ಕಾಸರಗೋಡು: ಬಹುಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡಿನ ವಿವಿಧ ಭಾಷೆ, ಸಂಸ್ಕøತಿಯ ಬಗ್ಗೆ ಮಾಹಿತಿ ವಿನಿಮಯ ನಡೆಸುವ ನಿಟ್ಟಿನಲ್ಲಿ ಭಾಷಾಂತರ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿಯಾಗಲಿರುವುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ನಾಟ್ಯರತ್ನಂ ಕಣ್ಣನ್ ಪಾಟಾಳಿ ಕಥಕ್ಕಳಿ ಟ್ರಸ್ಟ್(ರಿ), ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮಲಯಾಳ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ಗುರುವಾರ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಆರಂಭಗೊಂಡ ಭಾಷಾಂತರ ಕಾರ್ಯಾಗಾರ ಮತ್ತು ಬಹುಭಾಷಾ ಕವಿ ಸಂಗಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಬಗ್ಗೆ ಅಭಿಮಾಣ ಇರಲಿ. ದುರಭಿಮಾನದಿಂದ ಕೂಡಿದ ಭಾಷಾ ವ್ಯಾಮೋಹ ಅನಾಹುತಕ್ಕೆ ಕಾರಣವಾಘಲಿರುವುದಾಗಿ ತಿಳಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ರಮಾ ಎಂ. ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿವಿ ದೂರಶಿಕ್ಷಣ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಕಥಕ್ಕಳಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ ಶ್ರೀಧರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರು ನ್ಯಾಶನಲ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಮೋದ್ ಮುತಾಲಿಕಾ, ಕಣ್ಣೂರು ವಿ.ವಿ ಸದಸ್ಯ ಪ್ರೊ. ಎಂ.ಸಿ ರಾಜು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು ಅಕಾಡಮಿಕ್ ಕೌನ್ಸಿಲ್ ಸದಸ್ಯಡಾ. ಶ್ರೀಧರ ಎನ್, ಮಲಯಾಳ ವಿಭಾಗ ಮುಖ್ಯಸ್ಥೆ ಡಾ. ಲಿಜಿ ಎನ್, ಕಾಳೇಜು ಯೂನಿಯನ್ ಅಧ್ಯಕ್ಷ ಅಜಯ್‍ಕೃಷ್ಣನ್ ಉಪಸ್ಥಿತರಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾಷಾಂತರಕ್ಕೆ ಹೆಚ್ಚಿನ ಅಧ್ಯಯನ, ಕಾಳಜಿ ಅಗತ್ಯ:
ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ದಿಕ್ಸೂಚಿ ಭಾಷಣ ಮಾಡಿ, ಹೆಚ್ಚಿನ ಅಧ್ಯಯನ ಹಾಗೂ ಕಾಳಜಿಯಿಂದ ನಡೆಸುವ ಭಾಷಾಂತರದಿಂದ ಉತ್ತಮ ಕೃತಿಗಳು ಮೂಡಿಬರಲು ಸಾಧ್ಯ. ಭಾಷಾಂತರ ನಾನಾ ಸಂಸ್ಕøತಿಗಳ ಸಂಗಮಕ್ಕೆ ಹಾದಿಮಾಡಿಕೊಡಲಿದೆ. ಮಾನವೀಯ ಸಂಬಂಧ ಬೆಳೆಸುವಲ್ಲಿ ಭಾಷಾಂತರ ಪ್ರಕ್ರಿಯೆ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಬಹುಭಾಷಾ ಸಂಸ್ಕøತಿಯನ್ನು ಹೊಂದಿರುವ ಕಾಸರಗೋಡಿನಲ್ಲಿ ನಾನಾ ವಿಷಯಗಳಲ್ಲಿ ಅಧ್ಯಯನ ನಡೆಸಲು ವಿಪುಲ ಅವಕಾಶಗಳಿವೆ. ಸಂಶೋಧನಾ ವಿದ್ಯಾರ್ಥಿಗಳನ್ನು ಬಳಸಿಕೊಂಡು ಇಲ್ಲಿನ ಸ್ಥಳನಾಮದ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಪ್ರಾಧ್ಯಾಪಕರು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತಾ ಎಸ್. ಸ್ವಾಗತಿಸಿದರು. ಡ. ಆಶಾಲತಾ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಬಾಲಕೃಷ್ಣ ಬಿ.ಎಂ ಹೊಸಂಗಡಿ ವಂದಿಸಿದರು. ಈ ಸಂದರ್ಭ ವಿವಿಧ ಗೋಷ್ಠಿಗಳು ನಡೆಯಿತು. ಮೂರು ದಿವಸಗಳ ಕಾರ್ಯಾಗಾರ ನಡೆಯಲಿದೆ. ಬಹುಭಾಷಾ ಕವಿ ಸಂಗಮದಲ್ಲಿ ಕನ್ನಡ, ಮಲಯಾಳ, ತುಳು, ಬ್ಯಾರಿ, ಮರಾಟಿ, ಶಿವಳ್ಳಿ, ಹವ್ಯಕ, ಕರಾಡ, ಕೊಂಕಣಿ, ತಮಿಳು, ತೆಲುಗು ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಗಳ ನೂರಕ್ಕೂ ಹೆಚ್ಚು ಮಂದಿ ಕವಿಗಳು ಪಾಲ್ಗೊಳ್ಳುವರು.






