ಲಖನೌ : ಅಯೋಧ್ಯೆಯಲ್ಲಿ ಭಾನುವಾರ ಏಕಕಾಲದಲ್ಲಿ 15 ಲಕ್ಷ ದೀಪಗಳು ಏಕಕಾಲದಲ್ಲಿ ಬೆಳಗಿದವು. ಈ ದೃಶ್ಯವನ್ನು ಮುಜಾಫರ್‌ನಗರದ ತನ್ನ ಮನೆಯಲ್ಲಿ ಕುಳಿತು ಟಿ.ವಿ.ಯಲ್ಲಿ ನೋಡಿದ ಸಂದೀಪ್ ಆರ್ಯ ಅವರ ಕಣ್ಣಾಲಿಗಳು ತುಂಬಿ ಬಂದವು.
ದೀಪೋತ್ಸವದಲ್ಲಿ ಬೆಳಗಿದ ಬಹುತೇಕ ಹಣತೆಗಳನ್ನು ಸಗಣಿಯಿಂದ ತಯಾರಿಸಿದ್ದು, ಅಯೋಧ್ಯೆಯ ಆಡಳಿತಕ್ಕೆ ನೀಡಲಾಗಿತ್ತು.ತಾನು ನಡೆಸುವ ಗೋಶಾಲೆ ಜೊತೆಗೆ ಸಹಭಾಗಿತ್ವವಿದ್ದ 300 ಮಹಿಳೆಯರು ಈ ಹಣತೆಗಳನ್ನು ತಯಾರಿಸಿದ್ದರು.
ದೀಪಾವಳಿ ಹಬ್ಬಕ್ಕೂ ಮುನ್ನಾದಿನ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ, ಕಳೆದ ಆರು ವರ್ಷಗಳಿಂದ ದೀಪೋತ್ಸವ ಆಯೋಜಿಸುತ್ತಿದೆ. ಸರಯೂ ನದಿ ತೀರಕ್ಕೆ ಹೊಂದಿಕೊಂಡಂತೆ ಏಕಕಾಲದಲ್ಲಿ 15.76 ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ.
'ನಾನು ಭಾವುಕನಾಗಿದ್ದೇನೆ. ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತಿಲ್ಲ' ಎಂದು ಸಂದೀಪ್ ಆರ್ಯ ಹೇಳಿದರು. ಒಟ್ಟು 326 ಮಹಿಳೆಯರು 1 ಲಕ್ಷ ಹಣತೆಗಳನ್ನು ಕಳೆದ 10 ತಿಂಗಳ ಅವಧಿಯಲ್ಲಿ ತಯಾರಿಸಿದ್ದರು ಎಂದು ತಿಳಿಸಿದರು.





