HEALTH TIPS

ಸಿಎ ರವೂಫ್ ನನ್ನು ವಶಕ್ಕೆ ಪಡೆದ ಎನ್.ಐ.ಎ.


               ಕೊಚ್ಚಿ: ನಿಷೇಧಿತ ಧಾರ್ಮಿಕ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್‍ನ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ನನ್ನು ಎನ್‍ಐಎ ವಶಕ್ಕೆ ತೆಗೆದುಕೊಂಡಿದೆ.
          ರೌಫ್‍ನನ್ನು ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯ ಶನಿವಾರ ಸಂಜೆಯವರೆಗೆ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆಯ ಮೂಲಕ ಈ ಹಿಂದೆ ತಲೆಮರೆಸಿಕೊಂಡ ಚಟುವಟಿಕೆಗಳು ಹಾಗೂ ಸಂಘಟನೆಗೆ ಸಂಬಂಧಿಸಿದ ಇನ್ನಷ್ಟು ಭಯೋತ್ಪಾದನಾ ಚಟುವಟಿಕೆಗಳನ್ನು ಹೊರತರಬಹುದು ಎಂದು ಎನ್ ಐಎ ತಂಡ ಆಶಿಸುತ್ತಿದೆ. ಪಾಲಕ್ಕಾಡ್‍ನ ಆರ್‍ಎಸ್‍ಎಸ್‍ನ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸ್ ಹತ್ಯೆಯಲ್ಲಿ ರವೂಫ್ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಈ ಹಿಂದೆಯೇ ಹೊರಬಿದ್ದಿತ್ತು.
          ಎನ್‍ಐಎ ಆರು ದಿನಗಳ ಕಸ್ಟಡಿಗೆ ಕೇಳಿತ್ತು. ಗುರುವಾರ ಮಧ್ಯರಾತ್ರಿ ಕೊಚ್ಚಿಯಿಂದ ಬಂದ ಎನ್‍ಐಎ ತಂಡ ಪಟ್ಟಾಂಬಿಯ ಮನೆಯನ್ನು ಸುತ್ತುವರಿದು ರೌಫ್‍ನನ್ನು ಬಂಧಿಸಿದೆ. ಪಾಪ್ಯುಲರ್ ಫ್ರಂಟ್ ಬ್ಯಾನ್ ಆದ ಬಳಿಕ ತಲೆಮರೆಸಿಕೊಂಡಿದ್ದ ರವೂಫ್ ತವರಿಗೆ ಮರಳಿರುವುದು ಎನ್ ಐಎ ತಂಡಕ್ಕೆ ತಿಳಿದು ಬಂತು. ಪಿಎಫ್‍ಐನ ಅಕ್ರಮ ವಿದೇಶಿ ಹಣಕಾಸು ವಹಿವಾಟಿನ ನಿಯಂತ್ರಣವೂ ಸಿಎ ರವೂಫ್ ನ ಮೇಲಿದೆ.  ರವೂಫ್ ನನ್ನು ವಿಚಾರಣೆ ನಡೆಸುವುದರಿಂದ ಪಾಪ್ಯುಲರ್ ಫ್ರಂಟ್ ನ ಹಣಕಾಸು ಸಂಪನ್ಮೂಲಗಳ ಬಗ್ಗೆಯೂ ನಿಖರ ಮಾಹಿತಿ ದೊರೆಯಲಿದೆ
          ಈ ಹಿಂದೆ ದೇಶದ್ರೋಹ ಪ್ರಕರಣದಲ್ಲಿ ಹನ್ನೆರಡು ಆರೋಪಿಗಳನ್ನು ಎನ್‍ಐಐ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ರೌಫ್ ನೀಡಿದ ಕೆಲವು ಮಾಹಿತಿಯ ಆಧಾರದ ಮೇಲೆ ಈಗ ತನಿಖೆ ಪ್ರಗತಿಯಲ್ಲಿದೆ. ಅಗತ್ಯ ಬಿದ್ದರೆ ಈ ಹಿಂದೆ ಬಂಧಿತರಾಗಿರುವ ನಾಯಕರನ್ನು ಮತ್ತೊಮ್ಮೆ ವಿಚಾರಣೆ ನಡೆಸಬಹುದು.
                  ಶ್ರೀನಿವಾಸ್ ಹತ್ಯೆಯ ಸಂಚಿನಲ್ಲಿ ರೌಫ್ ಪಾತ್ರವನ್ನು ಎನ್ಐಎ ಪತ್ತೆ ಮಾಡಿತ್ತು. ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿ ಪ್ರತಿದಾಳಿ ಹೆಸರಿನಲ್ಲಿ ಆರ್‍ಎಸ್‍ಎಸ್ ಮುಖಂಡರ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಕೂಡ ಸಂಚು


ರೂಪಿಸಿರುವುದು ಸ್ಪಷ್ಟವಾಗಿತ್ತು.
           ರೌಫ್ ನನ್ನು ನವೆಂಬರ್ 19 ರವರೆಗೆ ಎರ್ನಾಕುಳಂ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಉಳಿದ ಆರೋಪಿಗಳು ವಿಯೂರು ಹೈ ಸೆಕ್ಯುರಿಟಿ ಜೈಲಿನಲ್ಲಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries