ಕಣ್ಣೂರು: ಸರ್ಕಾರದ ಅರಿವಿನಿಂದಲೇ ಪಿಪಿಇ ಕಿಟ್ ಖರೀದಿಸಲಾಗಿದೆ ಎಂದು ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪುನರುಚ್ಚರಿಸಿದ್ದಾರೆ.
ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಲಭಿಸಿಲ್ಲ. ಲೋಕಾಯುಕ್ತಕ್ಕೂ ಇದೇ ಉತ್ತರ ನೀಡಲಾಗುವುದೆಂದು ಕೆ.ಕೆ.ಶೈಲಜಾ ಕಣ್ಣೂರಿನಲ್ಲಿ ಹೇಳಿದರು.
ಪಿಪಿಇ ಕಿಟ್ ಸಮಸ್ಯೆಯನ್ನು ಶಾಸಕಾಂಗದ ಒಳಗೆ ಮತ್ತು ಹೊರಗೆ ಹಲವಾರು ಬಾರಿ ಎತ್ತಲಾಗಿದೆ. ಈ ನಿರ್ಧಾರವನ್ನು ಸರ್ಕಾರವು ಜಂಟಿಯಾಗಿ ತೆಗೆದುಕೊಂಡಿದೆ. ಸಾಂಕ್ರಾಮಿಕ ಹಂತದಲ್ಲಿ ಮಾನವ ಜೀವವನ್ನು ಉಳಿಸಲು ದೊಡ್ಡ ಸವಾಲುಗಳಿತ್ತು. ಲೋಕಾಯುಕ್ತರು ಪ್ರಕರಣ ದಾಖಲಿಸದೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಉತ್ತರವನ್ನು ಮಾತ್ರ ಲೋಕಾಯುಕ್ತಕ್ಕೆ ನೀಡಲಾಗುವುದೆಂದೂ ಅವರು ಹೇಳಿದರು.
500 ರೂ.ಗಿಂತ ಕಡಿಮೆ ಮೌಲ್ಯದ ಪಿಪಿಇ ಕಿಟ್ ನ್ನು 1500 ರೂ.ಗೆ ಖರೀದಿಸಿರುವುದು ದೂರಿಗೆ ಕಾರಣವಾಗಿದೆ. ಆದರೆ ಶೈಲಜಾ ಅವರು ಮುಖ್ಯಮಂತ್ರಿಯ ಅರಿವಿನಿಂದ ಈ ಡೀಲ್ ನಡೆದಿದೆ ಎಂದೂ ವಾದಿಸಿದ್ದಾರೆ. ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಶೈಲಜಾ ಈ ಹಿಂದೆ ಸ್ಪಷ್ಟಪಡಿಸಿದ್ದರು.
ಲೋಕಾಯುಕ್ತರು ಪ್ರಾಥಮಿಕ ತನಿಖೆ ನಡೆಸಿದ ಬಳಿಕ ತನಿಖೆಗೆ ಆದೇಶಿಸಲಾಗಿದೆ. ಕೆ.ಕೆ.ಶೈಲಜಾ ಜತೆಗೆ ಕೆಎಂಸಿಎಲ್ ಜನರಲ್ ಮ್ಯಾನೇಜರ್ ಡಾ.ದಿಲೀಪ್ ಅವರಿಗೂ ಲೋಕಾಯುಕ್ತರು ನೋಟಿಸ್ ಕಳುಹಿಸಿದ್ದಾರೆ. ನೋಟಿಸ್‍ಗೆ ಒಂದು ತಿಂಗಳೊಳಗೆ ಉತ್ತರ ನೀಡಲು ಸೂಚಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತೆ ವೀಣಾ ಎಸ್ ನಾಯರ್ ಅವರ ಮನವಿ ಮೇರೆಗೆ ಈ ಪ್ರಕರಣಗಳು ದಾಖಲಾಗಿದೆ.
ಪಿಪಿಇ ಕಿಟ್ ಹಗರಣ: ಸರ್ಕಾರಕ್ಕೆ ಎಲ್ಲವೂ ತಿಳಿದಿದೆ: ಲೋಕಾಯುಕ್ತಕ್ಕೂ ಇದೇ ಉತ್ತರ: ಕೆ.ಕೆ.ಶೈಲಜಾ
0
ಅಕ್ಟೋಬರ್ 17, 2022





