ಮುಳ್ಳೇರಿಯ: ಹೈನುಗಾರಿಕೆ ಅಭಿವೃದ್ಧಿ ಇಲಾಖೆ, ಕಾರಡ್ಕÀ ಬ್ಲಾಕ್ ಪಂಚಾಯತಿ, ವಿವಿಧ ಗ್ರಾ.ಪಂ.ಗಳು ಹಾಗೂ ಬ್ಲಾಕ್ ನ ವಿವಿಧ ಡೈರಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ಹೈನುಗಾರಿಕಾ ಸಮಾವೇಶ ನಡೆಯಿತು.
ಕರ್ಮಂತೋಡಿ ಕಾವೇರಿ ಆಡಿಟೋರಿಯಂನಲ್ಲಿ ನಡೆದ ಸಮಾರಂಭವನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹೈನುಗಾರಿಕೆ ಇಲಾಖೆ ಉಪನಿರ್ದೇಶಕ ಮಹೇಶ್ ನಾರಾಯಣನ್ ವರದಿ ಮಂಡಿಸಿದರು. ಸಮಾರಂಭದಲ್ಲಿ ಉತ್ತಮ ಹೈನುಗಾರರಿಗೆ ಸನ್ಮಾನ ಹಾಗೂ ಹೈನುಗಾರ ಸಂಘಗಳನ್ನು ಸನ್ಮಾನಿಸಲಾಯಿತು. ಜಾನುವಾರು ಪ್ರದರ್ಶನ, ಡೈರಿ ಪ್ರದರ್ಶನ, ಡೈರಿ ರಸಪ್ರಶ್ನೆ ಮತ್ತು ಡೈರಿ ಅಭಿವೃದ್ಧಿ ವಿಚಾರ ಸಂಕಿರಣವನ್ನು ಸಹ ನಡೆಸಲಾಯಿತು. ವಿವಿಧ ಪಂಚಾಯಿತಿ ಅಧ್ಯಕ್ಷರಾದ ಪಿ.ವಿ.ಮಿನಿ, ಎಂ.ಧನ್ಯ, ಹಮೀದ್ ಪೊಸವಳಿಕೆ, ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ತ್ರಿಸ್ಥರ ಪಂಚಾಯಿತಿ ಸದಸ್ಯರು, ಹಾಲು ಒಕ್ಕೂಟ ಪ್ರತಿನಿಧಿಗಳು, ಹೈನುಗಾರಿಕೆ ಇಲಾಖೆ ಅಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು. ಕಾರಡ್ಕ ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ಎಂ.ಕುಮಾರನ್ ನಾಯರ್ ಸ್ವಾಗತಿಸಿ, ಹೈನುಗಾರಿಕೆ ಅಭಿವೃದ್ದಿ ಅಧಿಕಾರಿ ಪಿ.ಸಿ.ಜಿಷ್ಣುಲಾಲ್ ವಂದಿಸಿದರು.
ಹಾಲುತ್ಪಾದಕರ ಸಂಗಮ
0
ಅಕ್ಟೋಬರ್ 16, 2022
Tags




-KSHEERA%20SANGAMAM%20INAUG.jpeg)
