ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಮೀಂಜ ಪಂಚಾಯತಿ ಗ್ರಂಥಾಲಯ ಸಮಿತಿಯ ನೇತ್ರತ್ವದಲ್ಲಿ "ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರೋನಿಕ್ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು ''ಡಿಸೈನ್ ಅಂಡ್ ಡೆವಲಪ್ಮೆಂಟ್ ಆಫ್ ನ್ಯಾನೋ ಸೆನ್ಸಾರ್ ಬೇಸ್ ಡ್ ಸೋಯಿಲ್ ಕಂಡೀಷನ್ ಮೋನಿಟರಿಂಗ್ ಸಿಸ್ಟಂ ವಿದ್ ಐಓಟಿ ಟೆಕ್ನಾಲಜಿ", ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪ್ರಶಸ್ತಿ ಗೆ ಭಾಜನರಾದ ಡಾ.ಅಕ್ಷಯ ಕುಮಾರ ರಿಗೆ ಮೀಯಪದವು ತೊಟ್ಟೆತ್ತೋಡಿ ಶ್ರೀ ವಾಣಿ ವಿಲಾಸ ಪ್ರಾಥಮಿಕ ಶಾಲೆಯಲ್ಲಿ ಹುಟ್ಟೂರ ಸನ್ಮಾನ ಜರಗಿತು.
ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೇನ್. ಪಿ. ಕೆ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಕ್ಷಯ ಕುಮಾರ ರ ಮಾರ್ಗದರ್ಶಕ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊಫೆಸರ್ ನವೀನ್ ಕುಮಾರ್ ಎಸ್. ಕೆ. ಹಾಗೂ ಅಕ್ಷಯ್ ಕುಮಾರ್ ನ ಹೆತ್ತವರಾದ ತಿಮ್ಮಪ್ಪ ಹಾಗೂ ಯಶೋಧ ದಂಪತಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಬಾಲವೇದಿ ಸದಸ್ಯೆ ಕುಮಾರಿ ತನ್ವಿ ಪ್ರಾರ್ಥನಾಗೀತೆ ಹಾಡಿದರು. ಬಾಲವೇದಿ ಮಕ್ಕಳಾದ ವಿಕ್ರಂ ಭಾರದ್ವಾಜ್ ಮತ್ತು ಕುಮಾರಿ ಅನುಜ್ಞಾಲಕ್ಷ್ಮೀ ಯವರ ಹಾಡುಗಾರಿಕೆ ಎಲ್ಲರನ್ನು ಮನರಂಜಿಸಿತು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ. ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀಂಜ ಪಂಚಾಯತಿ ಸದಸ್ಯರುಗಳಾದ ಸರಸ್ವತಿ, ಕುಸುಮ, ತೊಟ್ಟೆತ್ತೋಡಿ ಶಾಲಾ ಪ್ರಭಂಧಕ ಪ್ರೇಮ. ಕೆ. ಭಟ್, ಜಯಪ್ರಕಾಶ್ ತೊಟ್ಟೆತ್ತೋಡಿ, ಚಿನಾಲ ನವಯುವಕ ಕಲಾವೃಂದ ಲೈಬ್ರರಿ ಯ ಅಧ್ಯಕ್ಷ ಯೋಗೀಶ್ ಕಲ್ಯಾಣತ್ತಾಯ, ಚಿತ್ರಾವತಿ ಟೀಚರ್ ಹಾಗೂ ಟಿ .ರಾಮ ಬಂಗೇರ ಗ್ರಂಥಾಲಯ ಸಮಿತಿ ಸದಸ್ಯೆ ವಿಜಯಲಕ್ಷ್ಮಿ ಶುಭಾಸಂಶನೆ ಗೈದರು. ತಾಲ್ಲೂಕು ಲೈಬ್ರರಿ ಸದಸ್ಯ ಕಿಶೋರ್ ಕುಮಾರ್ ಪಾವಳ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಪಂಚಾಯತ್ ಗ್ರಂಥಾಲಯ ಸಮಿತಿ ಕನ್ವೀನರ್ ರಾಮಚಂದ್ರ. ಟಿ. ಸ್ವಾಗತಿಸಿ, ಮೀಯಪದವು ಶ್ರೀ ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ್ ಬಂಗೇರ ಕೆ. ವಂದಿಸಿದರು.
ಡಾ.ಅಕ್ಷಯ ಕುಮಾರ್ ಎಲಿಯಾಣರಿಗೆ ಹುಟ್ಟೂರ ಸನ್ಮಾನ
0
ಅಕ್ಟೋಬರ್ 11, 2022
Tags

.jpg)
