HEALTH TIPS

ಪ್ರಾಚೀನ ಕಲೆಗಳಾದ ಗಮಕ ಮತ್ತು ಯಕ್ಷಗಾನಗಳೆರಡೂ ನಮ್ಮ ಸಂಸ್ಕøತಿಯ ಎರಡು ಕಣ್ಣುಗಳು: ಯೋಗೀಶ್ ರಾವ್ ಚಿಗುರುಪಾದೆ



       ಕಾಸರಗೊಡು: ಗಮಕ ಮತ್ತು ಯಕ್ಷಗಾನ ಕಲೆಗಳೆರಡೂ ನಮ್ಮ ಸಂಸ್ಕೃತಿಯ ಕಣ್ಣುಗಳಾಗಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ತಿಳಿಸಿದ್ದಾರೆ.
         ಅವರು ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಹವ್ಯಕ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಕಾಲ ಕಾಸರಗೋಡು ಹ್ವಯಕ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ'ಕಲೋಪಾಸನಾ'ಕಾರ್ಯಕ್ರಮದ ಎರಡನೇ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
        ಬಹುಭಾಷೆಗಳ ಸಂಗಮ ಭೂಮಿಯಾಗಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದೆ. ಕನ್ನಡದ ಕಲೆ ಮತ್ತು ಸಾಹಿತ್ಯ ಇಲ್ಲಿ ಶ್ರೀಮಂತವಾಗಿದೆ ಎಂದು ತಿಳಿಸಿದರು.
           ಗಮಕ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.  ಕಲಾಶ್ರೀ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಸಾದ್ ಕೋಟೆಕಣಿ ಹಾಗೂ ಶ್ರೀ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಜರುಗಿದ'ಸಾಂಪ್ರದಾಯಿಕ ಹಾಡು'ಕಾರ್ಯಕ್ರಮದಲ್ಲಿ ಪುಷ್ಪಲತಾ ವಿ.ಕೆ.ಭಟ್, ಪ್ರೇಮಲತಾ ಮನ್ನಿಪ್ಪಾಡಿ, ಜಯಲಕ್ಷ್ಮೀ ಜಿ.ಭಟ್, ವಿಜಯಾ ಸುಬ್ರಹ್ಮಣ್ಯ, ಶೈಲಜಾ ಬಿ.ಅವರು ಸಂಪ್ರದಾಯದ ಹಾಡುಗಳ ಗೋಷ್ಠಿ ನಡೆಸಿಕೊಟ್ಟರು.
          ಮಹಾಕವಿ ಕುಮಾರವ್ಯಾಸ ಭಾರತದಿಂದ ಆಯ್ದ 'ಪಾಶುಪತಾಸ್ತ್ರ'ಎಂಬ ಭಾಗದ ಗಮಕ ವಾಚನ-ವ್ಯಾಖ್ಯಾನಗಳನ್ನು ಕರ್ನಾಟಕ ಕಲಾಶ್ರೀ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಮತ್ತು  ರಾಧಾಕೃಷ್ಣ ಕಲ್ಚಾರು ನಡೆಸಿಕೊಟ್ಟರು.
          ಈ ಸಂದರ್ಭ ನಡೆದ  ಯಕ್ಷಗಾನ ತಾಳಮದ್ದಳೆಯಲ್ಲಿ ಮುಮ್ಮೇಳದಲ್ಲಿ ಭಾಗವತರಾಗಿ  ಪುತ್ತೂರು ರಮೇಶ ಭಟ್, ಚೆಂಡೆವಾದಕರಾಗಿ ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆ ವಾದಕರಾಗಿ ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ವಾಸುದೇವರಂಗ ಭಟ್, ರಾಧಾಕೃಷ್ಣ ಕಲ್ಚಾರು, ಡಾ. ಶ್ರೀಶ  ಕುಮಾರ ಪಂಜಿತ್ತಡ್ಕ ಭಾಗವಹಿಸಿದ್ದರು.
ಸಮಾರೋಪ ಭಾಷಣವನ್ನು ಡಾ| ಯು.ಮಹೇಶ್ವರಿ ನೆರವೇರಿಸಿದರು. ವಿ.ಬಿ.ಕುಳಮರ್ವ ವಿರಚಿತ ಭಾಮಿನಿ ಷಟ್ಪದಿಯ ಗಮಕಗೀತೆಯನ್ನು ಪ್ರಾರ್ಥನೆಯಾಗಿ ಕು| ಸಂವೃತಾ ಭಟ್ ಪೇರ್ಯ ಅವರು ಹಾಡಿದರು. ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು. ಡಿ. ಜಯನಾರಾಯಣ ತಾಯನ್ನುರು ವಂದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries