ಕಾಸರಗೋಡು: 'ನಾವೂ ಕೃಷಿಯೆಡೆಗೆ'ಯೋಜನೆಯನ್ವಯ ಕೊಡಕ್ಕಾಡ್ ಭತ್ತದಬಯಲಲ್ಲಿ ನಡೆಸಲಾದ ಭತ್ತದ ಕೊಯ್ಲು ಉತ್ಸವ ನಾಡಿನ ಹಬ್ಬವಾಗಿ ಮಾರ್ಪಟ್ಟಿತ್ತು. ಅತ್ಯುತ್ತಮ ಸಾವಯವ ಕೃಷಿಕ ಕೊಡಕ್ಕಾಡಿನ ರವೀಂದ್ರನ್ ಅವರ ಕೊಡಕ್ಕಾಡಿನ ಹತ್ತು ಎಕರೆ ಹೊಲದಲ್ಲಿ ನಡೆಸಲಾದ ಭತ್ತದ ಪೈರಿನ ಕೊಯ್ಲು ಉತ್ಸವ ಆಯೋಜಿಸಲಾಗಿತ್ತು. ಒಟ್ಟು ಹತ್ತು ಎಕರೆ ವಿಸ್ತೀರ್ಣದಲ್ಲಿ ಜ್ಯೋತಿ, ಶ್ರೇಯಸ್, ಸುಪ್ರಿಯಾ, ಉಮಾ ತಳಿಯ ಭತ್ತದ ಕೃಷಿನಾಟಿಮಾಡಲಾಗಿತ್ತು.
ಪಿಲಿಕೋಡ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಕೃಷ್ಣನ್ ಮತ್ತು ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಭತ್ತದ ಕೊಯ್ಲಿನ ಉದ್ಘಾಟನೆ ನೆರವೇರಿಸಿದರು. ವಾರ್ಡ್ ಸದಸ್ಯೆ ಪ್ರಸೀದಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಕೃಷಿ ಉಪನಿರ್ದೇಶಕಿ ಜ್ಯೋತಿ ಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಂ.ನಾರಾಯಣನ್, ಕೆ.ಶ್ರೀಕುಮಾರ್, ಪಿ.ರಾಮಚಂದ್ರನ್ ಮಾಸ್ಟರ್, ಯು.ನಾರಾಯಣನ್, ಎಂ.ವಿ.ಗಣೇಶನ್, ರವೀಂದ್ರನ್ ಕೊಡಕ್ಕಾಡ್, ಕೆ.ಸಿ.ಮಾಧವನ್, ಬಾಲಚಂದ್ರನ್ ಕೊಡಕ್ಕಾಡ್, ಸಿ.ಟಿ.ಸುಕುಮಾರನ್ ಉಪಸ್ಥಿತರಿದ್ದರು. ಜನಪ್ರತಿನಿಧಿಗಳು, ಹಿರಿಯ ರೈತರು, ಕೃಷಿ ಕಾರ್ಮಿಕರು, ಕೃಷಿ ಅಧಿಕಾರಿಗಳು, ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು ಸುಗ್ಗಿ ಹಬ್ಬದಲ್ಲಿ ಪಲ್ಗೊಳ್ಳುವ ಮೂಲಕ ಭತ್ತದ ಕೊಯ್ಲು ಉತ್ಸವವನ್ನು ಊರ ಹಬ್ಬವನ್ನಾಗಿ ಆಚರಿಸಿಕೊಂಡರು. ಈ ಸಂದರ್ಭ ಕೇಳಪ್ಪಾಜಿ ಸ್ಮಾರಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕೃಷಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆ ವಿತರಿಸಲಾಯಿತು. ಪಿಲಿಕ್ಕೋಡ್ ಗ್ರಾಮ ಪಂಚಾಯಿತಿ ಕೃಷಿ ಅಧಿಕಾರಿ ಆರ್.ಪ್ರೀತಿ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಎ.ವಿ.ರಾಧಾಕೃಷ್ಣನ್ ವಂದಿಸಿದರು.
ಭತ್ತದ ಕೊಯ್ಲು: ನಾಡಿನ ಉತ್ಸವವನ್ನಾಗಿ ಆಚರಿಸಿದ ಕೊಡಕ್ಕಾಡ್ ಜನತೆ
0
ಸೆಪ್ಟೆಂಬರ್ 21, 2022
Tags





