ಪಾಲಕ್ಕಾಡ್: ಆರ್‍ಎಸ್‍ಎಸ್ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಪಟ್ಟಾಂಬಿ ನಿವಾಸಿ ಅಬ್ದುಲ್ ಕಬೀರ್ ಬಂಧಿತ ಆರೋಪಿ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಈತ ಪಿಎಫ್.ಐ ಸೌತ್ ನ ಜಿಲ್ಲಾ ಕಾರ್ಯದರ್ಶಿ. ಕೊಲೆಯ ನಂತರ ಕಬೀರ್ ಆರೋಪಿಗಳಿಗೆ ಸಾಕ್ಷ್ಯ ನಾಶಪಡಿಸಲು ಸಹಾಯ ಮಾಡಿದ್ದ. ಅಬ್ದುಲ್ ಕಬೀರ್ ನೇತೃತ್ವದಲ್ಲಿ ಆರೋಪಿಗಳು ಬಳಸುತ್ತಿದ್ದ ವಾಹನವನ್ನು ಧ್ವಂಸಗೊಳಿಸಲಾಗಿತ್ತು.
ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗವಹಿಸಿದ ಆರೋಪಿಗಳು ಸೇರಿದಂತೆ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಸೆಪ್ಟೆಂಬರ್‍ನಲ್ಲಿ ತನಿಖಾ ತಂಡವು ಪಾಪ್ಯುಲರ್ ಫ್ರಂಟ್ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮತ್ತು ಮಲಪ್ಪುರಂ ನಿವಾಸಿ ಸಿರಾಜುದ್ದೀನ್ ಎಂಬವರನ್ನು ಬಂಧಿಸಿತ್ತು.
ಪಾಲಕ್ಕಾಡ್ ನ ಶ್ರೀನಿವಾಸನ್ ಹತ್ಯೆ ಪ್ರಕರಣ: ಪಿ.ಎಫ್.ಐ ಸೌತ್ ನ ಜಿಲ್ಲಾ ಕಾರ್ಯದರ್ಶಿಯ ಬಂಧನ
0
ಅಕ್ಟೋಬರ್ 12, 2022
Tags





