HEALTH TIPS

ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಆಗುತ್ತಿದ್ದ 140 ವನ್ಯಜೀವಿಗಳ ರಕ್ಷಣೆ- ಮೂವರ ಬಂಧನ

 

                ಗುವಾಹಟಿ: ಅಪರೂಪದ ವನ್ಯಜೀವಿಗಳನ್ನು ನೆರೆಯ ಮ್ಯಾನ್ಮಾರ್ ದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ತಂಡವನ್ನು ಮಿಜೊರಾಂ ಪೊಲೀಸರು ಚಂಪೈ ಜಿಲ್ಲೆಯಲ್ಲಿ ಶನಿವಾರ ಬಂಧಿಸಿದ್ದಾರೆ.

                ಸ್ಥಳೀಯ ಪೊಲೀಸರು ಅಬಕಾರಿ ಪೊಲೀಸರ ಹಾಗೂ ಮಾದಕ ದ್ರವ್ಯ ನಿಯಂತ್ರಣಾ ಪಡೆಯ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿ ಬಂಧಿತರಿಂದ 140 ಅಪರೂಪದ ವನ್ಯಜೀವಿಗಳನ್ನು ವಶಪಡಿಸಿಕೊಂಡಿದ್ದಾರೆ.

                      ಇದರಲ್ಲಿ 30 ಆಮೆಗಳು, ಎರಡು ಕೋತಿಗಳು, ಎರಡು ಚಿಕ್ಕಮೂತಿಯ ಮಂಗಗಳು, 22 ಹೆಬ್ಬಾವುಗಳು, 18 ಸುಮಾತ್ರಾನ್ ವಾಟರ್ ಮಾನಿಟರ್‌ಗಳು (ನೀರಿನಲ್ಲಿರುವ ಉಡದ ರೀತಿ ಪ್ರಾಣಿ), 55 ಮೊಸಳೆಗಳು, ನಾಲ್ಕು ಬೋವರ್‌ ಹಕ್ಕಿಗಳು, ನಾಲ್ಕು ಅಪರೂಪದ ಕಾಡು ಬೆಕ್ಕುಗಳು ಮತ್ತು ಒಂದು ಅಲ್ಬಿನೋ ವಾಲಾಬಿ (ಕಾಂಗರೂ ತರದ ಪ್ರಾಣಿ) ಸೇರಿದೆ.

                      ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೆಮ್ರುವಾಟಾ (38), ಟಿಂಖುಮಾ (38) ಮತ್ತು ಇ ಲಾಲ್ಮುವಾನ್ಪುಯಾ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 1 ಸ್ಕಾರ್ಪಿಯೋ ಹಾಗೂ 2 ಬೊಲೆರೊ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

                    ವಶಪಡಿಸಿಕೊಂಡ ಪ್ರಾಣಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಅವುಗಳ ಸುರಕ್ಷತೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ತಾಣ ವರದಿ ಮಾಡಿದೆ.

                ಈಶಾನ್ಯ ರಾಜ್ಯಗಳಲ್ಲಿ ಪೊಲೀಸರು ಪತ್ತೆ ಹಚ್ಚಿರುವ ಅತಿದೊಡ್ಡ ವನ್ಯಜೀವಿ ಕಳ್ಳಸಾಗಣೆ ಪ್ರಕರಣ ಇದಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಸ್ಸಾಂನ ಕಾಮರೂಪ್ ಜಿಲ್ಲೆಯಲ್ಲಿ ಇದೇ ರೀತಿ ಕಳ್ಳಸಾಗಣೆದಾರರಿಂದ 41 ವನ್ಯಜೀವಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

                ಮಿಜೊರಾಂ ಮ್ಯಾನ್ಮಾರ್ ಜೊತೆ ಗಡಿ ಹಂಚಿಕೊಂಡಿರುವುದರಿಂದ ವನ್ಯಜೀವಿ ಕಳ್ಳಸಾಗಣೆದಾರರಿಗೆ ಕಳ್ಳಸಾಗಣೆ ಮಾಡಲು ಪ್ರಮುಖ ಮಾರ್ಗವಾಗಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries