HEALTH TIPS

ಹಲವೆಡೆ ಮೂರು ಹೆಸರುಗಳು: ಪತಿ ಪರಿತ್ಯಕ್ತ ಶೋಭನಾ ವಾಸಂತಿ ಅಮ್ಮಾಳ್ ಳ ಧೂರ್ತ ಮುಖಗಳು


          ಪತ್ತನಂತಿಟ್ಟ: ಪತ್ತನಂತಿಟ್ಟದ ಮಲಯಾಳಪುಳದಲ್ಲಿ ಪೋಲೀಸರಿಂದ ಬಂಧನಕ್ಕೊಳಗಾಗಿರುವ ಶೋಭನಾ (52) ಮಕ್ಕಳನ್ನು ಬಳಸಿಕೊಂಡು ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ಹಲವು ಹೆಸರುಗಳಿಂದ ಪರಿಚಿತರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಆಕೆ ಅನೇಕ ಸ್ಥಳಗಳಲ್ಲಿ ವಿವಿಧ ಹೆಸರಲ್ಲಿ ವಾಸಿಸುತ್ತಿದ್ದಳು.
           ವಾಮಾಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾಳೆ ಎಂಬ ಸ್ಥಳೀಯರ ದೂರಿನ ಮೇರೆಗೆ ವಸಂತಿ ಮಠದ ಶೋಭನಾ ಅವರನ್ನು ಮಲಯಾಳಪುಳದ ಅವರ ಮನೆಯಿಂದ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯನ್ನು ಬಂಧಿಸದೆ ದಿಗ್ಬಂಧನದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದರು. ಪೋಲೀಸ್ ಬಳಿಕ ಕ್ರಮ ಕೈಗೊಂಡಿತು. ಇಳಂತೂರಿನಲ್ಲಿ ನರಬಲಿ ಸುದ್ದಿ ಹೊರಬಿದ್ದ ಬೆನ್ನಲ್ಲೇ ಯುವ ಸಂಘಟನೆಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆಗೆ ಮುಂದಾದರು.
             ಶೋಭನಾ ವಿವಿಧೆಡೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. 15 ವರ್ಷಗಳ ಹಿಂದೆ ಶೋಭನಾ ಅವರ ಪತಿ ಮತ್ತು ಇಬ್ಬರು ಮಕ್ಕಳಿದ್ದ ಕುಟುಂಬ ಮೆಜುವೇಲಿ ಪತ್ತಿಶೇರಿ ಪೇಟೆ ಬಳಿ ಮನೆ ಖರೀದಿಸಿ ವಾಸ ಆರಂಭಿಸಿದ್ದರು. ಮೊದಲಿಗೆ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಶೋಭನಾ ಅವರ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಿದ್ದರು. ಬಳಿಕ ಪತ್ನಿಯನ್ನು ತೊರೆದು ಮನೆಯನ್ನು ಮಾರಿ ಮಕ್ಕಳನ್ನು ಕರೆದುಕೊಂಡು ಪತಿ  ವಿದೇಶಕ್ಕೆ ತೆರಳಿದ್ದು ನಂತರ ಶೋಭನಾ ಕೂಡ ಹುಟ್ಟೂರು ಕುಂಬಳಕ್ಕೆ ತೆರಳಿದ್ದರು.(ಗಮನಿಸಿ ಕುಂಬಳೆ ಅಲ್ಲ…ಪತ್ತನಂತಿಟ್ಟದ ಕುಂಬಳಂ)
            ಕುಂಬಳಂ ಗೆ ಆಗಮಿಸಿದ ಶೋಭನಾ ಮೊದಲು ಜ್ಯೋತಿಷ್ಯ ಕ್ಷೇತ್ರಕ್ಕೆ ಹಾಗೂ ನಂತರ ವಾಮಾಚಾರಕ್ಕೆ ಯೋಜನೆ ರೂಪಿಸಿದ್ದಳು. ಕೊನ್ನಿ ಎಲಿಯಾರದಲ್ಲಿ ಆಶ್ರಮವನ್ನು ಸ್ಥಾಪಿಸಿದ ಶೋಭನಾ ಬಳಿಕ ವಾಸಂತಿ ಎಂದು ಮರುನಾಮಕರಣ ಮಾಡಿದಳು. ವಿವಿಧೆಡೆ ಏಜೆಂಟರನ್ನು ನಿಯೋಜಿಸಿ ಜನರನ್ನು ಆಶ್ರಮಕ್ಕೆ ಕರೆತರಲಾಗುತ್ತಿತ್ತು.  ಆದಾಯ ಹೆಚ್ಚಾದಂತೆ ವಾಸಂತಿ ಬಡ್ಡಿಗೆ ಹಣ ನೀಡಲು  ಆರಂಭಿಸಿ ಹಣ ವಾಪಸ್ ಪಡೆಯಲು ಗೂಂಡಾಗಳನ್ನು ನೇಮಿಸಿಕೊಂಡಿದ್ದಳು.
          ಈ ನಡುವೆ ಮನೆಯಲ್ಲಿ ‘ವಾಸಂತಿ ಮಠ’ ಶುರುವಾಗಿ ವಾಮಾಚಾರದಂತಹ ಆಚರಣೆಗಳೂ ಶುರುವಾದವು. ಮಂಗಳವಾರ ಮತ್ತು ಶುಕ್ರವಾರದಂದು ವಾಸಂತಿ ಮಠಕ್ಕೆ ಪ್ರವೇಶಿಸಲು ಜನರಿಗೆ ಅವಕಾಶ ನೀಡಲಾಯಿತು. ಮೆಜುವೇಲಿಯಲ್ಲಿ ವಸಂತಿ ಎಂದು ಕರೆಯಲ್ಪಡುತ್ತಿದ್ದ ಶೋಭನಾ, ಮಲಯಾಳಪುಳದಲ್ಲಿ ವಸಂತಿ ಅಮ್ಮಾಳ್ ಎಂದು ಕರೆಯಲ್ಪಡುತ್ತಿದ್ದಳು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries