. ಬೆಂಗಳೂರಿನ ಆಕ್ಸ್‍ಫರ್ಡ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಮೇಶ್ ರಾಜು ಸುರಭಿ-ಗೋಶಾಲೆಗೆ ಶಿಲಾನ್ಯಾಸ ನಡೆಸಿ, ಶಿಲಾಫಲಕ ಅನಾವರಣಗೊಳಿಸಿದರು. ಪೂನಾದ ಸಂತೋಷ್ ಶೆಟ್ಟಿ ಆಶ್ರಮದ ಆಶ್ರಯ ಯೋಜನೆಯ 34ನೇ ಮನೆಯ ಕೀಲಿಯನ್ನು ಫಲಾನುಭವಿ ಶ್ರೀಮತಿ ರಾಧಾ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭ ಬೆಂಗಳೂರಿನ  ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ. ರಾಮಮೂರ್ತಿ ರವರ ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪೂಜ್ಯ ಆಸ್ರಣ್ಣರವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಸಮಾಜವನ್ನು ಒಂದಾಗಿ ಬೆಸೆಯುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಪೂಜ್ಯಶ್ರೀಗಳು ತಮ್ಮ ಆಶೀರ್ವಚನದಲ್ಲಿ ‘ನಾವು 33 ಸಾವಿರ ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ಸೇವೆ ಮಾಡುತ್ತ ನಮ್ಮ ಸಂಸ್ಕøತಿಯ ರಕ್ಷಣೆ ಮಾಡೋಣ ಎಂದು ಶಿಲಾನ್ಯಾಸವಾದ  ಸುರಭಿ ಗೋಶಾಲೆಗಾಗಿ ಸ್ಥಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಯಷ್ಟು ಅಂದಾಜಿಸಲಾಗಿದ್ದು ಗೋಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ,ಯೋಜನೆಯ ಯಶಸ್ಸಿಗೆ ಪಾಲುದಾರರಾಗಬೇಕೆಂದು ಕರೆನೀಡಿದರು.


      ಪ್ರೇಮಾನಂದ ಶೆಟ್ಟಿ ಕುಂದಾಪುರ,  ಗೋಪಿನಾಥ ಕಾಮತ್ ಸಿದ್ಧಾಪುರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿವರಾಮ ಪಕಳ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಬೆಂಗಳೂರಿನ  ಸತೀಶ್ ಕುಮಾರ್ ಉಪಸ್ಥಿತರಿದ್ದರು.


            ಕು. ಗಾಯತ್ರೀ, ಕು.ಶ್ರಾವಣ್ಯ,,ಕು ಭೂಮಿಕಾ ರವರ ಪ್ರಾರ್ಥನೆಯ ಬಳಿಕ  ದೀಪಪ್ರಜ್ವಲನೆಯ ನಂತರ ಮಾಜಿ ಎಂಎಲ್‍ಸಿ ಮೋನಪ್ಪ ಭಂಡಾರಿ ಸ್ವಾಗತಿಸಿ, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಂದಿಸಿದರು. ದಿನಕರ್ ಹೊಸಂಗಡಿ ನಿರೂಪಿಸಿದರು. ಸಂಜೆ ಕಟೀಲಿನ ಆಸ್ರಣ್ಣರ ಆಚಾರ್ಯತ್ವದಲ್ಲಿ “ಶ್ರೀಚಕ್ರ ಪೂಜೆ”É ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries