ಕುಂಬಳೆ: ಸರೋವರ ಸನ್ನಿಧಿ ಅನಂತಪುರ ಶ್ರೀಅನಂತಪದ್ಮನಾಭ ಸನ್ನಿಧಿಯಲ್ಲಿ ಇಂದು(ಮಂಗಳವಾರ)ವಾರ್ಷಿಕ ನವಾನ್ನ ಸಮರ್ಪಣೆ ಹಾಗೂ ಬಲಿವಾಡುಕೂಟ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಮುಂಜಾನೆ ತುಲಾ ತೆನೆ ಸಮರ್ಪಣೆ, ಗಣಪತಿಹೋಮ, ಶುದ್ದಿಕಲಶ ನಡೆಯಲಿದೆ. ಬೆಳಿಗ್ಗೆ 9 ರಿಂದ ವೇದಪಾರಾಯಣ, 10 ರಿಂದ ಕಲಾರತ್ನ ಶಂ.ನಾ ಅಡಿಗ ಕುಂಬಳೆ ಇವರ ಪ್ರಾಯೋಜಕತ್ವದಲ್ಲಿ ದಿ.ಸದಾಶಿವ ಅನಂತಪುರ ಸ್ಮರಣಾರ್ಥ ಹರಿಕಥಾ ಸತ್ಸಂಗ ಭಕ್ತ ಅಂಬರೀಶ ಪ್ರಸ್ತುತಿ ನಡೆಯಲಿದೆ. 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30 ರಿಂದ ನಾರಾಯಣಮಂಗಲ ವಿಘ್ನೇಶ್ವರ ಕಲಾಸಂಘದಿಂದ ಶ್ರೀಕೃಷ್ಣಲೀಲೆ-ಕಂಸಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6.15 ಕ್ಕೆ ದೀಪಾರಾಧನೆ, 7.30 ಕ್ಕೆ ವಿಶೇಷ ಕಾರ್ತಿಕ ಪೂಜೆ ನಡೆಯಲಿದೆ.
ಅನಂತಪುರದಲ್ಲಿ ನವಾನ್ನ ಸಮರ್ಪಣೆ-ಬಲಿವಾಡುಕೂಟ ಇಂದು
0
ಅಕ್ಟೋಬರ್ 17, 2022





