HEALTH TIPS

ರಸ್ತೆ ಅಪಘಾತ: ಸಾವಿನ ಪ್ರಮಾಣ ತಗ್ಗಿಸಲು ಡಬ್ಲ್ಯುಎಚ್‌ಒದಿಂದ ಮಾರ್ಗಸೂಚಿ ಬಿಡುಗಡೆ

 

             ನವದೆಹಲಿ: ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸಾವುಗಳು ಹಾಗೂ ಗಾಯಗೊಳ್ಳುವುದರ ಪ್ರಮಾಣವನ್ನು ತಗ್ಗಿಸುವುದಕ್ಕೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಎರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

                  ಬೈಕ್‌ ಹಾಗೂ ತ್ರಿಚಕ್ರ ವಾಹನಗಳ ಸವಾರರಿಂದ ಹೆಲ್ಮೆಟ್‌ಗಳ ಸಮರ್ಪಕ ಬಳಕೆ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.

                    ಐಐಟಿ-ದೆಹಲಿ ಹಾಗೂ ಡಬ್ಲ್ಯುಎಚ್‌ಒದ ಸುರಕ್ಷತೆ ಹಾಗೂ ಸಂಚಾರ ಘಟಕ ಜಂಟಿಯಾಗಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿವೆ. ರಸ್ತೆ ಸಂಚಾರ ಮತ್ತು ಸುರಕ್ಷತೆಗೆ ಸಂಬಂಧಿಸಿ ಎಲ್ಲ ರಾಷ್ಟ್ರಗಳು ನೀತಿ ರೂಪಿಸುವಾಗ ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

               'ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಈಗಿನ ಪ್ರಮಾಣವನ್ನು 2030ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡಬೇಕಿದೆ. ಇದಕ್ಕಾಗಿ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು ರೂಪಿಸಬೇಕು. ಈ ಉದ್ದೇಶ ಈಡೇರಿಕೆಯಲ್ಲಿ ನೂತನ ಮಾರ್ಗಸೂಚಿಗಳು ಪ್ರಮುಖ ಪಾತ್ರ ವಹಿಸುತ್ತವೆ' ಎಂದು ಡಬ್ಲ್ಯುಎಚ್‌ಒದ ಸುರಕ್ಷತೆ ಹಾಗೂ ಸಂಚಾರ ಘಟಕದ ಮುಖ್ಯಸ್ಥ ಡಾ.ಎನ್‌ಹಾನ್ ಟ್ರ್ಯಾನ್‌ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries