ಜಾಗತಿಕ ತಂತ್ರಜ್ಞಾನ ಸಂಸ್ಥೆ ಫಿಲಿಪ್ಸ್ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತಿದ್ದಂತೆ "ಉತ್ಪಾದಕತೆಯನ್ನು ಸುಧಾರಿಸಲು ಹಾಗೂ ಚುರುಕುತನವನ್ನು ಹೆಚ್ಚಿಸಲು" 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಇಂದು ಘೋಷಿಸಿದೆ.
ಕಾರ್ಯಾಚರಣೆ ಹಾಗೂ ಪೂರೈಕೆ ಸವಾಲುಗಳಿಂದ Q3 ಮಾರಾಟವು ಪ್ರಭಾವಿತವಾಗಿದೆ ಎಂದು ಫಿಲಿಪ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಶೇಕಡಾ 5 ರಷ್ಟು ಮಾರಾಟದ ಕುಸಿತದೊಂದಿಗೆ ಗುಂಪಿನ ಮಾರಾಟವು 4.3 ಬಿಲಿಯನ್ ಯುರೋಗಳಷ್ಟಿದೆ ಎಂದು ಕಂಪನಿಯು ಹೇಳಿದೆ.
ಉತ್ಪಾದಕತೆ ಹಾಗೂ ಚುರುಕುತನವನ್ನು ಸುಧಾರಿಸುವ ಪ್ರಕ್ರಿಯೆಯಲ್ಲಿ "ನಮ್ಮ ಕಾರ್ಯಪಡೆಯಲ್ಲಿ ಜಾಗತಿಕವಾಗಿ ಸುಮಾರು 4,000 ಉದ್ಯೋಗವನ್ನು ತಕ್ಷಣವೇ ಕಡಿಮೆ ಮಾಡುವ ಕಷ್ಟಕರವಾದ, ಆದರೆ ಅಗತ್ಯವಾದ ನಿರ್ಧಾರವನ್ನು ಒಳಗೊಂಡಿದೆ'' ಎಂದು ಫಿಲಿಪ್ಸ್ ಸಿಇಒ ರಾಯ್ ಜಾಕೋಬ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತ್ರೈಮಾಸಿಕದಲ್ಲಿ ಫಿಲಿಪ್ಸ್ ಸಂಸ್ಥೆಯ ಕಾರ್ಯಕ್ಷಮತೆಯು ಕಾರ್ಯಾಚರಣೆ ಹಾಗೂ ಪೂರೈಕೆ ಸವಾಲುಗಳು, ಹಣದುಬ್ಬರದ ಒತ್ತಡಗಳು, ಚೀನಾದಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದ ಪೀಡಿತವಾಗಿದೆ.





