ಮುಳ್ಳೇರಿಯ: ಮಾದಕವಸ್ತು ವಿರೋಧಿ ಸಂದೇಶ ಸಾರುವ ಜಾದೂ ಪ್ರದರ್ಶನದಲ್ಲಿ ತೃಕ್ಕರಿಪುರ ಶಾಶಕ ಎಂ.ರಾಜಗೋಪಾಲನ್ ಭಾಗವಹಿಸಿ ಗಮನ ಸೆಳೆದರು.
ಇತ್ತೀಚೆಗೆ ನಡೆದ ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಕಚೇರಿ, ಚಿಮೇನಿ ಇಂಜಿನಿಯರಿಂಗ್ ಕಾಲೇಜು ತ್ರಿಕರಿಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಜಾಗೃತಿ ವಿಚಾರ ಸಂಕಿರಣದ ಅಂಗವಾಗಿ ಜಾದೂ ಪ್ರದರ್ಶನ ನಡೆಯಿತು. ಜಾದೂಗಾರ ಬಾಲಚಂದ್ರ ಕೋಟೋಡಿ ಮಾದಕ ವ್ಯಸನದ ವಿರುದ್ಧ ಸಂದೇಶ ಸಾರುವ ಜಾದೂ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಶಾಸಕ ಎಂ.ರಾಜಗೋಪಾಲನ್ ಹಾಗೂ ಜಾಗೃತಿ ವಿಚಾರ ಸಂಕಿರಣ ನಡೆಸಿಕೊಟ್ಟ ಡಿವೈಎಸ್ಪಿ ಡಾ.ವಿ.ಬಾಲಕೃಷ್ಣನ್ ಭಾಗವಹಿಸಿದ್ದು ಜಾದೂ ಪ್ರದರ್ಶನಕ್ಕೆ ಮೆರುಗು ನೀಡಿತು. ಸಂಗೀತದ ಪಕ್ಕವಾದ್ಯದೊಂದಿಗೆ, ಮಕ್ಕಳೊಂದಿಗೆ ಸಂವಾದ ನಡೆಸಿ ಜಾದೂ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಜಾದೂ ಪ್ರದರ್ಶನ ಆಕರ್ಷಕವಾಗಿತ್ತು.
ಶಾಸಕರಿಂದ ಜಾದೂ ಪ್ರದರ್ಶನ!
0
ಅಕ್ಟೋಬರ್ 15, 2022
Tags




.jpg)
