ಕಾಸರಗೋಡು: ಎನ್‍ಎಸ್‍ಎಸ್ ದಿನಾಚರಣೆ ಅಂಗವಾಗಿ ಹೊಸದುರ್ಗ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಎನ್‍ಎಸ್‍ಎಸ್ ಘಟಕವು ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಆಧರಿಸಿ ಶಾಲಾ ಗೋಡೆಯಲ್ಲಿ ಸ್ವಾತಂತ್ರ್ಯ ಹುತಾತ್ಮರ ಚಿತ್ರಗಳನ್ನೊಳಗೊಂಡ ಗೋಡೆಯನ್ನು ಅನಾವರಣಗೊಳಿಸಿತು.
ಕಾಞಂಗಾಡು ನಗರಸಭಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ವಂದನಾ ಬಾಲರಾಜ್, ಮುಖ್ಯಶಿಕ್ಷಕ ಪಿ.ಗಂಗಾಧರನ್, ಸಿಬ್ಬಂದಿ ಕಾರ್ಯದರ್ಶಿ ಎನ್.ಸದಾಶಿವನ್ ಮಾತನಾಡಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಸಿ.ಕೆ.ಅಜಿತ್‍ಕುಮಾರ್ ಸ್ವಾಗತಿಸಿ, ಸ್ವಯಂ ಸೇವಕಿ ಡಿ.ಕೆ.ಕೀರ್ತನಾ ವಂದಿಸಿದರು. ನಂತರ ದತ್ತಿ ಯೋಜನೆ ‘ವಿ ಕೇರ್’ ಯೋಜನೆ ಹಾಗೂ ಜಲ ಸಂರಕ್ಷಣಾ ಶಿಬಿರ ನಡೆಯಿತು.
ಹೊಸದುರ್ಗದಲ್ಲಿ 'ಸ್ವಾತಂತ್ರ್ಯ ಗೋಡೆ' ಅನಾವರಣ
0
ಸೆಪ್ಟೆಂಬರ್ 25, 2022


