HEALTH TIPS

ಭಾರತದಲ್ಲಿ ಎಚ್‍ಐವಿ ಸ್ವಯಂ ಪರೀಕ್ಷಾ ಕಿಟ್ ಶೀಘ್

 

               ಮುಂಬೈ: ಕೇವಲ 20 ನಿಮಿಷಗಳಲ್ಲಿ ಎಚ್‍ಐವಿ ಸ್ವಯಂ ಪರೀಕ್ಷೆ ನಡೆಸಿಕೊಳ್ಳುವ ಕಿಟ್ ಭಾರತದಲ್ಲಿ ಮುಂದಿನ ಡಿಸೆಂಬರ್ ವೇಳೆಗೆ ಲಭ್ಯವಾಗಲಿದೆ. ಈ ಪರೀಕ್ಷಾ ವಿಧಾನದ ಸ್ವೀಕಾರಾರ್ಹತೆ ಮತ್ತು ಕಾರ್ಯಸಾಧ್ಯತೆ ಬಗ್ಗೆ ಕಳೆದ ವಾರ ನಡೆಸಿದ ರಾಷ್ಟ್ರೀಯ ಸಮೀಕ್ಷೆಯೊಂದರಲ್ಲಿ, ಸ್ವಯಂ ಪರೀಕ್ಷಾ ಕಿಟ್‍ಗೆ ಸಮುದಾಯಗಳಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿದೆ.

                   ಈ ಸ್ವಯಂ ಪರೀಕ್ಷಾ ವಿಧಾನ ಎಚ್‍ಐವಿ ರೋಗನಿರ್ಣಯದಲ್ಲಿ ಮಹತ್ವದ ಹೆಜ್ಜೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ವೈರಸ್ ಪರೀಕ್ಷೆ ಮೂಲಕ ತಾವೇ ಎಚ್‍ಐವಿ ಸ್ಥಿತಿಯನ್ನು ಕಂಡುಕೊಳ್ಳಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡುವ ಜನರ ಸಂಖ್ಯೆ ವ್ಯಾಪಕವಾಗಿ ಹೆಚ್ಚಲಿದೆ ಎನ್ನುವುದು ತಜ್ಞರ ಅಭಿಮತ.

                 ಅತ್ಯಧಿಕ ಎಚ್‍ಐವಿ ಪ್ರಕರಣಗಳು ಇರುವ 14 ರಾಜ್ಯಗಳ 50 ಜಿಲ್ಲೆಗಳಲ್ಲಿ 93,500 ರೋಗಿಗಳನ್ನು ಸಂಪರ್ಕಿಸಿ ಈ ಅಧ್ಯಯನ ನಡೆಸಲಾಗಿತ್ತು. ಸ್ವಯಂ ಪರೀಕ್ಷಾ ಕಿಟ್‍ಗಳ ಸ್ವೀಕಾರಾರ್ಹತೆ ಶೇಕಡ 88ರಷ್ಟು ಆಗಿದ್ದು, ಸಮೀಕ್ಷೆಗೆ ಒಳಪಡಿಸಿದ ಕೆಲ ನಿರ್ದಿಷ್ಟ ವರ್ಗಗಳಲ್ಲಿ ಇದು ಶೇಖಡ 97ಕ್ಕಿಂತಲೂ ಅಧಿಕ. ಶೇಕಡ 95ರಷ್ಟು ಮಂದಿ ಈ ಪರೀಕ್ಷಾ ವಿಧಾನ ಸರಳ ಹಾಗೂ ಫಲಿತಾಂಶ ವಿಶ್ಲೇಷಿಸುವುದು ಸುಲಭ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇಕಡ 70ರಷ್ಟು ಮಂದಿ ಇಂಥ ಪರೀಕ್ಷಾ ಕಿಟ್ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

                    ಈ ಪರೀಕ್ಷಾ ವಿಧಾನದಲ್ಲಿ ವ್ಯಕ್ತಿ ತನ್ನದೇ ಸೆಲಿವಾ ಅಥವಾ ರಕ್ತದ ಮಾದರಿಯನ್ನು ಸಂಗ್ರಹಿಸಿಕೊಳ್ಳಬಹುದು ಮತ್ತು ಈ ತ್ವರಿತ ಪರೀಕ್ಷಾ ಕಿಟ್‍ನಲ್ಲಿ ಎಚ್‍ಐವಿ ಪರೀಕ್ಷೆ ನಡೆಸಬಹುದು. 20 ನಿಮಿಷಗಳಲ್ಲಿ ಫಲಿತಾಂಶ ಲಭ್ಯವಾಗುತ್ತದೆ. ಪ್ರಸ್ತುತ ಭಾರತದಲ್ಲಿ ಎಚ್‍ಐವಿ ಪರೀಕ್ಷೆ ಪ್ರಯೋಗಾಲಯ ಆಧರಿತವಾಗಿದೆ. ಸ್ವಯಂ ಪರೀಕ್ಷಾ ವಿಧಾನದ ಮೂಲಕ ಮನೆ ಅಥವಾ ಅನುಕೂಲಕರ ಎನಿಸುವ ಇತರ ಸ್ಥಳದಲ್ಲಿ ಪರೀಕ್ಷೆ ಮಾಡಿಕೊಳ್ಳಬಹುದು ಎಂದು ಈ ಬಗ್ಗೆ timesofindia.com ವರದಿ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries