ನವದೆಹಲಿ: 'ಎಪ್ಪತ್ತೈದು ದಿನಗಳ ಕಾಲ ನಡೆಸಿದ 'ಕೋವಿಡ್ ಲಸಿಕೆ ಅಮೃತ ಮಹೋತ್ಸವ' ಅಭಿಯಾನದಲ್ಲಿ ಸರಿಸುಮಾರು 16 ಕೋಟಿ ಮುನ್ನೆಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಈ ಅಭಿಯಾನ ಪ್ರಾರಂಭಿಸುವ ಮೊದಲು ಶೇ 8ರಷ್ಟಿದ್ದ ಮುನ್ನೆಚರಿಕೆ ಡೋಸ್‌ಅನ್ನು ಪಡೆದುಕೊಂಡವರ ಸಂಖ್ಯೆ, ಈಗ ಶೇ 27ಕ್ಕೆ ಏರಿಕೆಯಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜುಲೈ 15ರಂದು ಈ ಅಭಿಯಾನವನ್ನು ಆರಂಭಿಸಲಾಗಿತ್ತು. ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ ಸೇರಿದಂತೆ ಹಲವು ಧಾರ್ಮಿಕ ಯಾತ್ರೆಗಳಲ್ಲಿ ಶಿಬಿರಗಳನ್ನು ಮಾಡಲಾಗಿದೆ. ಜೊತೆಗೆ, ರೈಲು, ಬಸ್, ವಿಮಾನ ನಿಲ್ದಾಣಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಖಾಸಗಿ, ಸರ್ಕಾರಿ ಕಚೇರಿಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡುವ ಶಿಬಿರಗಳನ್ನು ಮಾಡಲಾಗಿತ್ತು ಎಂದಿದೆ.
ಅಂಕಿ ಅಂಶ
13,01,778 ಶಿಬಿರಗಳು
76.18 ಕೋಟಿ ಮೊದಲ ಡೋಸ್
2.35 ಕೋಟಿ ಎರಡನೇ ಡೋಸ್
15.92 ಕೋಟಿ ಮುನ್ನೆಚ್ಚರಿಕಾ ಡೋಸ್





