HEALTH TIPS

ಜಿಲ್ಲೆಯಲ್ಲಿ ಹರಿತ ಮಿತ್ರಂ ಆ್ಯಪ್‍ನಲ್ಲಿ ಇದುವರೆಗೆ 31,361 ಮನೆಗಳು


         ಕುಂಬಳೆ: ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಜಿಲ್ಲೆಯಲ್ಲಿ ಈವರೆಗೆ 31,361 ಮನೆಗಳನ್ನು ಹರಿತ ಮಿತ್ರಂ ಗಾರ್ಬೇಜ್ ಆ್ಯಪ್‍ನಲ್ಲಿ ಸೇರಿಸಲಾಗಿದೆ. ಜಿಲ್ಲೆಯ 12 ಗ್ರಾಮ ಪಂಚಾಯಿತಿ ಹಾಗೂ ಎರಡು ನಗರಸಭೆಗಳಲ್ಲಿ ಹರಿತ ಮಿತ್ರಂ ಕಸದ ಆ್ಯಪ್ ಕಾರ್ಯಾಚರಣೆಗೆ ಆಯ್ಕೆಯಾಗಿದೆ. ಪಿಲಿಕೋಡ್, ಪಡನ್ನ, ಮಡಿಕೈ, ಮುಳಿಯಾರ್, ಕಾರಡ್ಕ, ಬೇಡಡ್ಕ, ಕುತ್ತಿಕೋಲ್, ಅಜಾನೂರು, ಪುಲ್ಲೂರು-ಪೆರಿಯ, ಈಸ್ಟ್ ಎಳೇರಿ, ಕೋಡೋಂ ಬೆಳ್ಳೂರು, ಕಿನಾನೂರು-ಕರಿಂದಳ ಪಂಚಾಯತಿಗಳು ಮತ್ತು ಕಾಞಂಗಾಡ್ ಮತ್ತು ನೀಲೇಶ್ವರ ನಗರಸಭೆಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.
       ಈಲ್ಲೆಯ ಈ 12 ಗ್ರಾಮ  ಪಂಚಾಯಿತಿಗಳಲ್ಲಿ 25,646 ಮನೆಗಳು ಮತ್ತು ನಗರರಸಭೆಗಳಲ್ಲಿ 5715 ಮನೆಗಳು ಆ್ಯಪ್‍ನಲ್ಲಿ ನೋಂದಣಿಯಾಗಿವೆ.
ಕಾರಡ್ಕÀ, ಮುಳಿಯಾರ್ ಮತ್ತು ಬೇಡಡ್ಕÀ ಪಂಚಾಯಿತಿಗಳು ಅತಿ ಹೆಚ್ಚು ಮನೆಗಳೊಂದಿಗೆ ಮುಂಚೂಣಿಯಲ್ಲಿವೆ. ಕಾರಡ್ಕದಲ್ಲಿ 4100, ಮುಳಿಯಾರ್  ನಲ್ಲಿ 4180 ಮತ್ತು ಬೇಡಡ್ಕದಲ್ಲಿ 3799 ಮನೆಗಳಲ್ಲಿ ಆ್ಯಪ್ ಕಾರ್ಯನಿರ್ವಹಿಸಲು ಆರಂಭಿಸಿದೆ. ನೀಲೇಶ್ವರ ನಗರಸಭೆಯಲ್ಲಿ 3203 ಮನೆಗಳು ಮತ್ತು ಕಾಞಂಗಾಡ್ ನಗರಸಭೆಯಲ್ಲಿ 2512 ಮನೆಗಳು ಸೇರಿಸಲ್ಪಟ್ಟಿವೆ.  ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಆಸಿಫ್ ಇಕ್ಬಾಲ್ ಕಾಕಸ್ಸೆರಿ ನೇತೃತ್ವದಲ್ಲಿ ಎನ್‍ಎಸ್‍ಎಸ್ ಸ್ವಯಂಸೇವಕರು ಆ್ಯಪ್‍ನಲ್ಲಿ ಮನೆಗಳನ್ನು ಹಾಕುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಿಲ್ಲೆಯ ಇತರ ಕಾಲೇಜುಗಳ ಹಸಿರು ಕ್ರಿಯಾಸೇನೆಯ ಸದಸ್ಯರು ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕರನ್ನು ಸೇರಿಸುವ ಮೂಲಕ ಹಿಂದುಳಿದ ಪಂಚಾಯಿತಿಗಳ ಎಲ್ಲಾ ಮನೆಗಳಿಗೆ ಅಪ್ಲಿಕೇಶನ್ ಅನ್ನು ವಿಸ್ತರಿಸಲು ಜಿಲ್ಲಾ ನೈರ್ಮಲ್ಯ ಮಿಷನ್ ನಿರ್ಧರಿಸಿದೆ.
           ಕೆಲ್ಟ್ರಾನ್‍ನ ಸೇವೆಯ ಇಂಜಿನಿಯರ್‍ಗಳು ಹಸಿರು ಕ್ರಿಯಾಸೇನೆ ಸಿಬ್ಬಂದಿಗೆ ಕೆಲ್ಟ್ರಾನ್ ಸಹಾಯದಿಂದ ಸ್ಥಾಪಿಸಲಾದ ಹರಿತಮಿತ್ರಂ ಕಸದ ಅಪ್ಲಿಕೇಶನ್‍ನ ಕಾರ್ಯಾಚರಣೆಯ ಕುರಿತು ತರಬೇತಿ ನೀಡುತ್ತಾರೆ. ಮೊದಲ ಹಂತದಲ್ಲಿ, ಆಯ್ಕೆಯಾದ ಪಂಚಾಯತಿ ಮತ್ತು ನಗರಸಭೆಗಳಲ್ಲಿ ಪ್ರತಿ ಮನೆಯನ್ನು ಕ್ಯೂಆರ್ ಕೋಡ್ ನಮೂದಿಸುವ ಮೂಲಕ ಅಪ್ಲಿಕೇಶನ್‍ನಲ್ಲಿ ನೋಂದಾಯಿಸಲಾಗುತ್ತದೆ. ಇದನ್ನು ಮಾಡಿದ ನಂತರ, ಪ್ರತಿ ಮನೆಯಲ್ಲಿ ಕಸವನ್ನು ಸರಿಯಾಗಿ ಸಂಗ್ರಹಿಸಬಹುದು. ರಾಜ್ಯ ಮಟ್ಟದಲ್ಲಿ, ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ಅವರು ಆ್ಯಪ್‍ನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries