HEALTH TIPS

ಭತ್ತದಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಳವಡಿಕೆ: ಬಂಬ್ರಾಣದಲ್ಲಿ ಡ್ರೋನ್ ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆ

                
               ಕುಂಬಳೆ:  ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ಭತ್ತದಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಳವಡಿಕೆ ಬಗ್ಗೆ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕುಂಬಳೆ ಪಂಚಾಯಿತಿಯ ಬಂಬ್ರಾಣ ಭತ್ತದ ಬಯಲಿನಲ್ಲಿ ನಡೆಸಲಾಯಿತು.
           ಕೆಎಯು ಪೂರ್ಣ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಬಳಸಲಾಗಿದೆ. ಇದರಲ್ಲಿ ಸತು, ಬೋರಾನ್, ತಾಮ್ರ, ಕಬ್ಬಿಣ, ಮ್ಯಾಂಗನೀಸ್ ಮತ್ತು ಮಾಲಿಬ್ಡಿನಮ್ ಅನ್ನು ಒಳಗೊಂಡಿದ್ದು,  ಇದು ಭತ್ತದ ಬೆಳವಣಿಗೆ ಜತೆಗೆ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಅವಶ್ಯಕವಾಗಿದೆ. ಡ್ರೋನ್ ಬಳಸಿ ಸೂಕ್ಷ್ಮ ಪೆÇೀಷಕಾಂಶಗಳನ್ನು ಎಲೆಯ ಮೇಲೆ ಒಂದು ತಾಸಿನಲ್ಲಿ 5 ಎಕರೆ ಪ್ರದೇಶದಲ್ಲಿ ಸಿಂಪಡಿಸಬಹುದಾಗಿದೆ. ಪ್ರತಿ ಎಕರೆಗೆ 940 ರೂ. ವೆಚ್ಚ ತಗುಲುತ್ತಿದೆ.
            ಪ್ರಾತ್ಯಕ್ಷಿಕೆ ಅಧ್ಯಕ್ಷತೆಯನ್ನು ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಯೂಸುಫ್ ವಹಿಸಿದ್ದರು. ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕಿ ಡಾ.ಅನಿತಾ ಕರುಣ್ ಉದ್ಘಾಟಿಸಿದರು. ಎ.ಡಿ.ಎ ಅನಿತಾ ಮೆನನ್ ಮುಖ್ಯ ಭಾಷಣ ಮಾಡಿದರು. ಪ್ರತ್ಯಕ್ಷಿಕೆಯಲ್ಲಿ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಕೆವಿಕೆ ಕಾಸರಗೋಡು ಮುಖ್ಯಸ್ಥ ಡಾ.ಮನೋಜ್ ಕುಮಾರ್.ಟಿ.ಎಸ್ ಸ್ವಾಗತಿಸಿದರು. ಕೆ ಮಣಿಕಂಠನ್ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries