HEALTH TIPS

ತುಳು ಲಿಪಿ ದಿನಾಚರಣೆ: ಇಂದು ಪು.ವೆಂ.ಪು ನೆಂಪು-ತುಳುರತ್ನ ಡಾ. ವೆಂಕಡರಾಜ ಪುಣಿಂಚಿತ್ತಾಯ ಸಂಸ್ಮರಣೆ



        ಕಾಸರಗೋಡು: ತುಳು ವಲ್ರ್ಡ್(ರಿ)ಮಂಗಳೂರು ಮತ್ತು ಪುವೆಂಪು-ನೆಂಪು ಸಮಿತಿ 2022 ಇವುಗಳ ಜಂಟಿ ಸಹಯೋಗದೊಂದಿಗೆ ತುಳುರತ್ನ ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಸಂಸ್ಮರಣೆ, ತುಳು ಲಿಪಿ ದಿನಾಚರಣೆ ಕಾರ್ಯಕ್ರಮ ಅ. 10ರಂದು ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿರುವುದಾಗಿ ತುಳು ವಲ್ರ್ಡ್ ಕಾಸರಗೋಡು ಸಂಚಾಲಕ ಭಾಸ್ಕರ ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
            ಇಂದು ಬೆಳಗ್ಗೆ 9ಕ್ಕೆ ಧಾರ್ಮಿಕ, ಸಾಮಾಜಿಕ ಮುಂದಾಳು ಕುಂಟಾರು ರವೀಶ ತಂತ್ರಿ ಅವರು ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ(ಪು.ವೆಂ.ಪು)ಅವರ ಭಾವಚಿತ್ರ ಅನಾವರಣಗೊಳಿಸುವರು. ತುಳು ಲಿಪಿ ಫಲಕ ಅನಾವರಣ, ಪಾಡ್ದನ ಸುಗಿಪು ನಡೆಯಲಿರುವುದು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸರ್ವೋತ್ತಮ ಶೆಟ್ಟಿ ಅಬುದಾಬಿ ಉದ್ಘಾಟಿಸುವರು. ಡಾ. ವಸಂತ ಕುಮಾರ್ ಪೆರ್ಲ ಮತ್ತು ರಾಧಾಕೃಷ್ಣ ಉಳಿಯತ್ತಡ್ಕ ಪುವೆಂಪು ಸಂಸ್ಮರಣೆ ನಡೆಸುವರು.
            ಮಧ್ಯಾಹ್ನ 12ರಿಂದ ಪು.ವೆಂಪು ವಿರಚಿತ ಚತುರ್ಭಾಷಾ ಕವಿಗೋಷ್ಠಿ ನಡೆಯುವುದು.ಮಧ್ಯಾಹ್ನ 1ಗಮಟೆಗೆ ಶಾಲಾ ಮಕ್ಕಳಿಂದ ನಾಟಕ ಪ್ರದರ್ಶನ, 1.30ಕ್ಕೆ ಯಕ್ಷ-ಗಾನ-ವೈಭವ, 2ಗಂಟೆಗೆ ಪು.ವೆಂಪು ನೆಂಪು ವಿಚಾರಗೋಷ್ಠಿ ನಡೆಯುವುದು. ಸಂಜೆ 4ಕ್ಕೆ ನಡೆಯುವ ಪು.ವೆಂ.ಪು ಸಮ್ಮಾನ್ ಮತ್ತು ಸಮಾರೋಪ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಅವರಿಗೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಪುವೆಂಪು ಸಮ್ಮಾನ್ ಪ್ರದಾನ ಮಾಡುವರು. ಜನಪ್ರತಿನಿಧಿಗಳು, ವಿವಿಧ ಸಂಘಟನೆ ಪದಾಧಿಕಾರಿಗಳು ಪಾಲ್ಗೊಳ್ಳುವರು. ಸಂಜೆ 5ರಿಂದ ಕ್ಯಾತ ಗಾಯಕರಿಂದ ಪದರಂಗಿತ 'ಪುವೆಂಪು ನೂತ್ತೊಂಜಿ ನೆಂಪು', 7ಕ್ಕೆ ಪು.ವೆಂ.ಪು ಅವರಿಗೆ ನೃತ್ಯ ಅರ್ಪಣೆ ಕಾರ್ಯಕ್ರಮದಲ್ಲಿ ಡಾ. ರಾಧಿಕಾ ಕಲ್ಲೂರಾಯ ಬೆಂಗಳೂರು ಅವರಿಂದ ನೃತ್ಯ ಕಾರ್ಯಕ್ರಮ ನಡೆಯುವುದಾಗಿ ತಿಳಿಸಿದರು.
               ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ, ಎ.ಶ್ರೀನಾಥ್, ಕನ್ವೀನರ್ ಬಿ.ಪಿ ಶೇಣಿ, ಜೈ ತುಳುನಡ್ ಸಂಘಟನೆಯ ಹರಿಕಾಂತ್ ಕಾಸರಗೋಡು, ಪತ್ರಕರ್ತ ರವಿ ನಾಯ್ಕಾಪು ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries